Film News

ನಿಜ ಜೀವನದಲ್ಲೂ ವೃದ್ಧನ ಪರ ನಿಂತ ಅಪ್ಪು!

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಯುವರತ್ನ ಸಿನಿಮಾದಲ್ಲಿ ಹಿರಿಯ ನಟ ಎಂ.ಕೆ.ಮಠ ಅವರನ್ನು ತಬ್ಬಿಕೊಳ್ಳುತ್ತಾರೆ.ಯುವರತ್ನ ಸಿನಿಮಾದಲ್ಲಿ ಪುನೀತ್ ರಾಜ್ ಕುಮಾರ್ ಅವರದ್ದು ಕಾಲೇಜ್ ಅನ್ನು ರಕ್ಷಣೆ ಮಾಡುವ ಪಾತ್ರವಾಗಿದೆ, ಎಂ ಕೆ ಮಠ ಅವರದ್ದು ಕಾಲೇಜಿನ ಬೆಲ್ ಬಾರಿಸುವ ವೃದ್ಧನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.ಇವರಿಬ್ಬರ ಅಪ್ಪುಗೆ ನೋಡುಗರನ್ನ ಬಾವುಕರನ್ನಾಗಿ ಮಾಡುತ್ತದೆ, ಕಣ್ಣಿನಲ್ಲಿ ನೀರು ತರಿಸುತ್ತದೆ, ಇದನ್ನು ನೋಡಿದ ವೀಕ್ಷಕರಿಗೆ ಕೂಡ ಸಮಾಧಾನ ಪಡಿಸುತ್ತದೆ.

ಈ ಸಿನಿಮಾದಲ್ಲಿ ಕಾಲೇಜು ವಿದ್ಯಾರ್ಥಿಗಳ ಸಮಸ್ಯೆಗಳನ್ನ ಬಗೆಹರಿಸುವಲ್ಲಿ ಪುನೀತ್ ರಾಜ್ ಕುಮಾರ್ ಅವರ ಬೆನ್ನಿಗೆ ಎಂ ಕೆ ಮಠ ಅವರು ನಿಂತರೆ, ನಿಜ ಜೀವನದಲ್ಲಿ ಎಂ ಕೆ ಮಠ ಅವರ ಬೆನ್ನಿಗೆ ಪುನೀತ್ ರಾಜ್ ಕುಮಾರ್ ನಿಂತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಯುವರತ್ನ ಚಿತ್ರೀಕರಣದ ಸಂದರ್ಭದಲ್ಲಿ ಎಂ ಕೆ ಮಠ ಪುನೀತ್ ಅವರಿಗೆ ಆಪ್ತರಾಗಿದ್ದರು ಫ್ರೀ ಟೈಂ ನಲ್ಲಿ ಇಬ್ಬರೂ ಪರಸ್ಪರ ಮಾತನಾಡುತ್ತ ಕುಳಿತುಕೊಳ್ಳುತ್ತಿದ್ದರು. ಈ ಸಂದರ್ಭದಲ್ಲಿ ಎಂ ಕೆ ಮಠ ಅವರಿಗೆ ಆರ್ಥಿಕವಾಗಿ ಬಹಳ ಸಮಸ್ಯೆ ಆಗಿದೆ ಎನ್ನುವ ವಿಷಯ ಪುನೀತ್ ರಾಜ್ ಕುಮತ್ ಅವರಿಗೆ ತಿಳಿದು, ಸಿನಿಮಾದಲ್ಲಿ ಬಡಪ್ಪಾಯಿ ಪರ ನಿಂತು ಕಾಪಾಡುವಂತಹ ಪುನೀತ್ ನಿಜ ಜೀವನದಲ್ಲೂ ಕೂಡ ಅದನ್ನೇ ಮಾಡಿದ್ದಾರೆ. ಈ ವಿಷಯ ಹಿರಿಯ ಸಿನಿಮಾ ಪತ್ರಕರ್ತ ಗಣೇಶ್ ಕಸರಗೂಡು ಅವರ ಫೇಸ್ ಬುಕ್ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.

ಆರ್ಥಿಕವಾಗಿ ಕಷ್ಟದಲ್ಲಿದ ಎಂ ಕೆ ಮಠ ಅವರಿಗೆ ಆರ್ಥಿಕ ಸಹಾಯ ಮಾಡುವುದಾಗಿ ದೊಡ್ಮನೆ ಹುಡುಗ ಪುನೀತ್ ಅಭಯವನ್ನ ನೀಡಿದ್ದಾರೆ. ಎಂ ಕೆ ಮಠ ಅವರ ಮನೆ ಕಟ್ಟುವುದಕ್ಕೆ ಅಗತ್ಯ ಬಿಳೋ ಎಲ್ಲಾ ಸಹಾಯವನ್ನ ಮಾಡುವುದಾಗಿ ಪುನೀತ್ ತಿಳಿಸಿದ್ದಾರೆ.

ಸಿನಿಮಾ ಮಾತ್ರವಲ್ಲ ತನ್ನ ಆಪ್ತರ ಸಮಸ್ಯೆಗಳನ್ನು ನಿಜ ಜೀವನದಲ್ಲಿ ಸಹ ಬಗೆ ಹರಿಸುವ ಪರಮಾತ್ಮನಾಗಿ ಅಭಯ ನೀಡಿದ್ದಾರೆ.

Trending

To Top