ಬೆಂಗಳೂರು: ಸ್ಯಾಂಡಲ್ ವುಡ್ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಬಹುನಿರೀಕ್ಷಿತ ಚಿತ್ರ ಯುವರತ್ನ ಚಿತ್ರದ ರಿಲೀಸ್ ಡೇಟ್ ಬಹಿರಂಗವಾಗಿದೆ. ಈ ಕುರಿತು ಹೊಂಬಾಳೆ ಫಿಲ್ಸ್ಮ್ ಟ್ವಿಟರ್ ನಲ್ಲಿ ರಿಲೀಸ್ ಡೇಟ್ ರಿವೀಲ್ ಮಾಡಿದ್ದಾರೆ.
ಕಳೆದೆರಡು ದಿನಗಳ ಹಿಂದೆಯೇ ಯುವರತ್ನ ಚಿತ್ರದ ಕುರಿತು ಹೊಸ ವರ್ಷಕ್ಕೆ ಬಿಗ್ ಅಪ್ಡೇಟ್ ನೀಡುವುದಾಗಿ ಚಿತ್ರತಂಡ ತಿಳಿಸಿತ್ತು. ಅದರಂತೆ ಹೊಸವರ್ಷದ ಮೊದಲ ದಿನದಂದೇ ಅಪ್ಪು ಅಭಿಮಾನಿಗಳಿಗೆ ಬಿಗ್ ಸರ್ಪೈಸ್ ನೀಡಿದ್ದು, ಅಪ್ಪು ಅಭಿಮಾನಿಗಳನ್ನು ಕುಣಿದು ಕುಪ್ಪಳಿಸುವಂತೆ ಮಾಡಿದೆ.
ಹೊಂಬಾಳೆ ಬ್ಯಾನರ್ ನಡಿ ಸಂತೋಷ್ ಆನಂದ್ ಹಾಗೂ ಪುನೀತ್ ರಾಜಕುಮಾರ್ ಕಾಂಬಿನೇಷನಲ್ಲಿ ತಯಾರಾಗಿರುವ ಯುವರತ್ನ ಸಿನೆಮಾ ಏಪ್ರಿಲ್ ೧ ರಂದು ಚಿತ್ರಮಂದಿರಗಳಲ್ಲಿ ಕಾಣಿಸಿಕೊಳ್ಳಲಿದೆ. ಇನ್ನೂ ಕೊರೋನಾ ಲಾಕ್ ಡೌನ್ ಬಳಿಕ ಕನ್ನಡದ ಬಿಗ್ ಬಜೆಟ್ ಚಿತ್ರ ಬಿಡುಗಡೆಯಾಗಲಿರುವ ಮೊದಲ ಸಿನೆಮಾ ಯುವರತ್ನ ಎನ್ನಲಾಗಿದೆ.
ಇನ್ನೂ ಯುವರತ್ನ ಚಿತ್ರದ ಹಾಡುಗಳು ತೆಲುಗು ಹಾಗೂ ಕನ್ನಡ ಭಾಷೆಯಲ್ಲಿ ಏಕಕಕಾಲಕ್ಕೆ ರಿಲೀಸ್ ಆಗಲಿದೆ ಎನ್ನಲಾಗಿದೆ. ಈಗಾಗಲೇ ಚಿತ್ರದ ೨ ಹಾಡುಗಳು ರಿಲೀಸ್ ಆಗಿದ್ದು, ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ಹಲ್ ಚಲ್ ಕ್ರಿಯೇಟ್ ಮಾಡಿದೆ. ಇನ್ನೂ ಪುನೀತ್ ರಾಜಕುಮಾರ್ ರವರಿಗೆ ನಾಯಕಿಯಾಗಿ ಸಯೇಶಾ ನಟಿಸಲಿದ್ದು, ಸಯೇಶಾ ಅವರ ಮೊದಲ ಕನ್ನಡ ಚಿತ್ರ ಇದಾಗಿದೆ.
