Uncategorized

ಯುವರತ್ನ ಬಿಡುಗಡೆಗೆ ಕಾಲ ಸನ್ನಿಹ!

ಬೆಂಗಳೂರು: ಪವರ್ ಸ್ಟಾರ್ ಪುನಿತ್ ರಾಜಕುಮಾರ್ ನಟನೆಯ ಬಹುನಿರೀಕ್ಷಿತ ಚಿತ್ರ ಯುವರತ್ನ ಶೀಘ್ರದಲ್ಲಿಯೇ ಬಿಡುಗಡೆಯಾಗುವ ಸಮಯ ಬಂದಿದ್ದು, ನಿರ್ಮಾಪಕರಾಗಲಿ ಅಥವಾ ನಿರ್ದೇಶಕರಾಗಲಿ ದಿನಾಂಕ ಘೋಷಿಸಿದರೇ ಸಾಕು ಚಿತ್ರ ಮಂದಿರಗಳ ಮುಂದೆ ಡ್ಯಾನ್ಸ್ ಮಾಡೋಕೆ ಅಪ್ಪು ಅಭಿಮಾನಿಗಳು ರೆಡಿಯಾಗಿದ್ದಾರಂತೆ.

ಇನ್ನೂ ಮೂಲಗಳ ಪ್ರಕಾರ ಜನವರಿ 2021 ರಲ್ಲಿ ಚಿತ್ರ ಬಿಡುಗಡೆಯಾಗಲಿದೆ ಎಂಬ ಮಾಹಿತಿ ಹರಿದಾಡುತ್ತಿದೆ. 2020 ರ ನಂತರ ಚಿತ್ರಮಂದಿರಗಳಲ್ಲಿ ಶೇ.100 ರಷ್ಟು ಪ್ರೇಕಕರಿಗೆ ಅವಕಾಶ ನೀಡಲಿ, ಸಿನೆಮಾ ರಿಲೀಸ್ ಮಾಡೊಣ ಎಂದು ಕಾಯುತ್ತಿರುವ ದೊಡ್ಡ ಸಿನೆಮಾಗಳ ಪೈಕಿ ಯುವರತ್ನ ಸಹ ಒಂದಾಗಿದೆ. ಇತ್ತೀಚಿಗಷ್ಟೆ ಯುವರತ್ನ ಚಿತ್ರದ ಸಂಗೀತ ನಿರ್ದೇಶಕ ಎಸ್.ಎಸ್.ತಮನ್  ಮೊದಲನೇ ಹಾಡು ಬಿಡುಗಡೆಯಾಗಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಜೊತೆಗೆ ಚಿತ್ರದ 2ನೇ ಗೀತೆಯನ್ನು ಸಹ ಬಿಡುಗಡೆ ಮಾಡುವ ನಿರೀಕ್ಷೆಯಲ್ಲಿದೆ ಚಿತ್ರತಂಡ. ಚಿತ್ರದ ಮೊದಲನೆ ಹಾಡಾದ ಪವರ್ ಆಫ್ ಯೂತ್ ಸಾಂಗ್ ಗೆ ಈಗಾಗಲೇ ಅಭಿಮಾನಿಗಳು ಫಿದಾ ಆಗಿದ್ದು, ಚಿತ್ರದ ಎರಡನೇ ಹಾಡು ಎನ್ನಲಾಗುತ್ತಿರುವ ಊರಿಗೊಬ್ಬ ರಾಜ ಇನಷ್ಟು ಕ್ರೇಜ್ ಹುಟ್ಟಿಸಿದೆ. ಜೊತೆಗೆ ಈ ಹಾಡನ್ನು ಸ್ವತಃ ಪುನೀತ್ ರವರೇ ಹಾಡಿರುವುದು ಮತ್ತೊಂದು ವಿಶೇಷವಾಗಿದೆ ಎನ್ನಬಹುದು.

Trending

To Top