News

(video)ಪುನೀತ್ ಅವರ ಯುವರತ್ನ 4 -5 ಭಾಷೆಯಲ್ಲಿ ಅಲ್ಲ, ಕನ್ನಡದಲ್ಲಿ ಮಾತ್ರ ಎಂದು ಹೇಳಿದ ನಿರ್ದೇಶಕ ಸಂತೋಷ್

yuvaratna

ನಮ್ಮ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಮುಂದಿನ ಚಿತ್ರದ ಹೆಸರು ಯುವರತ್ನ. ಇತ್ತೀಚಿಗೆ ನಮ್ಮ ಬೆಂಗಳೂರಿನಲ್ಲಿ ಯುವರತ್ನ ಚಿತ್ರದ ಟೈಟಲ್ ಲಾಂಚ್ ಆಗಿತ್ತು. ಯುವರತ್ನ ಚಿತ್ರದ ನಿರ್ದೇಶಕ ಸಂತೋಷ್ ಆನಂದರಾಮ್. ಈ ಹಿಂದಿ ಸಂತೋಷ್ ಆನಂದರಾಮ್ ಅವರು ರಾಮಾಚಾರಿ ಹಾಗು ರಾಜಕುಮಾರ ಚಿತ್ರವನ್ನು ನಿರ್ದೇಶನ ಮಾಡಿ ಸೈ ಎನಿಸಿಕೊಂಡಿದ್ದರು. ಈ ಎರಡು ಚಿತ್ರಗಳು ಕೂಡ ಬ್ಲಾಕ್ ಬಸ್ಟರ್ ಸೂಪರ್ ಹಿಟ್ ಆಗಿತ್ತು. ಈಗ ಸಂತೋಷ್ ಅವರು ಪುನೀತ್ ಅವರಿಗೆ ಮತ್ತೊಂದು ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಯುವರತ್ನ ಚಿತ್ರ 4 ಭಾಷೆಯಲ್ಲಿ ಬಿಡುಗಡೆ ಆಗುತ್ತದೆ ಎಂದು ಕೆಲವು ಊಹಾ ಪೋಹಗಳಿಗೆ ಸಂತೋಷ್ ಅವರು ಏನ್ ಎಂದು ಹೇಳಿದ್ದಾರೆ, ಒಮ್ಮೆ ಈ ಕೆಳಗಿನ ವಿಡಿಯೋ ನೋಡಿರಿ
ಸಂತೋಷ್ ಆನಂದ್ ರಾಮ್ ಅವರು ಕನ್ನಡದ ಅದ್ಭುತ ನಿರ್ದೇಶಕರಲ್ಲಿ ಒಬ್ಬರು. ಇವರ ನಿರ್ದೇಶನದ ರಾಮಾಚಾರಿ ಹಾಗು ರಾಜಕುಮಾರ ಚಿತ್ರಗಳು ಕನ್ನಡ ಚಿತ್ರ ರಂಗದ ಎಲ್ಲ ಟೈಮ್ ರೆಕಾರ್ಡ್ ಅಲ್ಲಿ ಸೇರಿದೆ. ಈ ವಿಷ್ಯ ನಿಮಗೆ ಗೊತ್ತೇ ಇದೆ! ಈಗ ಪುನೀತ್ ರಾಜಕುಮಾರ್ ಜೊತೆ ಎರಡನೇ ಸಿನಿಮಾ ಮಾಡಕ್ಕೆ ರೆಡಿ ಆಗಿದ್ದಾರೆ ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರು ಈ ಚಿತ್ರದ ಟೈಟಲ್ ಬಗ್ಗೆ ಹೇಳಿದ್ದಾರೆ. ಈ ಚಿತ್ರ ಹೊಂಬಾಳೆ ಪ್ರೋಡ್ಯೂಕ್ಷನ್ಸ್ ಅವರು ನಿರ್ಮಾಣ ಮಾಡುತ್ತಿದ್ದಾರೆ ಹಾಗು ಈ ಚಿತ್ರದ ಬೇರೆ ನಟರ ಬಗ್ಗೆ ಅಷ್ಟೇನೂ ಮಾಹಿತಿ ಸಂತೋಷ್ ಅವರು ಕೊಟ್ಟಿಲ್ಲ. ಇನ್ನು ಗ್ರೌಂಡ್ ವರ್ಕ್ ಸ್ಟೇಜ್ ನಲ್ಲಿ ಈ ಚಿತ್ರ ಇದೆ. ಸದ್ಯ ನಮ್ಮ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ತಮ್ಮ ನಟ ಸಾರ್ವಭೌಮ ಚಿತ್ರದಲ್ಲಿ ಬಹಳ ಬ್ಯುಸಿ ಆಗಿದ್ದಾರೆ. ಈ ಚಿತ್ರವನ್ನು ಪವನ್ ವಡೆಯರ್ ನಿರ್ದೇಶನ ಮಾಡುತ್ತಿದ್ದಾರೆ ಹಾಗು ಅತೀ ಶೀಘ್ರದಲ್ಲೇ ಈ ಚಿತ್ರ ತೆರೆಕಾಣಲಿದೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ, ಪವನ್ ವಡೆಯರ್ ನಿರ್ದೇಶನದ ನಟಸಾರ್ವಭೌಮ ಚಿತ್ರದ ಮೊದಲ ಟೀಸರ್ ಬಿಡುಗಡೆ ಆಗಿದೆ. ಟೀಸರ್ ಬಿಡುಗಡೆ ಆಗಿ ಕೆಲವೇ ಕೆಲವು ಘಂಟೆ ಗಳಲ್ಲಿ ಬರೋಬ್ಬರಿ 1 ಲಕ್ಷ ಜನ ಈ ಟೀಸರ್ ಅನ್ನು ನೋಡಿದ್ದಾರೆ. ಟೀಸರ್ ಮಾತ್ರ ಅದ್ಭುತ ವಾಗಿದೆ ಗುರು. ಅಪ್ಪು ಅವರ ಡಾನ್ಸ್ ಹಾಗು ಆಕ್ಷನ್ ಬಗ್ಗೆ ಮಾತಾಡೋಹಾಗೆ ಇಲ್ಲ! ನಟಸಾರ್ವಭೌಮ ಚಿತ್ರವನ್ನು ರಾಕ್ ಲೈನ್ ವೆಂಕಟೇಶ್ ಅವರು ನಿರ್ಮಾಣ ಮಾಡಿದ್ದಾರೆ. ಈ ಚಿತ್ರದಲ್ಲಿ ರಚಿತಾ ರಾಮ್ ಹಾಗು ಅನುಪಮಾ ಪರಮೇಶ್ವರಂ ಅವರು ನಟಿಸಿದ್ದಾರೆ. ಚಿತ್ರದ ಟೀಸರ್ ತಪ್ಪದೆ ನೋಡಿರಿ, ಈ ಕೆಳಗಿನ ವಿಡಿಯೋ ನೋಡಿರಿ
ನಟಸಾರ್ವಭೌಮ ಕನ್ನಡದ ಬಹು ನಿರೀಕ್ಷೆಯ ಚಿತ್ರಗಳಲ್ಲಿ ಒಂದು. ಈ ಚಿತ್ರದಲ್ಲಿ ನಮ್ಮ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಮುಖ್ಯ ಪಾತ್ರ ದಲ್ಲಿ ನಟಿಸಿದ್ದಾರೆ. ಪುನೀತ್ ರಾಜಕುಮಾರ್ ಅವರ ಜೊತೆ ನಟಿಯರಾದ ರಚಿತಾ ರಾಮ್ ಹಾಗು ಅನುಪಮಾ ಅವರು ನಟಿಸಿದ್ದಾರೆ. ಇದಲ್ಲದೆ ನಟಸಾರ್ವಭೌಮ ಚಿತ್ರದಲ್ಲಿ ಆರ್ಮುಗಂ ರವಿಶಂಕರ್, ಚಿಕ್ಕಣ್ಣ, B ಸರೋಜಾ ದೇವಿ, ಅವರು ಕೂಡ ನಟಿಸಿದ್ದಾರೆ. ನಟಸಾರ್ವಭೌಮ ಚಿತ್ರದ ಚಿತ್ರೀಕರಣ ಮುಗಿದಿದೆ, ಮುಂದಿನ ವರ್ಷ january ತಿಂಗಳಲ್ಲಿ ಈ ಚಿತ್ರ ನಿಮ್ಮ ನೆಚ್ಚಿನ ಚಿತ್ರಮಂದಿರ ಗಳಲ್ಲಿ ತೆರೆ ಕಾಣಲಿದೆ.
ಪುನೀತ್ ರಾಜಕುಮಾರ್ ಅಭಿನಯದ ನಟಸಾರ್ವಭೌಮ ಚಿತ್ರವೂ ಇದೆ ವರ್ಷ ಸೆಟ್ಟೇರಿತ್ತು. ಸುಮಾರು 8 ತಿಂಗಳ ಚಿತ್ರೀಕರಣದ ನಂತರ ಚಿತ್ರದ ಮೊದಲ ಟೀಸರ್ ಈಗ ಬಿಡುಗಡೆ ಆಗಿದೆ. ನಟಸಾರ್ವಭೌಮ ಚಿತ್ರವನ್ನು ಕೊಲ್ಕತ್ತಾ ದಲ್ಲಿ ಚಿತ್ರೀಕರಣ ಮಾಡಲಾಗಿತ್ತು. ನಟಸಾರ್ವಭೌಮ ಚಿತ್ರಕ್ಕೆ D ಇಮ್ಮನ್ ಅವರು ಸಂಗೀತ ನಿರ್ದೇಶನವನ್ನು ಮಾಡಿದ್ದಾರೆ. ಈ ವರ್ಷದ ಬಹು ನಿರೀಕ್ಷೆಯ ಚಿತ್ರ ಗಳಲ್ಲಿ ನಟಸಾರ್ವಭೌಮ ಕೂಡ ಒಂದು. ನಟಸಾರ್ವಭೌಮ ಚಿತ್ರದ ಮುಂಚೆ ಪುನೀತ್ ರಾಜಕುಮಾರ್ ಅವರು ಅಂಜನಿ ಪುತ್ರ ಚಿತ್ರದಲ್ಲಿ ನಟಿಸಿದ್ದರು. ಈ ಚಿತ್ರ ಸೂಪರ್ ಹಿಟ್ ಆಗಿತ್ತು. ಅಂಜನಿ ಪುತ್ರ ಚಿತ್ರವನ್ನು A ಹರ್ಷ ಅವರು ನಿರ್ದೇಶನ ಮಾಡಿದ್ದರು.

Trending

To Top