ಉರ್ಫಿ ಅರೆಸ್ಟ್ ವಿಡಿಯೋ ಬರೀ ಓಳು, ನಾಲ್ವರು ನಕಲಿ ಪೊಲೀಸರ ಬಂಧನ…..!

Follow Us :

ಸದಾ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುವಂತಹ ಉರ್ಫಿ ಜಾವೇದ್ ಸದಾ ವಿಚಿತ್ರವಾದ ಬಟ್ಟೆಗಳನ್ನು ಧರಿಸಿ ಟ್ರೋಲ್ ಗಳಿಗೆ ಗುರಿಯಾಗುತ್ತಿರುತ್ತಾರೆ. ಕಳೆದೆರಡು ದಿನಗಳ ಹಿಂದೆಯಷ್ಟೆ ಉರ್ಫಿಯನ್ನು ಪೊಲೀಸರು ನಡು ರಸ್ತೆಯಲ್ಲೇ ಬಂಧನ ಮಾಡಿದ್ದ ವಿಡಿಯೋ ಒಂದು ಸಖತ್ ವೈರಲ್ ಆಗಿತ್ತು. ಆದರೆ ಆ ವಿಡಿಯೋ ನಕಲಿ ಎಂದು ತಿಳಿದುಬಂದಿದ್ದು, ಈ ವಿಡಿಯೋದಲ್ಲಿ ಪೊಲೀಸರ ವೇಷದಲ್ಲಿದ್ದ ನಾಲ್ವರನ್ನು ಬಂಧನ ಮಾಡಲಾಗಿದೆ ಎಂದು ತಿಳಿದುಬಂದಿದೆ.

ನಟಿ ಉರ್ಫಿ ಜಾವೇದ್ ರನ್ನು ಪೊಲೀಸರು ಬಂಧಿಸಿದಂತಹ ವಿಡಿಯೋ ವೈರಲ್ ಆಗಿ‌ತ್ತು. ಬಟ್ಟೆಯ ವಿಚಾರಕ್ಕಾಗಿ ಆಕೆಯನ್ನು ಬಂಧನ ಮಾಡಲಾಗಿದೆ ಎಂದು ಹೇಳಲಾಗಿತ್ತು. ಈ ವಿಡಿಯೋ ಕಡಿಮೆ ಸಮಯದಲ್ಲೇ ಸಖತ್ ವೈರಲ್ ಆಗಿತ್ತು. ಕೆಲವರು ಈ ವಿಡಿಯೋ ಫ್ರಾಂಕ್ ಎಂದು ಸಹ ಹೇಳಲಾಗುತ್ತಿತ್ತು. ಇದೀಗ ಈ ಪ್ರಕರಣದ ಸತ್ಯಾಂಶ ಹೊರಬಂದಿದೆ. ಪ್ರಚಾರ ಗಿಟ್ಟಿಸಿಕೊಳ್ಳಲು ಉರ್ಫಿ ಈ ವಿಡಿಯೋ ಮಾಡಿಸಿದ್ದಾರೆ. ಈ ಸಂಬಂಧ ಮುಂಬೈನ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಇನ್ನೂ ಉರ್ಫಿ ಪ್ರಚಾರಕ್ಕಾಗಿ ಮಾಡಿದ ನಾಟಕ ಇದಾಗಿದ್ದು, ಆಕೆಗೆ ಮತಷ್ಟು ಸಂಕಷ್ಟ ಎದುರಾಗಲಿದೆ ಎಂದು ಹೇಳಲಾಗುತ್ತಿದೆ.

ನಕಲಿ ವಿಡಿಯೋ ಮಾಡಿ ಮುಂಬೈ ಪೊಲೀಸರಿಗೆ ಮಾನಹಾನಿ ಮಾಡಿದ ಹಿನ್ನೆಲೆಯಲ್ಲಿ ಉರ್ಫಿ ಜಾವೇದ್ ವಿರುದ್ದ ಓಶಿವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಕಲಿ ವಿಡಿಯೋದ ಬಗ್ಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಇಬ್ಬರು ಪುರುಷರು ಹಾಗೂ ಇಬ್ಬರು ಮಹಿಳೆಯರನ್ನು ಹಾಗೂ ವಿಡಿಯೋ ಚಿತ್ರೀಕರಣಕ್ಕೆ ಬಳಸಿದ್ದ ಕಾರನ್ನು ಸಹ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನೂ ವಿಚಿತ್ರ ಬಟ್ಟೆ ಹಾಕಿದ್ದ ಕಾರಣದಿಂದ ಪೊಲೀಸರು ಉರ್ಫಿಯನ್ನು ವಶಕ್ಕೆ ಪಡೆಯುತ್ತಿದ್ದಾರೆ ಎಂದು ವಿಡಿಯೋದಲ್ಲಿತ್ತು. ವಿಡಿಯೋದಲ್ಲಿ ಇರುವವರು ಮುಂಬೈ ಪೊಲೀಸರು ಅಲ್ಲ, ಅದು ನಮ್ಮ ಪೊಲೀಸರ ಸಮವಸ್ತ್ರವೂ ಅಲ್ಲ ಎಂದು ಪೊಲೀಸರು ತಿಳಿಸಿದ್ದಾರೆ ಎಂದು ಹೇಳಲಾಗಿದೆ.

ಇನ್ನೂ ಪ್ರಚಾರ ಪಡೆದುಕೊಳ್ಳಲು ಉರ್ಫಿ ಈ ವಿಡಿಯೋ ಮಾಡಿಸಿದ್ದಾರಾ ಅಥವಾ ಬೇರೆಯವರು ಮಾಡಿದ ಫ್ರಾಂಕ್ ಇರಬಹುದಾ ಎಂಬುದು ಇನ್ನಷ್ಟೆ ತಿಳಿಯಬೇಕಿದೆ. ಒಟ್ಟಿನಲ್ಲಿ ಉರ್ಫಿ ವಿವಾದಗಳನ್ನು ಮೈ ಮೇಲೆ ಎಳದುಕೊಳ್ಳುತ್ತಲೇ ಇರುತ್ತಾರೆ. ಈ ಹಿಂದೆ ಸಹ ಉರ್ಫಿ ವಿರುದ್ದ ಅನೇಕ ಪ್ರಕರಣಗಳು ದಾಖಲು ಸಹ ಆಗಿದ್ದವು.