ಯುವರತ್ನ ಸಿನಿಮಾದ ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತಾ ?

ಈ ವರ್ಷದ ಬಹು ನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ಯುವರತ್ನ ಮುಂಚೂಣಿಯಲ್ಲಿತ್ತು.ಪುನೀತ್ ರಾಜ್ ಕುಮಾರ್ ಅವರ ನಟನೆಯ ಈ ಸಿನಿಮಾ ನೋಡಲು ಅವರ ಅಭಿಮಾನಿಗಳು ಕಾದ್ದಿದ್ದರು.ಏಪ್ರಿಲ್ 1 ರಂದ್ದು ಎಲ್ಲಾ ಕಡೆ ಯುವರತ್ನ ಸಿನಿಮಾ ಬಿಡುಗಡೆಯಾಗಿದೆ. ಯುವರತ್ನ ಸಿನಿಮಾ ರಾಜ್ಯಾದ್ಯಂತ 700 ಕ್ಕು ಚಿತ್ರಮಂದಿರದಲ್ಲಿ ಬಿಡುಗಡೆಯಾಗಿದೆ.ಯುವರತ್ನ ಕನ್ನಡ ಮಾತ್ರವಲ್ಲದೇ ತೆಲುಗುವಿನ್ನಲ್ಲೂ ಸಹ ಬಿಡುಗಡೆಯಾಗಿದು ಅಲ್ಲೂ ಸಹ ಒಳ್ಳೆಯ ಪ್ರದರ್ಶನ ಕಾಣುತ್ತಿದೆ.ಕರ್ನಾಟಕದಲ್ಲಿ 450 ಕ್ಕು ಹೆಚ್ಚು ಚಿತ್ರಮಂದಿರಗಳು ಮತ್ತು ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ 250 ಕ್ಕು ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ.ಸ್ಟಾರ್ ಸಿನಿಮಾಗಳನ್ನು ಮುಂಜಾನೆಯೇ ಕಣ್ನತುಂಬಿಕೊಳ್ಳದಿದ್ದರೆ ಸಮಾಧಾನವೇ ಆಗುವುದಿಲ್ಲ.ಇನ್ನೂ ರಾಜಕುಮಾರ ಸಿನಿಮಾದಲ್ಲಿ ಪುನೀತ್ ರಾಜ್ ಕುಮಾರ್ ಹಾಗೂ ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರ ಕಾಂಬಿನೇಷನ್ ನಲ್ಲಿ ಬಾರಿ ಯಶಸ್ಸು ಸಿಕ್ಕಿತು. ಈಗ ಎರಡನೇ ಬಾರಿಗೆ ಈ ಕಾಂಬಿನೇಷನ್ ಮತ್ತೆ ಸದ್ದು ಮಾಡುತ್ತಿದೆ.ಇನ್ನೂ ಸಿನಿಮಾದಲ್ಲಿ ಪುನೀತ್ ರಾಜ್ ಕುಮಾರ್ ಅವರಿಗೆ ನಾಯಕಿಯಾಗಿ ನಟಿ ಸೈಷಾ ಸೈಗಲ್ ರವರು ನಟಿಸಿದ್ದಾರೆ.ಈ ಚಿತ್ರದಲ್ಲಿ ಪ್ರಕಾಶ್ ರಾಜ್, ಸೋನು ಗೌಡ, ಅವಿನಾಶ್, ಮತ್ತು ಧನಂಜಯ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.ಚಿತ್ರದಲ್ಲಿ ಈಗಿನ ವಿಧ್ಯಾಭ್ಯಾಸದ ಬಗ್ಗೆ ಒಳ್ಳೆಯ ಸಂದೇಶವನ್ನು ನೀಡಲಾಗಿದೆ.ಯುವರತ್ನ ಚಿತ್ರವು ಕರ್ನಾಟಕದಲ್ಲಿ ಮೊದಲದಿನ 13.5 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಮತ್ತು ಆಂಧ್ರಪ್ರದೇಶದಲ್ಲಿ 3 ಕೋಟಿ ರೂಪಾಯಿಯಾಗಿದೆ. ಒಟ್ಟಿಗೆ ಕನ್ನಡ ಮತ್ತು ತೆಲುಗುವಿನಲ್ಲಿ 16.5 ಕೋಟಿ ರೂಪಾಯಿಯಾಗಿದೆ. ಮುಂದಿನ ದಿನಗಳಲ್ಲಿ ಎನ್ನು ಕೆಲವು ಚುತ್ರಮಂದಿರಗಳು ಸೇರಿಕೊಳ್ಳಲಿದೆ. ಮುಂದಿನ ದಿನಗಳಲ್ಲಿ ಇನ್ನೆಷ್ಟು ಕಲೆಕ್ಷನ್ ಮಾಡಲಿದ್ದಾನೆ ಎಂಬುದನ್ನು ನೋಡಬೇಕು..

Previous articleಅಮ್ಮಮ್ಮ ಹಂಚಿಕೊಂಡ ಸ್ಪೆಷಲ್ ನ್ಯೂಸ್ ಏನು ಗೊತ್ತಾ ?
Next articleಪ್ರಶಾಂತ್ ಸಂಬರಗಿಯನ್ನು ತರಾಟೆಗೆ ತೆಗೆದುಕೊಂಡ ದಿವ್ಯ ಉರುಡುಗ !