ಪವನ್ ಕಲ್ಯಾಣ್ ದುಡ್ಡಿನ ವ್ಯಕ್ತಿಯಲ್ಲ, ಒಂದು ಅವಕಾಶ ಕೊಡಿ, ಮದುವೆ ಬಗ್ಗೆ ಚರ್ಚೆ ನಿಲ್ಲಿಸಿ ಎಂದ ಪವನ್ ಮಾಜಿ ಪತ್ನಿ ರೇಣು…..!

Follow Us :

ಆಂಧ್ರಪ್ರದೇಶದ ರಾಜಕೀಯ ದಿನೇ ದಿನೇ ರಂಗೇರುತ್ತಿದೆ. ಆರೋಪ ಪ್ರತ್ಯಾರೋಪಗಳು ಜೋರಾಗಿಯೇ ನಡೆಯುತ್ತಿದೆ. ಆಂಧ್ರಪ್ರದೇಶದಲ್ಲಿ ಆಡಳಿತ ನಡೆಸುತ್ತಿರುವ ವೈ.ಎಸ್.ಆರ್‍.ಪಿ ಪಕ್ಷದ ವೈಫಲ್ಯಗಳ ಬಗ್ಗೆ ಟಿಡಿಪಿ, ಜನಸೇನ, ಬಿಜೆಪಿ ಪಕ್ಷಗಳು ತೀವ್ರ ವಾಗ್ದಾಳಿ ನಡೆಸುತ್ತಿದ್ದಾರೆ. ರಾಜಕೀಯದ ಜೊತೆಗೆ ವ್ಯಕ್ತಿಗತ ವಿಮರ್ಶೆಗಳ ಜೊತೆಗೆ ಸಿನೆಮಾಗಳ ಬಗ್ಗೆ ಸಹ ನಡೆಯುತ್ತಿದೆ. ಇನ್ನೂ ಪವನ್ ಕಲ್ಯಾಣ್ ರವರ ವೈಯುಕ್ತಿಕ ಜೀವನದ ಬಗ್ಗೆ ಸಹ ಅನೇಕ ವಿಮರ್ಶೆಗಳು, ಹೇಳಿಕೆಗಳು ಎದುರಾಗುತ್ತಲೇ ಇದೆ. ಅದರಲ್ಲೂ ಪವನ್ ಕಲ್ಯಾಣ್ ರವರ ಮೂರು ಮದುವೆಗಳ ಬಗ್ಗೆ ಭಾರಿ ವಿಮರ್ಶೆಗಳು ಕೇಳಿಬರುತ್ತಿದ್ದು, ಈ ಬಗ್ಗೆ ಪವನ್ ಕಲ್ಯಾಣ್ ಮಾಜಿ ಪತ್ನಿ ರೇಣು ದೇಸಾಯಿ ರಿಯಾಕ್ಟ್ ಆಗಿದ್ದಾರೆ.

ಜನಸೇನಾ ಪಕ್ಷದ ನಾಯಕ ಪವನ್ ಕಲ್ಯಾಣ್ ರವರು ಮೂರು ಮದುವೆಗಳಾಗಿದ್ದಾರೆ ಎಂಬ ವಿಚಾರವನ್ನು ಪದೇ ಪದೇ ಅನೇಕ ಮುಖಂಡರು ರಾಜಕೀಯ ಸಮಾವೇಶಗಳಲ್ಲಿ ಠೀಕೆ ಮಾಡುತ್ತಿದ್ದರು. ಇದೀಗ ಈ ಬಗ್ಗೆ ರೇಣು ದೇಸಾಯಿ ವಿಡಿಯೋ ಮೂಲಕ ಸಂಚಲನಾತ್ಮಕ ವಾಖ್ಯಾನಗಳನ್ನು ಮಾಡಿದ್ದಾರೆ. ರಾಜಕೀಯದಲ್ಲಿ ನನ್ನನ್ನು ಹಾಗೂ ತನ್ನ ಮಕ್ಕಳನ್ನು ತರಬೇಡಿ ಎಂದು ಮನವಿ ಮಾಡಿದ್ದಾರೆ. ತನ್ನ ಮಾಜಿ ಪತಿ, ತನಗೆ ಸಂಬಂಧಿಸಿದ ಅಂಶಗಳೊಂದಿಗೆ ಸಿನೆಮಾ, ಒಟಿಟಿ ಸಿರೀಸ್ ಗಳನ್ನು ತೆಗೆಯುತ್ತೇವೆ ಎಂದು ಹೇಳುವುದು ಸರಿಯಲ್ಲ. ರಾಜಕೀಯದಲ್ಲಿ ರಾಜಕೀಯ ನಾಯಕರ ಮಕ್ಕಳನ್ನು ಮಧ್ಯೆ ತರುವುದು ಒಳ್ಳೆಯದಲ್ಲ ಎಂದು ರೇಣು ಹೇಳಿದ್ದಾರೆ.

ಅಷ್ಟೇ ಅಲ್ಲದೇ ನಮ್ಮ ಮಕ್ಕಳು ಇನ್ನೂ ಚಿಕ್ಕವರು. ಪವನ್ ಕಲ್ಯಾಣ್ ಹಣದ ಮನುಷ್ಯ ಅಲ್ಲ. ನನ್ನ ವೈಯುಕ್ತಿಕ ಜೀವನವನ್ನು ಹೊರಗೆ ತರಬೇಡ ಎಂದು ಸುಚನೆ ನೀಡಿದ್ದರು. ಆದರೆ ನನ್ನ ವಿಚಾರದಲ್ಲಿ ಪವನ್ ಕಲ್ಯಾಣ್ ಮಾಡಿದ್ದು ತಪ್ಪು. ಆದರೆ ಅದನ್ನು ರಾಜಕೀಯ ಮಾಡಬೇಡಿ ಎಂದು ರೇಣು ದೇಸಾಯಿ ತಿಳಿಸಿದ್ದಾರೆ. ಜೊತೆಗೆ ಪವನ್ ಕಲ್ಯಾಣ್ ರವರ ಆಶಯಗಳು ತುಂಬಾ ದೊಡ್ಡವು. ಪವನ್ ಕಲ್ಯಾಣ್ ಹಣದ ವ್ಯಕ್ತಿಯಲ್ಲ. ಪವನ್ ಗೆ ಒಂದು ಅವಕಾಶ ನೀಡಿ. ಪ್ರಜೆಗಳಿಗಾಗಿ ಪವನ್ ಕಲ್ಯಾಣ್ ಕೆಲಸ ಮಾಡುವ ದೊಡ್ಡ ಆಶಯ ಇಟ್ಟುಕೊಂಡಿದ್ದಾರೆ ಎಂದು ರೇಣು ದೇಸಾಯಿ ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ವಿಡಿಯೋ ಬಿಡುಗಡೆ ಮಾಡಿದ್ದಾರೆ.

ಇನ್ನೂ ರೇಣುದೇಸಾಯಿ ವಿಡಿಯೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ವಿವಿಧ ರೀತಿಯ ಕಾಮೆಂಟ್ ಗಳೂ ಸಹ ಹರಿದು ಬರುತ್ತಿವೆ. ಸುಮಾರು ವರ್ಷಗಳ ಬಳಿಕ ರೇಣು ದೇಸಾಯಿ ಮತ್ತೆ ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಟಾಲಿವುಡ್ ಮಾಸ್ ಮಹಾರಾಜ ರವಿತೇಜ ಅಭಿನಯದ ಟೈಗರ್‍ ನಾಗೇಶ್ವರರಾವ್ ಎಂಬ ಸಿನೆಮಾದಲ್ಲಿ ರೇಣು ದೇಸಾಯಿ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ.