health-Kannada

ದಾಸವಾಳ ಗಿಡದಿಂದ ಏನೆಲ್ಲಾ ಪ್ರಯೋಜನಗಳಿವೆ ತಿಳಿಯಿರಿ!

ನಮ್ಮ ಸುತ್ತಮುತ್ತ ಇರುವ ಎಷ್ಟೋ ಹೂವಿನಗಿಡಗಳು ನಮ್ಮಆರೋಗ್ಯ ಸಮಸ್ಯೆ ಗಳನ್ನು ಕಡಿಮೆ ಮಾಡುತ್ತವೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಇಂತಹುದರಲ್ಲಿ ದಾಸವಾಳದ ಎಲೆಗಳು ಆರೋಗ್ಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಅನುಕೂಲಕಾರಿ ಗುಣಗಳನ್ನು ಹೊಂದಿದೆ. ದಾಸವಾಳದ ಎಲೆಗಳನ್ನು ಬಾಹ್ಯ ಮತ್ತು ಆಂತರ್ಯ ರೂಪದಲ್ಲಿ ಉಪಯೋಗ ಮಾಡಬಹುದು.

ಇದು ಅನೇಕ ವಿಟಮಿನ್ನುಗಳು ಮತ್ತು ಮಿನರಲ್ ಗಳಿಂದ ಭರಿತವಾಗಿದೆ. ಆಂಟಿಆಕ್ಸಿಡೆಂಟ್ ಗಳು ಹೆಚ್ಚಿನ ಪ್ರಮಾಣದಲ್ಲಿದೆ
ದೇಹದಿಂದ ಟಾಕ್ಸಿನನ್ನು ಹೊರಹಾಕಲು ಉಪಯುಕ್ತವಾದ ಸಸ್ಯವಾಗಿದೆ. ದಾಸವಾಳದ ಎಲೆಯನ್ನು ಬಳಸಿ ಕಷಾಯ ಮಾಡಿ ಸೇವಿಸುವುದರಿಂದ ಆಂಟಿ ಆಕ್ಸಿಡೆಂಟ್ ಗಳು ಕ್ಯಾನ್ಸರ್ ವಿರುದ್ಧ ಹೋರಾಡಲು, ತೂಕ ಕಡಿಮೆಮಾಡಿಕೊಳ್ಳಲು, ಕೊಲೆಸ್ಟ್ರಾಲ್ನ ಪ್ರಮಾಣವನ್ನು ತಗ್ಗಿಸಲು ನೆರವಾಗುತ್ತದೆ.

ಚರ್ಮದ ಆರೋಗ್ಯಕ್ಕೆ ದಾಸವಾಳದ ಎಲೆಗಳು ಬಹಳ ಒಳ್ಳೆಯದು ಚರ್ಮವನ್ನು ಶುಚಿಯಾಗಿಡಲು, ಕಪ್ಪು ಕಲೆಗಳನ್ನು ಹೋಗಲಾಡಿಸಲು, ಕತ್ತಿನ ಸುತ್ತಲಿನ ಕಡಿಮೆಮಾಡಲು, ಸತ್ತ ಕೋಶಗಳನ್ನು ಹೋಗಲಾಡಿಸಲು, ಚರ್ಮವನ್ನು ಮೃದುವಾಗಿರಲು ದಾಸವಾಳದ ಎಲೆಗಳು ಸಹಕಾರಿ. ಈ ಎಲೆಗಳನ್ನು ಸ್ವಲ್ಪ ಜಜ್ಜಿ ಅದರಿಂದ ಚರ್ಮದ ಭಾಗಗಳ ಮೇಲೆ ಮಸಾಜ್ ಮಾಡಿಕೊಳ್ಳಲು ಪರಿಣಾಮ ಕಾರಿ ಗುಣವನ್ನು ಹೊಂದಿರುವುದರಿಂದ ನೋವಿನಿಂದ ಕೂಡಿದ ಮೊಡವೆ ನಿವಾರಿಸಲು ಈ ಎಲೆಗಳು ಸಹಾಯವಾಗುತ್ತವೆ.

ದೇಹದಲ್ಲಾಗುವ ಹಾರ್ಮೋನ್ ಅಸಮತೋಲನವನ್ನು ಸರಿ ಮಾಡಿ ಭಾವನೆಗಳ ಹತೋಟಿಗೆ ದಾಸವಾಳದ ಎಲೆ ಸಹಕಾರಿ.
ಮಹಿಳೆಯರಲ್ಲಿ ಮುಟ್ಟಿನ ಮುಂಚಿನ ದಿನಗಳಲ್ಲಿ ಕಾಡುವ ಮಾನಸಿಕ ಅಸಮತೋಲನವನ್ನು ಸರಿ ಮಾಡಲು ದಾಸವಾಳದ ಸಹಾಯಕಾರಿ.

ದೇಹವು ನಿರ್ಜಲೀಕರಣ ವಾಗದಂತೆ ನೋಡಿಕೊಳ್ಳಲು ದಾಸವಾಳದ ಎಲೆಯ ಕಷಾಯ ಉತ್ತಮ. ದಾಸವಾಳದ ಎಲೆಯ ಕಷಾಯ ಶೀತವನ್ನು ಕಫವನ್ನು ಕಡಿಮೆ ಮಾಡಲು ದಾಸವಾಳದ ಎಲೆಯನ್ನು ಅಥವಾ ಹೂವನ್ನು ಕಷಾಯ ಮಾಡಿ ಕುಡಿಯಬಹುದು.

ಮುಖ್ಯವಾಗಿ ದಾಸವಾಳದಲ್ಲಿ ಇನ್ನಿತರೆ ಆಕ್ಸಿಡೆಂಟ್ಗಳೊಂದಿಗೆ ವಿಟಮಿನ್-ಸಿ ಕೂಡ ಹೆಚ್ಚಿನ ಪ್ರಮಾಣದಲ್ಲಿದೆ. ಶೀತಕ್ಕೆ ಕಾರಣವಾದಂತಹ ವೈರಸ್ಗಳ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಸಣ್ಣಪ್ರಮಾಣದಲ್ಲಿ ತಲೆನೋವಿನಲ್ಲಿ ಕಷಾಯ ಮಾಡಿ ಕುಡಿಯುವುದು ಸಹಕಾರಿ.

ಕೂದಲಿನ ಆರೋಗ್ಯಕ್ಕೆ ಎಲೆಯನ್ನು ರುಬ್ಬಿಕೊಂಡು ತಲೆಗೆ ಹಚ್ಚಿಕೊಳ್ಳಬಹುದು. ಇದರಿಂದ ಹೊಟ್ಟಿನ ಸಮಸ್ಯೆ ಕೂದಲು ಉದುರುವಿಕೆ ಕಡಿಮೆಯಾಗುತ್ತದೆ. ದೇಹದಲ್ಲಿ ಉಷ್ಣತೆ ಕಡಿಮೆಯಾಗಿ ಹೊಳಪಾದ ಸೊಂಪಾದ ಕೂದಲು ಬೆಳವಣಿಗೆಯಾಗುತ್ತದೆ. ದಾಸವಾಳ ಹೂಗಳಜೊತೆಗೆ ನೆನೆಸಿದ ಮೆಂತ್ಯ ಮೊಸರು ಬಳಸಿದಲ್ಲಿ ಇನ್ನಷ್ಟು ಪೋಷಕಾಂಶಗಳು ದೊರಕಿ ಕೂದಲು ಪೋಷಣೆ ಚೆನ್ನಾಗಿ ಆಗುತ್ತದೆ. ಯಶುಪ್ರಸಾದ್…

Most Popular

To Top