ಮಾಂಸ ತಿಂದು ಸುತ್ತೂರು ಮಠಕ್ಕೆ ಹೋದ್ರಾ ಎಂದರೇ, ಸಿದ್ದರಾಮಯ್ಯ ರಿಯಾಕ್ಷನ್ ಏನು ಗೊತ್ತಾ?

Follow Us :

ಕೇಂದ್ರ ಸರ್ಕಾರದ ವಿರುದ್ದ ದೆಹಲಿಯಲ್ಲಿ ಕರ್ನಾಟಕ ಕಾಂಗ್ರೇಸ್ ಸರ್ಕಾರದ ವತಿಯಿಂದ ಹಮ್ಮಿಕೊಂಡಿದ್ದ ನನ್ನ ತೆರಿಗೆ ನನ್ನ ಹಕ್ಕು, ಚಲೋ ದಿಲ್ಲಿ ಎಂಬ ಕಾರ್ಯಕ್ರಮದಲ್ಲಿ ರಾಜ್ಯದ ಬಹುತೇಕ ಎಲ್ಲಾ ಸಚಿವರು, ಶಾಸಕರು ಭಾಗಿಯಾಗಿದ್ದರು. ಈ ಹೋರಾಟದ ಬಳಿಕ ಸಿದ್ದರಾಮಯ್ಯ ನೇರವಾಗಿ ಸುತ್ತೂರು ಮಠದ ಜಾತ್ರಾ ಮಹೋತ್ಸವಕ್ಕೆ ಬಂದಿದ್ದರು. ದೆಹಲಿಯಲ್ಲಿ ಹೋರಾಟದ ಬಳಿಕ ಭರ್ಜರಿ ಬಾಡೂಟ ಸೇವಿಸಿದ್ದರು. ಮಾಂಸ ಸೇವಿಸಿ ಸುತ್ತೂರು ಮಠಕ್ಕೆ ಹೋಗಿದ್ದೀರಾ ಎಂಬ ಪ್ರಶ್ನೆ ಮಾದ್ಯಮಗಳಿಂದ ಎದುರಾಗಿದ್ದು, ಅದಕ್ಕೆ ಸಿದ್ದರಾಮಯ್ಯ ಸ್ಟ್ರಾಂಗ್ ಆಗಿ ರಿಯಾಕ್ಟ್ ಆಗಿದ್ದಾರೆ.

ಬೆಂಗಳೂರಿನಲ್ಲಿ ಸಚಿವ ಸಂಪುಟ ಸಭೆಗೆ ಹೋಗುವುದಕ್ಕೂ ಮುನ್ನಾ ಸಿದ್ದರಾಮಯ್ಯ ರವರು ಮಾದ್ಯಮಗಳೊಂದಿಗೆ ಮಾತನಾಡಿದ್ದರು. ಈ ವೇಳೆ ಪತ್ರಕರ್ತರು ಸುತ್ತೂರು ಮಠಕ್ಕೆ ಮಾಂಸ ತಿಂದು ಹೋದ್ರಾ ಎಂದು ಕೇಳಿದ್ದಾರೆ. ಅದಕ್ಕೆ ರಿಯಾಕ್ಟ್ ಆದ ಸಿದ್ದರಾಮಯ್ಯ ಡೋಂಟ್ ಆಸ್ಕ್ ಸಿಲ್ಲಿ ಕ್ವಶ್ಚನ್ಸ್ ಎಂದು ಫೈರ್‍ ಆಗಿದ್ದಾರೆ. ಊಟ ಮಾಡೋದು, ತಿಂಡಿ ತಿನ್ನೋದು, ಬಟ್ಟೆ ಹಾಕೋದು ಅದರ ಬಗ್ಗೆ ಎಲ್ಲಾ ಮಾತಾಡೋಕ್ಕೆ ಆಗುತ್ತಾ, ಬಡವರ ಸಮಸ್ಯೆ, ನಿರುದ್ಯೋಗ ಸಮಸ್ಯೆಗಳಿವೆಯಲ್ಲ. ಅವುಗಳ ಬಗ್ಗೆ ಮಾತಾಡೋನ ಅದನ್ನು ಬಿಟ್ಟು ಅಂತಹ ಸಿಲ್ಲಿ ಕ್ವಶ್ಚನ್ಸ್ ಕೇಳಬೇಡಿ ಎಂದು ಮಾದ್ಯಮದವರ ಮೇಲೆ ಫೈರ್‍ ಆಗಿದ್ದಾರೆ.

ಇನ್ನೂ ಅನುದಾನದ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ ನರೇಂದ್ರ ಮೋದಿ ಸರ್ಕಾರದ ವಿರುದ್ದ ಕಿಡಿ ಕಾರಿದ್ದಾರೆ. ನರೇಂದ್ರ ಮೋದಿ ಸಿಎಂ ಆಗಿದ್ದಾಗ ಏನು ಹೇಳಿದ್ರು ಗೊತ್ತಾ, ನರೇಂದ್ರ ಮೋದಿ ಸಿಎಂ ಆಗಿದ್ದಾಗ ತೆರಿಗೆ ಹಣ ಕಡಿಮೆ ಕೊಟ್ಟಾಗ ನಾವು ಬೆಗ್ಗರ್‍ ಗಳಾ ಎಂದು ಕೇಳಿದ್ದರು. ಗುಜರಾತ್ ಸಿಎಂ ಆಗಿದ್ದಾಗ ಒಂದು ನಾಲಿಗೆ, ಈಗ ಒಂದು ನಾಲಿಗೆಯಾ? ನಾವು ನಮ್ಮ ಪಾಲಿನ ತೆರಿಗೆ ಅನುದಾನ ಕೇಳಿದ್ರೇ ದೇಶ ವಿಭಜನೆ ಅಂತಾರೆ. ನಾವು ನೂರು ರೂಪಾಯಿ ತೆರಿಗೆ ಸಂಗ್ರಹಿಸಿ ಕೊಟ್ಟರೇ ಕೇಂದ್ರ ನಮಗೆ ಕೇವಲ 13 ಮಾತ್ರ ವಾಪಸ್ ಕೊಡುತ್ತಾರೆ. ಇದು ಅನ್ಯಾಯವಲ್ಲವೇ, ಇದನ್ನೆಲ್ಲಾ ನೋಡಿದರೇ ನಿಮಗೆ ಸಿಟ್ಟು ಬರೊಲ್ಲವೇ ಎಂದು ಪ್ರಶ್ನಿಸಿ ಕಿಡಿಕಾರಿದ್ದಾರೆ.