Film News

ಮೃತ ಮಗನ ಫೋಟೋ ಜೊತೆ ಯುವರತ್ನ ಸಿನಿಮಾ ವೀಕ್ಷಿಸಿದ ಅಭಿಮಾನಿ !

ಪುನೀತ್ ರಾಜ್ ಕುಮಾರ್ ಅಭಿನಯದ ಯುವರತ್ನ ಸಿನಿಮಾ ರಿಲೀಸ್ ಆಗಿ ಈಗ ಅದ್ಭುತ ಪ್ರದರ್ಶನ ಕಾಣುತ್ತಿದೆ.ಚಿತ್ರದಲ್ಲಿರುವ ಒಳ್ಳೆಯ ಸಂದೇಶಕ್ಕಾಗಿ ಮತ್ತು ಅಪ್ಪು ಅವರ ಡ್ಯಾನ್ಸ್ ನೋಡಲು ಜನ ಥಿಯೇಟರ್ ಗೆ ಬಂದು ಸಿನಿಮಾ ನೋಡುತ್ತಿದ್ದಾರೆ.ದೊಡ್ಡವರು ಚಿಕ್ಕವರು ಅನ್ನುವ ಯಾವುದೇ ಬೇಧಭಾವವಿಲ್ಲದೆ ಅಭಿಮಾನಿಗಳು ಸಿನಿಮಾವನ್ನ ಕಣ್ಣು ತುಂಬಿಕೊಳ್ಳುತ್ತಿದ್ದಾರೆ.ಇದರ ನಡುವೆ ಮೃತ ಪಟ್ಟ ಮಗನ ಫೋಟೋ ಜೊತೆಗೆ ಪೋಷಕರು “ಯುವರತ್ನ” ಸಿನಿಮಾ ನೋಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಮೈಸೂರಿನ ಡಿ ರ್ ಸಿ ಮಲ್ಟಿಪ್ಲೆಕ್ಸ್ ನಲ್ಲಿ ಪೋಷಕರು ಮೃತ ಮಗನ ಭಾವಚಿತ್ರದ ಜೊತೆಗೆ ಸಿನಿಮಾವನ್ನು ನೋಡಿದ್ಧಾರೆ.
ಮೈಸೂರಿನ ನಿವಾಸಿ ಮುರಳಿದರ್ ಅವರ ಪುತ್ರ ಕಳೆದ ಮೂರು ತಿಂಗಳ ಹಿಂದೆ ಬಾಲಕ ಹರಿ ಕೃಷ್ಣ ಮೃತಪಟ್ಟಿದ್ದರು.ಈ ಹುಡುಗ ಪುನೀತ್ ರಾಜ್ ಕುಮಾರ್ ಅವರ ಅಭಿಮಾನಿಯಾಗಿದ್ದು, ಯುವರತ್ನ ಸಿನಿಮಾ ನೋಡಬೇಕೆಂದು ಬಹಳ ಆಸೆ ಪಟ್ಟಿದ್ದನಂತೆ. ಈ ಕಾರಣದಿಂದ ಮಗನ ಆಸೆ ನೆರವೇರಿಸಲು ಮಗನ ಭಾವಚಿತ್ರದ ಜೊತೆಗೆ ಈ ಸಿನಿಮಾ ನೋಡಲು ಥಿಯೇಟರ್ ಗೆ ಬಂದಿದ್ದಾರೆ. ಸಾವನ್ನಪ್ಪಿರುವ ಮಗನಿಗೂ ಟಿಕೆಟ್ ಖರೀದಿಸಿ, ತಂದೆ, ತಾಯಿ ಹಿರಿಯ ಮಗನ ಜೊತೆಗೆ ಈ ಸಿನಿಮಾ ನೋಡಿದ್ದಾರೆ. ಮೈಸೂರಿನಲ್ಲಿ ನಡೆದ ಈ ಘಟನೆಯ ಬಗ್ಗೆ ತಿಳಿದು ಪುನೀತ್ ರಾಜ್ ಕುಮಾರ್ ಭಾವುಕರಾಗಿದ್ದಾರೆ.

Trending

To Top