Film News

ಅಪ್ಪು ಅಭಿಮಾನಿಗಳಿಗೆ ಡಿ.25 ರಂದು ಸಿಗಲಿದೆ ಭರ್ಜರಿ ಗಿಫ್ಟ್

ಬೆಂಗಳೂರು: ಸ್ಯಾಂಡಲ್ ವುಡ್ ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಯುವರತ್ನ ಚಿತ್ರಕ್ಕಾಗಿ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಇದರ ಭಾಗವಾಗಿ ಅಭಿಮಾನಿಗಳಿಗಾಗಿ ಡಿ.25 ರಂದು ಮಧ್ಯಾಹ್ನ ಚಿತ್ರದ ಎರಡನೇ ಹಾಡನ್ನು ರಿಲೀಸ್ ಮಾಡುವ ಮೂಲಕ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ನಿಡುತ್ತಿದೆ ಚಿತ್ರತಂಡ.

ಹೊಂಬಾಳೆ ಫಿಲ್ಸ್ಮ ಬ್ಯಾನರ್ ನಡಿ ನಿರ್ಮಾಣವಾಗಿರುವ ಯುವರತ್ನ ಚಲನಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ. ಕರೋನಾ ಹಿನ್ನೆಲೆಯಲ್ಲಿ ಬಿಡುಗಡೆ ತಡವಾಗಿದ್ದು, ಚಿತ್ರಮಂದಿರಗಳಲ್ಲಿ ಮುಂದಿನ ವರ್ಷ ಕಾಣಿಸಿಕೊಳ್ಳಲಿದೆ. ಈಗಾಗಲೇ ಚಿತ್ರದ ಪವರ್ ಆಫ್ ಯೂತ್ ಗೀತೆ ಅಪ್ಪು ಅಭಿಮಾನಿಗಳ ಹೃದಯ ಗೆದ್ದಿದ್ದು, ಚಿತ್ರತಂಡ ಇದೀಗ ಎರಡನೇ ಗೀತೆಯನ್ನು ಡಿ.೨೫ರಂದು ರಿಲೀಸ್ ಮಾಡುವ ಮೂಲಕ ಅಭಿಮಾನಿಗಳಲ್ಲಿ ಇನಷ್ಟು ಹುಮ್ಮಸ್ಸು ಹೆಚ್ಚಿಸುವಂತೆ ಮಾಡುತ್ತಿದೆ.

ಎಸ್.ತಮನ್ ಸಂಗೀತ ನಿರ್ದೇಶನದಲ್ಲಿ ಮೂಡಿಬಂದಿರುವ ಯುವರತ್ನ ಚಿತ್ರದ ಎರಡನೇ ಗೀತೆ ನೀನಾದೆ ನಾ ಸಾಲುಗಳಿಂದ ಪ್ರಾರಂಭವಾಗುತ್ತಿದ್ದು, ಇದು ರೊಮ್ಯಾಂಟಿಕ್ ಗೀತೆಯಾಗಿದೆ. ಇನ್ನೋಂದು ವಿಶೇಷವೆಂದರೇ ಈ ಗೀತೆ ತೆಲುಗು ಭಾಷೆಯಲ್ಲಿ ಕೂಡ ಅಂದೇ ರಿಲೀಸ್ ಆಗುತ್ತಿದೆ. ಈಗಾಗಲೇ ಪವರ್ ಆಫ್ ಯೂತ್ ಸಾಂಗ್ ಟ್ರೆಂಡಿಂಗ್ ನಲ್ಲಿದ್ದು, ಅಪ್ಪು ಅಭಿಮಾನಿಗಳು ಕುಣಿದು ಕುಪ್ಪಳಿಸುತ್ತಿದ್ದಾರೆ. ಇದೀಗ ರಿಲೀಸ್ ಆಗಲಿರುವ ಎರಡನೇ ಗೀತೆ ಅಭಿಮಾನಿಗಳನ್ನು ರೊಮ್ಯಾಂಟಿಕ್ ಮೂಡ್ ಗೆ ಕರೆದುಕೊಂಡು ಹೋಗಲಿದೆ ಎನ್ನಲಾಗುತ್ತಿದೆ.

ಈ ಹಿಂದೆಯಷ್ಟೆ ಯುವರತ್ನ ಪವರ್ ಆಫ್ ಯೂತ್ ಸಾಂಗ್ ಚಾಲೆಂಜ್ ನ್ನು ಸಹ ಚಿತ್ರತಂಡ ಇಟ್ಟಿದ್ದು, ಇದರಲ್ಲಿ ೫ ಮಂದಿ ವಿಜೇತರಾಗಿದ್ದು, ಅವರು ಪುನೀತ್ ರಾಜ್ ಕುಮಾರ್ ರವರನ್ನು ಮೀಟ್ ಮಾಡುವ ಅವಕಾಶ ಸಿಕ್ಕಿದೆ ಎಂದು ಚಿತ್ರತಂಡ ತಿಳಿಸಿದೆ.

Trending

To Top