News

ಹಾಸನದಿಂದ ಜೀರೋ ಟ್ರಾಫಿಕ್ ಮೂಲಕ ಬಂದರೂ ಉಳಿಯದ ಕಂದಮ್ಮ, ಚಿಕಿತ್ಸೆ ವಿಳಂಬಕ್ಕೆ ಪೋಷಕರ ಆಕ್ರೋಷ….!

ಒಂದು ವರ್ಷದ ಮಗು ಹತ್ತು ಅಡಿ ಎತ್ತರದಿಂದ ನೆಲಕ್ಕೆ ಬಿದ್ದು ಗಂಭೀರವಾಗಿ ಗಾಯಗೊಂಡಿತ್ತು. ಈ ಮಗುವನ್ನು ಹಾಸನದಿಂದ ಜೀರೋ ಟ್ರಾಫಿಕ್ ಮೂಲಕ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ಕರೆದುಕೊಂಡ ಬರಲಾಗಿತ್ತು. ಆದರೆ ಅಲ್ಲಿ ವೈದ್ಯರ ನಿರ್ಲಕ್ಷ್ಯದ ಕಾರಣದ ಮಗು ಮೃತಪಟ್ಟಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ, ಜೊತೆಗೆ ಆಸ್ಪತ್ರೆಯ ಆಡಳಿತ ಮಂಡಳಿ ವಿರುದ್ದ ಆಕ್ರೋಷ ಹೊರಹಾಕಿದ್ದಾರೆ.

ತಾಯಿಯ ಕೈಯಿಂದ 1 ವರ್ಷದ ಮಗು 10 ಅಡಿ ಮೇಲಿಂದ ಜಾರಿ ಕೆಳಗೆ ಬಿದಿದ್ದತ್ತು. ಈ ಕಾರಣದಿಂದ ಮಗು ತಲೆಗೆ ತೀವ್ರವಾದ ಗಾಯವಾಗಿ ಅಸ್ವಸ್ಥವಾಗಿತ್ತು. ತಮ್ಮ ಮಗುವನ್ನು ಉಳಿಸಿಕೊಳ್ಳಲು ಪೋಷಕರು ಹಾಸನದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ನಿಮಾನ್ಸ್ ಗೆ ಹೋಗುವಂತೆ ಅಲ್ಲಿನ ವೈದ್ಯರು ತಿಳಿಸಿದ್ದು, ಕೂಡಲೇ ಮಗುವನ್ನು ಜೀರೋ ಟ್ರಾಫಿಕ್ ನಲ್ಲಿ ನಿಮಾನ್ಸ್ ಗೆ ಕೊಂಡೊಯ್ದರು. ಜೊತೆಗೆ ಹಾಸನದ ಸರ್ಕಾರಿ ವೈದ್ಯರು ಆಸ್ಪತ್ರೆಯಲ್ಲಿ ಬೆಡ್ ಕಾಯ್ಡಿರಿಸುವಂತೆ ನಿಮಾನ್ಸ್ ಆಡಳಿತ ಮಂಡಳಿಗೆ ತಿಳಿಸಿದ್ದರು ಎನ್ನಲಾಗಿದೆ. ಇನ್ನೂ 1 ಗಂಟೆ 40 ನಿಮಿಷದಲ್ಲೇ ಆಂಬ್ಯುಲೆನ್ಸ್ ನಿಮಾನ್ಸ್ ತಲುಪಿತ್ತು. ಆದರೆ ಬೆಡ್ ಖಾಲಿಯಿಲ್ಲ ಎಂದು ಆಡಳಿತ ಮಂಡಳಿ ಮಗುವನ್ನು ಆಸ್ಪತ್ರೆಯ ಆವರಣದಲ್ಲಿಯೇ ನಿಲ್ಲಿಸಿದೆ.

ಇನ್ನೂ ಮಗುವಿಗೆ ಪ್ರಾಥಮಿಕ ಚಿಕಿತ್ಸೆ ಸಹ ನೀಡದೇ ಸುಮಾರು ಅರ್ಧ ಗಂಟೆ ಅಂಬ್ಯುಲೆನ್ಸ್ ನಲ್ಲಿಯೇ ಮಗುವನ್ನು ಇರಿಸಲಾಗಿದ್ದು, ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೇ, ಮಗುವಿನಲ್ಲಿ ಆಮ್ಲಜನಕ ಪ್ರಮಾಣ ಕಡಿಮೆಯಾಗಿ ಮೃತಪಟ್ಟಿದೆ. ಮಗು ಮೃತಪಟ್ಟಿದ ವಿಚಾರ ತಿಳಿಯುತ್ತಿದ್ದಂತೆ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಜೊತೆಗೆ ಮಗುವಿಗೆ ಚಿಕಿತ್ಸೆ ನೀಡದ ಆಡಳಿತ ಮಂಡಳಿಯ ವಿರುದ್ದ ಪೋಷಕರು ಆಕ್ರೋಷ ಹೊರಹಾಕಿದ್ದಾರೆ. ಈ ನಡುವೆ ಪೊಲೀಸರು ಹಾಗೂ ಅಂಬ್ಯುಲೆನ್ಸ್ ಚಾಲಕರ ನಡುವೆ ಸಹ ವಾಗ್ವಾದ ನಡೆದಿದೆ ಎನ್ನಲಾಗಿದೆ.

Most Popular

To Top