ದೇಹದ ತೂಕ ಕಡಿಮೆ ಮಾಡಲು ಈ ಕ್ರಮಗಳನ್ನು ಅನುಸರಿಸಿ

Follow Us :

ನಾವು ಇಂದು ಹೇಳುವ ರೀತಿ ಮಾಡುವುದರಿಂದ 15 ದಿನಗಳಲ್ಲಿ 10 ಕೆಜಿ ತೂಕ ಕಡಿಮೆ ಆಗುವುದು ಖಂಡಿತ. ಅಷ್ಟೇ ಅಲ್ಲದೆ ನಿಮ್ಮ ಮೈಯಲ್ಲಿರುವ ಕೊಬ್ಬು ಬೆಣ್ಣೆಯಂತೆ ಕರಗಿ ಹೋಗುತ್ತದೆ. ಇತ್ತೀಚಿನ ಕಾಲದಲ್ಲಿ ನಾವು ನೋಡುತ್ತಾ ಬಂದಿದ್ದೇವೆ ಅಧಿಕ ತೂಕ ಅತೀ ದೊಡ್ಡ ಸಮಸ್ಯೆ ಆಗಿದೆ. ಕುಳಿತಲ್ಲೇ ಕೆಲಸ ಮಾಡಿ ಓಡಾಡದೆ, ಕುಳಿತಲ್ಲೇ ಕಾರ್ಯಗಳನ್ನ ಮುಗಿಸುವುದರಿಂದ ಅಧಿಕ ತೂಕ ಹೆಚ್ಚಾಗುತ್ತಿದೆ.

ಅಷ್ಟೇ ಅಲ್ಲದೆ ಶಾರೀರಿಕ ವ್ಯಾಯಾಮ ಇಲ್ಲದೇ ಇರುವುದು ಕೂಡ ಅದಕ್ಕೆ ಒಂದು ಕಾರಣ ಎಂದು ಹೇಳಬಹುದು. ಮುಖ್ಯವಾಗಿ ಜೀವನ ಶೈಲಿ ಹೊರಗಿನ ಪದಾರ್ಥಗಳ ಸೇವನೆ ಮತ್ತು ಫ್ರೈಡ್ ಫುಡ್ ತಿನ್ನುವುದರಿಂದ ಪ್ರತಿಯೊಂದು ವಯಸ್ಸಿನವರಲ್ಲಿ ಕೂಡ ಈ ಅಧಿಕ ತೂಕದ ಸಮಸ್ಯೆ ಕಾಡುತ್ತಿದೆ. ಅಧಿಕ ತೂಕವನ್ನ ನಾವು ಕೇವಲ 15 ದಿನಗಳಲ್ಲಿ ಮನೆ ಮದ್ದಿನಿಂದ ಹೇಗೆ ಕಡಿಮೆ ಮಾಡಿಕೊಳ್ಳಬಹುದು ಎಂದರೆ ಇದಕ್ಕೆ ಬೇಕಾಗಿರುವ ಪದಾರ್ಥಗಳು ಕೇವಲ ಒಂದೇ ಒಂದು.

ನೀವು ಅತಿ ದಪ್ಪವಾಗಿ ಅಥವಾ ಅಜೀರ್ಣ ಸಮಸ್ಯೆಯಿಂದ , ಮೈಂಡ್ ಅಥವಾ ಬಾಡಿ ಯಾವುದು ಕೆಲಸ ಮಾಡದೆ ಜಡವಾಗಿದ್ದರೆ, ಮಲಬದ್ಧತೆ ಸಮಸ್ಯೆ ಕಾಡುತ್ತಿದ್ದರೆ, ಇಂತಹ ಅನೇಕ ಅನೇಕ ಸಮಸ್ಯೆಗಳಿಗೆ ಇದೊಂದೇ ಉಪಾಯ. ಈ ಉಪಾಯವನ್ನ ನೀವು ಅತಿ ಸರಳವಾಗಿ ಮಾಡಿಕೊಳ್ಳಬಹುದು. ಇದಕ್ಕೆ ಬೇಕಾಗಿರುವುದು ಕೇವಲ ಅಜವೈನ್ ನಾವು ಪ್ರತಿ ನಿತ್ಯ ಅಡಿಗೆ ಪದಾರ್ಥಗಳಲ್ಲಿ ಬಳಸುವಂತಹ ಅಜವೈನ್ ತೆಗೆದುಕೊಂಡು ಸುಲಭವಾಗಿ ನಿಮ್ಮ ತೂಕವನ್ನ ಕಡಿಮೆಗೊಳ್ಳಿಸಬಹುದು.

ಅಜವೈನ್ ತೆಗೆದುಕೊಳ್ಳಿ ಅದನ್ನು ಶುದ್ಧಗೊಳಿಸಿಕೊಳ್ಳಿ. ಎರಡು ಸ್ಪೂನ್ ಅಜವೈನ್ ಅನ್ನು ಸಾಮಾನ್ಯ ನೀರು ಅಂದರೆ ರೂಮ್ ಟೆಂಪರೇಚರ್ ನೀರಿಗೆ ಎರಡು ಚಮಚ ಅಜವೈನ್ ಹಾಕಿ ನೆನೆಯಲು ಇಟ್ಟುಬಿಡಿ. ಇದನ್ನು ರಾತ್ರಿ ಇಡೀ ನೆನೆಯಲು ಬಿಡಿ ಹೀಗೆ ನೆನೆದ ಅಜವೈನ್ ನೀರನ್ನ ಶೋಧಿಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಪ್ರತಿ ದಿನ ಕುಡಿಯಿರಿ. ಹೀಗೆ 15 ದಿನಗಳ ಕಾಲ ಕುಡಿಯುವುದರಿಂದ, 10 ಕೆಜಿ ಅಷ್ಟು ತೂಕ ಸುಲಭವಾಗಿ ಇಳಿಯುತ್ತದೆ. ಹೀಗೆ ಅಜವೈನ್ ಅನ್ನು ಪ್ರತಿ ನಿತ್ಯ ಸೇವಿಸುವುದರಿಂದ ತೂಕದ ಸಮಸ್ಯೆ, ಅಜೀರ್ಣ ಸಮಸ್ಯೆ ಅಸಿಡಿಟಿ ಸಮಸ್ಯೆಗಳನ್ನು ಕೂಡ ಹೊಡೆದೋಡಿಸುತ್ತದೆ.ಅಲ್ಲದೆ ಶರೀರದಲ್ಲಿ ಜಡತ್ವ ಹೋಗಿ ಚೇತರಿಕೆ ಹಾಗೂ ಚೈತನ್ಯ ತುಂಬುತ್ತದೆ.