News

ದೀಪಾವಳಿ ಹಬ್ಬಕ್ಕೆ ನ್ಯೂಯಾರ್ಕ್ ಮೇಯರ್ ಸಂದೇಶ, ಶ್ರೀರಾಮ-ಸೀತೆಯವರ ಆದೇಶದಂತೆ ಬಾಳೋಣ ಎಂದ ಮೇಯರ್…..!

ನ್ಯೂಯಾರ್ಕ್ ಸಿಟಿ ಮೇಯರ್‍ ಎರಿಕೆ ಆಡಮ್ಸ್ ದೀಪಾವಳಿ ಹಬ್ಬಕ್ಕೆ ಸಂದೇಶ ಸಾರಿದ್ದಾರೆ.  ದೀಪಾವಳಿ ಹಬ್ಬ ಕೇವಲ ಹಬ್ಬ ಮಾತ್ರವಲ್ಲ. ಎಲ್ಲರಲ್ಲಿರುವ ಕತ್ತಲನ್ನು ದೂರ ಮಾಡಿ ಅವರಲ್ಲಿ ಬೆಳಕನ್ನು ತರವುದೇ ದೀಪಾವಳಿ ಹಬ್ಬದ ಸಾರಾಂಶ. ನಾವೆಲ್ಲರೂ ಭಗವಾನ್ ಶ್ರೀರಾಮ, ಸೀತಾದೇವಿ ಹಾಗೂ ಮಹಾತ್ಮ ಗಾಂಧಿಯವರ ಆಶಯವನ್ನು ಅಳವಡಿಸಿಕೊಂಡು ಉತ್ತಮ ಮಾನವರಾಗೋಣ ಎಂದು ಸಂದೇಶ ಸಾರಿದ್ದಾರೆ.

ನ್ಯೂಯಾರ್ಕ್ ಮೇಯರ್‍ ಎರಿಕ್ ಆಡಮ್ಸ್ ಅವರ ನ್ಯೂಯಾರ್ಕ್ ನಿವಾಸದ ಗ್ರೇಸಿ ಮ್ಯಾನ್ಷನ್ ನಲ್ಲಿ ಆಯೋಜಿಸಿದ್ದ ವಾರ್ಷಿಕ ದೀಪಾವಳಿ ಸಂಭ್ರಮದಲ್ಲಿ ಅವರು ಈ ಸಂದೇಶ ಸಾರಿದ್ದಾರೆ.  ಭಾರತೀಯ ಅಮೇರಿಕನ್ ಮತ್ತು ದಕ್ಷಿಣ ಏಷ್ಯಾಗೆ ಸೇರಿದ ನೂರಾರು ಸದಸ್ಯರು ಹಾಗೂ ಇತರೇ ರಾಷ್ಟ್ರಗಳ ಜನರು, ಸರ್ಕಾರಿ ಅಧಿಕಾರಿಗಳಿಂದ ವಲಸೆ ಬಂದವರು ಈ ಸಂಭ್ರಮದಲ್ಲಿ ಭಾಗವಹಿಸಿದ್ದರು. ದೀಪಾವಳಿ ಹಬ್ಬವು ಮೇಣದ ಬತ್ತಿ ಅಥವಾ ಎಣ್ಣೆಯನ್ನು ಬೆಳಗಿಸುವುದು ಮಾತ್ರವಲ್ಲ. ನಮ್ಮ ಜೀವನವನ್ನು ಬೆಳಗಿಸುವಂತಹ ಹಬ್ಬವಾಗಿದೆ. ನಾವು ಪ್ರತಿನಿತ್ಯ ಕತ್ತಲೆಯನ್ನೇ ಕಾಣುತ್ತಿದ್ದೇವೆ, ನಾವು ನಿಜವಾಗಿಯೂ ರಾಮಾಯಣದ ಜೀವನವನ್ನು ನಂಬಿದರೇ, ಸೀತೆಯ ಜೀವನವನ್ನು ನಿಜವಾಗಿಯೂ ನಂಬಿದರೇ, ಗಾಂಧಿಜೀಯವರ ಜೀವನ ತತ್ವವನ್ನು ಅಳವಡಿಸಿಕೊಂಡು ನಾವು ಸಾಗಬೇಕು. ಅವನ್ನು ನಾವು ಸಹ ಜೀವನದಲ್ಲಿ ಅಳವಡಿಸಿಕೊಂಡು ಪಾಲನೆ ಮಾಡಬೇಕು ಎಂದು ಹೇಳಿದ್ದಾರೆ.

ನಾವು ಉತ್ತಮ ಮನುಷ್ಯರಾಗೋಣ, ದೀಪಾವಳಿಯ ಉತ್ಸಾಹದಲ್ಲಿ ಬದುಕೋಣ, ಗಾಂಧೀಜಿಯವರ ಉತ್ಸಾಹದಲ್ಲಿ ಬದುಕೋಣ, ಸೀತೆಯ ಆತ್ಮದಲ್ಲಿ ಬದುಕೊಣ, ರಾಮನ ಆತ್ಮದಲ್ಲಿ ಬದುಕೊಣ ಆಗ ಈ ರಜಾ ದಿನಕ್ಕೆ ನಿಜವಾದ ಅರ್ಥ ಬರುತ್ತದೆ. ಇನ್ನೂ ನ್ಯೂಯಾರ್ಕ್ ನಗರದಲ್ಲಿ ದೀಪಾವಳಿಯನ್ನು ಶಾಲಾ ರಜೆಯನ್ನಾಗಿ ಮಾಡಲು ನೇತೃತ್ವ ವಹಿಸಿದ್ದ ನ್ಯೂಯಾರ್ಕ್ ಸ್ಟೇಟ್ ಅಸೆಂಬ್ಲಿ ಮಹಿಳೆ ಜೆನಿಫರ್‍ ರಾಜ್ ಕುಮಾರ್‍ ಮಾತನಾಡಿ ಭಾರತೀಯ-ಅಮೇರಿಕನ್ ಸಮುದಾಯವು ಈಗಿನಷ್ಟು ಶಕ್ತಿಶಾಲಿ ಈ ಹಿಂದೆ ಇರಲಿಲ್ಲ. ನಾವು ಈಗ ನ್ಯೂಯಾರ್ಕ್‌ನಲ್ಲಿ ಅಧಿಕಾರಕ್ಕೆ ಬಂದಿದ್ದೇವೆ. ಗಾಂಧೀಜಿಯವರಿಂದ ಪ್ರೇರಿತರಾದ ಮಾರ್ಟಿನ್ ಲೂಥರ್‍ ಕಿಂಗ್ ಜೂನಿಯರ್‍ ರವರ ಸಂಸ್ಕೃತಿಯಾಗಿದೆ ಎಂದು ಹೇಳಿದ್ದಾರೆ.

Most Popular

To Top