News

ಜ್ಞಾನವಾಪಿ ಮಸೀದಿ ನಿರ್ಮಾಣಕ್ಕೂ ಮುನ್ನಾ ಆ ಜಾಗದಲ್ಲಿ ಮಂದಿರವಿತ್ತು, ವರದಿ ಬಹಿರಂಗ……!

ವಾರಣಾಸಿಯ ಜ್ಞಾನವಾಪಿ ಮಸೀದಿ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮಹತ್ತರ ಸುದ್ದಿಯೊಂದು ಹೊರಬಂದಿದೆ. ಭಾರತೀಯ ಪುರಾತತ್ವ ಇಲಾಖೆ ನಡೆಸಿದ ಸರ್ವೆಯಲ್ಲಿ ಜ್ಞಾನವಾಪಿ ಮಸೀದಿ ನಿರ್ಮಾಣಕ್ಕೂ ಮುನ್ನಾ ಆ ಜಾಗದಲ್ಲಿ ಮಂದಿರವಿತ್ತು ಎಂದು ವರದಿಯಲ್ಲಿ ಬಹಿರಂಗವಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂ ಪರ ವಾದ ಮಂಡಿಸಿರುವ ವಕೀಲ ವಿಷ್ಣುಶಂಕರ್‍ ಜೈನ್ ಪತ್ರಿಕಾ ಗೋಷ್ಟಿಯಲ್ಲಿ ಈ ವಿಚಾರವನ್ನು ಬಹಿರಂಗಗೊಳಿಸಿದ್ದಾರೆ.

ಭಾರತೀಯ ಪುರಾತತ್ವ ಇಲಾಖೆ ನೀಡಿದ ಇತ್ತೀಚಿನ ವರದಿಯಂತೆ, ಉತ್ತರ ಪ್ರದೇಶದ ವಾರಣಾಸಿಯ ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ದೊಡ್ಡ ಹಿಂದೂ ದೇವಾಲಯದ ರಚನೆ ಇತ್ತು. ಈಗಿರುವ ರಚನೆಗಿಂತ ದೊಡ್ಡ ಪ್ರಮಾಣದ ಹಿಂದೂ ದೇವಾಲಯ ಆ ಜಾಗದಲ್ಲಿತ್ತು. ದೊಡ್ಡ ಭವ್ಯ ಮಂದಿರ ನಿರ್ಮಾಣವಾಗಿತ್ತು. ಹಿಂದಿನ ಕಟ್ಟದ ಮೇಲೆ ಮಸೀದಿ ನಿರ್ಮಾಣ ಮಾಡಲಾಗಿದೆ. ಮಸೀದಿ ಪಶ್ಚಿಮ ಗೋಡೆ ಹಿಂದೆ ನಿರ್ಮಾಣ ಮಾಡಿದ್ದ ಹಿಂದೂ ದೇವಾಲಯಕ್ಕೆ ಸೇರಿದೆ. 17ನೇ ಶತಮಾನದಲ್ಲಿ ಈ ಮಂದಿರವನ್ನು ನಾಶ ಮಾಡಲಾಗಿದ್ದು, 32 ಹಿಂದೂ ಮಂದಿರಗಳ ಶಾಸನಗಳು ಪತ್ತೆಯಾಗಿದೆ. ಈ ಶಾಸನಗಳು ತೆಲುಗು, ಕನ್ನಡ ಹಾಗೂ ದೇವನಗರಿ ಲಿಪಿಯಲ್ಲಿವೆ ಎಂದು ವರದಿ ತಿಳಿಸಿದೆ ಎನ್ನಲಾಗಿದೆ. ಜನಾರ್ದನ, ರುದ್ರ ಮತ್ತು ಉಮೇಶ್ವರ ಮುಂತಾದ ಮೂರು ದೇವತೆಗಳ ಹೆಸರುಗಳು ಈ ಶಾಸನಗಳಲ್ಲಿ ಕಂಡುಬರುತ್ತವೆ ಎಂದು ಜೈನ್ ರವರು ಮಾಹಿತಿ ನೀಡಿದ್ದಾರೆ.

ದೇವನಗರಿ, ತೆಲುಗು, ಕನ್ನಡ ಹಾಗೂ ಇತರೆ ಲಿಪಿಗಳಲ್ಲಿ ಬರೆಯಲಾದ ಪ್ರಾಚೀನ ಹಿಂದೂ ದೇವಾಲಯಕ್ಕೆ ಸೇರಿದ ಶಾಸನಗಳನ್ನು ಜ್ಞಾನವಾಪಿ ಸ್ಥಳದಲ್ಲಿ ಪತ್ತೆ ಮಾಡಲಾಗಿದೆ. ಕಾಶಿ ವಿಶ್ವನಾಥ ದೇಗುಲದ ಪಕ್ಕದಲ್ಲಿರುವ ಜ್ಞಾನವಾಪಿ ಮಸೀದಿ ಸಂಕೀರ್ಣದ ಕುರಿತು ಭಾರತೀಯ ಪುರಾತತ್ವ ಇಲಾಖೆ ಸಮೀಕ್ಷೆ ನಡೆಸಬೇಕು ಎಂದು ಕೋರ್ಟ್ ಆದೇಶ ಮಾಡಿತ್ತು. ವರದಿಯನ್ನು ಪರ-ವಿರೋಧ ವಾದಿಗಳಿಗೆ ನೀಡಬೇಕು ಎಂದು ತೀರ್ಪು ನೀಡಲಾಗಿತ್ತು. ಇದೀಗ ಜ್ಞಾನವಾಪಿಯಲ್ಲಿ ಮಸೀದಿ ನಿರ್ಮಾಣಕ್ಕೂ ಮುನ್ನಾ ಅಲ್ಲಿ ಮಂದಿರವಿತ್ತು ಎಂಬ ವರದಿಯನ್ನು ವಕೀಲ ಜೈನ್ ಬಹಿರಂಗಗೊಳಿಸಿದ್ದಾರೆ.

Most Popular

To Top