ಮನೆಯಲ್ಲೊಂದು ಕಾರಿದ್ದರೇ ನಿಮ್ಮ ಬಿಪಿಎಲ್ ಕಾರ್ಡ್ ರದ್ದು, ಹಿಂಟ್ ಕೊಟ್ಟ ಆಹಾರ ಸಚಿವ ಮುನಿಯಪ್ಪ….!

Follow Us :

ಕರ್ನಾಟಕ ರಾಜ್ಯದ ನೂತನ ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬರುವ ಮುಂಚೆ ಅಂದರೇ ಚುನಾವಣೆ ಸಮಯದಲ್ಲಿ ಐದು ಗ್ಯಾರಂಟಿಗಳನ್ನು ಘೋಷಣೆ ಮಾಡಿದ್ದರು. ಇದೀಗ ಒಂದರ ಬಳಿಕ ಒಂದರಂತೆ ಗ್ಯಾರಂಟಿಗಳನ್ನು ಈಡೇರಿಸುತ್ತಾ ಬರುತ್ತಿದೆ. ಅನ್ನಭಾಗ್ಯ ಯೋಜನೆಯಡಿ ವ್ಯಕ್ತಿಯೊಬ್ಬರಿಗೆ 10 ಕೆಜಿ ಅಕ್ಕಿ ನೀಡುವ ಘೋಷಣೆ ಸಹ ಇದ್ದು, ಅಕ್ಕಿ ಅಭಾವದಿಂದ ಹಣವನ್ನು ಪಡಿತದಾರರಿಗೆ ನೀಡಲಾಗುತ್ತಿತ್ತು. ಇದೀಗ ಸೆಪ್ಟೆಂಬರ್‍ ಮಾಹೆಯಿಂದ ಅಕ್ಕಿ ವಿತರಣೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈ ನಡುವೆ ಸ್ವಂತ ಕಾರು ಇರುವಂತಹ ಕುಟುಂಬಕ್ಕೆ ಬಿಪಿಎಲ್ ಕಾರ್ಡ್ ರದ್ದು ಮಾಡುವ ಸುಳಿವನ್ನು ಆಹಾರ ಸಚಿವ ಮುನಿಯಪ್ಪ ನೀಡಿದ್ದಾರೆ.

ಇನ್ನೂ ಈ ಬಗ್ಗೆ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಕೆ.ಹೆಚ್.ಮುನಿಯಪ್ಪ ರವರು ಅನ್ನಭಾಗ್ಯ ಯೋಜನೆ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಚುನಾವಣೆಯ ಸಮಯದಲ್ಲಿ ಘೊಷಣೆ ಮಾಡಿದಂತೆ ಈ ಗ್ಯಾರಂಟಿ ಜಾರಿಗೊಳಿಸಲು ಸಿದ್ದತೆ ನಡೆಯುತ್ತಿದೆ. ಅನ್ನಭಾಗ್ಯ ಯೋಜನೆಯಡಿ ಪಡಿತರ ಚೀಟಿಯಲ್ಲಿರುವ ಒಬ್ಬ ವ್ಯಕ್ತಿಗೆ ಹತ್ತು ಕೆಜಿ ಅಕ್ಕಿ ನೀಡುವ ಯೋಜನೆ ಇದಾಗಿತ್ತು. ಅಕ್ಕಿ ಅಭಾವದಿಂದ ಐದು ಕೆಜಿ ಅಕ್ಕಿ ನೀಡಿ ಉಳಿದ ಐದು ಕೆಜಿ ಅಕ್ಕಿ ಬದಲಿಗೆ ಹಣ ನೀಡಲು ತೀರ್ಮಾನ ತೆಗೆದುಕೊಳ್ಳಲಾಗಿತ್ತು. ಅದರಂತೆ ಜುಲೈ ಮಾಹೆಯಲ್ಲಿ 1 ಕೋಟಿ 28 ಲಕ್ಷ ಕುಟುಂಬಗಳಿಗೆ ಒಟ್ಟು 566 ಕೋಟಿ ಹಣ ಸಂದಾಯ ಮಾಡಲಾಗಿದೆ. ಬ್ಯಾಂಕ್ ಖಾತೆ ಹಾಗೂ ಆಧಾರ್‍ ಕಾರ್ಡ್ ಜೋಡನೆಯಾಗದ ಹಾಗೂ ಅನರ್ಹ ಪಡಿತರ ಚೀಟಿಗಳಿಗೆ ಮಾತ್ರ ಹಣ ಸಂದಾಯ ಮಾಡಲು ಆಗಲಿಲ್ಲ ಎಂದಿದ್ದಾರೆ.

ಇನ್ನೂ ಅನ್ನಭಾಗ್ಯ ಯೋಜನೆಗೆ ಅಕ್ಕಿ ಕೊಡಲು ಆಂಧ್ರಪ್ರದೇಶ ಹಾಗೂ ತಮಿಳು ನಾಡು ಸರ್ಕಾರ ಮುಂದೆ ಬಂದಿದೆ. ದರ ಜಾಸ್ತಿ ಆದರೆ ಖರೀದಿ ಕಷ್ಟವಾಗಬಹುದು. ಸೆಪ್ಟೆಂಬರ್‍ ಮಾಹೆಯಿಂದ ಅಕ್ಕಿ ಪೂರೈಕೆ ಮಾಡಲು ತೀರ್ಮಾನ ಮಾಡಿದ್ದೇವೆ.  ಅಕ್ಕಿ ಪೂರೈಕೆ ಆಗದೇ ಇದ್ದರೇ ಮತ್ತೆ ಎರಡು ಮೂರು ತಿಂಗಳು ವಿಳಂಬ ಆಗಲಿದೆ. ಆದರೆ ಅಕ್ಕಿ ಬದಲಿಗೆ ಹಣ ವನ್ನು ಈ ಹಿಂದೆ ತೀರ್ಮಾನದಂತೆ ಖಾತೆಗಳಿಗೆ ಜಮೆ ಮಾಡುತ್ತೇವೆ. ಇನ್ನೂ ಹೊಸ ಪಡಿತರ ಚೀಟಿ ವಿತರಣೆಗೆ ಸಹ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಹೊಸ ಕಾರ್ಡ್, ಸೇರ್ಪಡೆ, ತಿದ್ದುಪಡಿ, ಸೇರ್ಪಡೆಗೆ ಅವಕಾಶ ನೀಡುತ್ತೇವೆ ಎಂದು ತಿಳಿಸಿದ್ದಾರೆ.

ಇನ್ನೂ ಕಾರು ಇರುವಂತಹ ಕುಟುಂಬಗಳ ಬಿಪಿಎಲ್ ಕಾರ್ಡ್ ರದ್ದು ಬಗ್ಗೆ ಸಹ ಆಹಾರ ಸಚಿವರು ಮಾತನಾಡಿದ್ದಾರೆ. ಒಂದು ವೇಳೆ ಎಲ್ಲೋ ಬೋರ್ಡ್ ಕಾರು ಹೊಂದಿರುವ ಕುಟುಂಬಗಳ ಬಿಪಿಎಲ್ ಕಾರ್ಡ್ ರದ್ದಾಗಿದ್ದಾರೆ ಅದನ್ನು ವಾಪಸ್ಸು ಪಡೆಯುವ ನಿರ್ಧಾರ ತೆಗೆದುಕೊಳ್ಳುತ್ತೇಔಎ. ಆದರೆ ವೈಟ್ ಬೋರ್ಡ್ ಕಾರು ಇರುವಂತಹ ಬಿಪಿಎಲ್ ಪಡಿತರ ಚೀಟಿಯನ್ನು ರದ್ದು ವಾಪಸ್ಸು ಪಡೆದುಕೊಳ್ಳುವುದಿಲ್ಲ ಎಂದು ಆರೋಗ್ಯ ಸಚಿವರು ಸುಳಿವು ನೀಡಿದ್ದಾರೆ.