ಆರೋಗ್ಯವನ್ನು ಉತ್ತಮವಾಗಿಡಲು ಈ ಕ್ರಮ ಅನುಸರಿಸಿ

Follow Us :

ಆರೋಗ್ಯದಿಂದ ಇರುವುದು ಮತ್ತು ದೇಹವನ್ನು ಫಿಟ್ ಆಗಿ ಇಟ್ಟುಕೊಳ್ಳುವುದು ಇಂದಿನ ಬ್ಯುಸಿ ಜೀವನದಲ್ಲಿ ಎಲ್ಲರಿಗೂ ಅತ್ಯವಶ್ಯಕವಾಗಿದೆ. ಮನೆಯಲ್ಲಿ ಮಾಡಿದ ಆಹಾರ ಸೇವಿಸುವುದು, ಉತ್ತಮ ನಿದ್ರೆ ಮತ್ತು ವ್ಯಾಯಾಮ ಇದರ ಹೊರತಾಗಿ ಕೆಲವು ವಿಧಾನಗಳನ್ನು ಜೀವನದಲ್ಲಿ ಅನುಸರಿಸಿದರೆ ಸದಾ ಫಿಟ್ ಆಗಿ ಇರಬಹುದು.

ಈ ವಿಧಾನಗಳನ್ನು ಅನುಸರಿಸಿದರೆ ಉತ್ತಮ ಆರೋಗ್ಯ ನಿಮ್ಮದಾಗಿಸಿಕೊಳ್ಳುವಲ್ಲಿ ಯಾವ ಸಂಶಯವಿಲ್ಲ. ಆರೋಗ್ಯವಾಗಿರಲು ಈ ಫಿಟ್ನೆಸ್ ಸಲಹೆಗಳನ್ನು ಅನುಸರಿಸಿ. ಬೆಳಿಗ್ಗೆ ಎದ್ದು ಚಹಾ ಅಥವಾ ಕಾಫಿ ಮುಂಚಿತವಾಗಿ ದೊಡ್ಡ ಲೋಟದಲ್ಲಿ ನೀರು ಕುಡಿಯುವುದು ಬಹಳ ಮುಖ್ಯ, ಇಡೀ ರಾತ್ರಿ ಮಲಗಿ ಏಳುವಾಗ ದೇಹ ಡಿ ಹೈಡ್ರೇಟ್ ಆಗಿರುತ್ತದೆ. ಈ ಕಾರಣದಿಂದ ಬೆಳ್ಳಿಗೆ ಎದ್ದ ಕೂಡಲೇ ನೀರು ಕುಡಿಯುವುದರಿಂದ ದೇಹಕ್ಕೆ ಶಕ್ತಿ ಸಿಗುತ್ತದೆ.

ಉತ್ತಮ ಪ್ರೊಟೀನ್ ಹೊಂದಿರುವ ಉಪಹಾರವನ್ನ ಬೆಳಗ್ಗೆ ಉಪಹಾರದಲ್ಲಿ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣ ನಿಯಂತ್ರಿಸಲ್ಪಡುತ್ತದೆ .ದೇಹಕ್ಕೆ ಎನರ್ಜಿ ಸಿಗುತ್ತದೆ ಮತ್ತೆ ಮತ್ತೆ ಹಸಿವಿನ ಅನುಭವ ಆಗುವುದಿಲ್ಲ. ಒಂದು ಹಣ್ಣು ಅಥವಾ ಯಾವುದೇ ಹಸಿರು ತರಕಾರಿಯನ್ನ ಪ್ರತಿ ದಿನ ಸೇವಿಸಲೇಬೇಕು
ಪ್ರತಿ ದಿನ ಹಣ್ಣುಗಳನ್ನ ತಿನ್ನುವುದರಿಂದ ದೇಹಕ್ಕೆ ಫೈಬರ್ ವಿಟಮಿನ್ ಮಿನರಲ್ ಗಳು ಸಿಗುತ್ತವೆ.

ಇದರಿಂದಾಗಿ ಜೀರ್ಣಕ್ರಿಯೆ ಉತ್ತಮ ಗೊಳ್ಳುತ್ತದೆ. 60 ಮೆಟ್ಟಿಲುಗಳನ್ನ 20 ಸೆಕೆಂಡ್ ನಲ್ಲಿ ದಿನಕ್ಕೆ ಮೂರು ಬಾರಿ ಹತ್ತುವುದು ಕಾರ್ಡಿಯೋ ಫಿಟ್ನೆಸ್ ಅನ್ನು ಹೆಚ್ಚಿಸುತ್ತದೆ. ಕಾರ್ಡಿಯೋ ರೆಸ್ಪಿರೇಟರಿ ಫಿಟ್ನೆಸ್ ನಲ್ಲಿ ಸ್ವಲ್ಪ ಸುಧಾರಣೆ ಆದರೂ ಕೂಡ ಹೃದಯ ಸಂಭಂದಿ ಕಾಯಿಲೆಯ ಅಪಾಯವನ್ನ ಕಡಿಮೆ ಮಾಡುತ್ತದೆ.