Film News

ಯುವ ನಿರ್ದೇಶಕನ ಸಾರಥ್ಯದಲ್ಲಿ ಮೂಡಿಬರಲಿದೆ ವಿಭಿನ್ನ ಸ್ಟೋರಿಯುಳ್ಳ ಚಿತ್ರ

ಬೆಂಗಳೂರು: ಚಿಕ್ಕಂದಿನಿಂದಲೇ ಬಣ್ಣದ ಲೋಕಕ್ಕೆ ಕಾಲಿಡುವ ಕನಸು ಕಂಡ ಯುವ ನಿರ್ದೇಶಕನ ಸಾರಥ್ಯದಲ್ಲಿ ವಿಭಿನ್ನ ಶೈಲಿಯ ಸ್ಟೋರಿ ಓರಿಯೆಂಟೆಂಡ್ ಚಿತ್ರವೊಂದು ಶೀಘ್ರದಲ್ಲೇ ತೆರೆಗೆ ಬರಲಿದೆ ಎನ್ನಲಾಗಿದೆ.


ಸೌನವಿ ಕ್ರಿಯೇಷನ್ಸ್ ಬ್ಯಾನರ್‌ನಡಿಯಲ್ಲಿ ತಯಾರಾಗುತ್ತಿರುವ ಯುವ ನಿರ್ದೇಶಕ ನವೀನ್ ಬಾಬು ನಾಯಕ ರವರ ಚೊಚ್ಚಲ ಚಿತ್ರ ನೈಟ್ಮೇರ್ (ನೀ ಮಾಯೆಯೊಳಗೊ, ಮಾಯೆ ನಿನ್ನೋಳಗೋ) ಎಂಬ ಚಿತ್ರ ಶೂಟಿಂಗ್ ಕೆಲಸ ಮುಕ್ತಾಯವಾಗಿದ್ದು ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು, ಬೆಂಗಳೂರಿನ ಖ್ಯಾತ ಚಾಮುಂಡೇಶ್ವರಿ ಸ್ಟುಡಿಯೋ ಮತ್ತು ಲ್ಯಾಬೋರೇಟರಿ ಕೆಲಸ ನಡೆಯುತ್ತಿದೆ. ಇನ್ನೂ ಈ ಚಿತ್ರದಲ್ಲಿ ನಿರ್ದೇಶಕ ನವೀನ್ ನಾಯಕನಾಗಿಯೂ ಸಹ ನಟಿಸಿದ್ದಾರೆ. ಜೊತೆಗೆ ಈ ಚಿತ್ರಕ್ಕೆ ಕಿತ್ತಾನೆ ಗೋಪಿ ಎಂಬುವವರು ಜಂಟಿಯಾಗಿ ನಿರ್ದೇಶನ ಸಹ ಮಾಡಿದ್ದಾರೆ.  ಈ ಚಿತ್ರ ಸೈಕಲಾಜಿಕಲ್ ಸಸ್ಪೆನ್ಸ್ ಥ್ರಿಲ್ಲರ್ ಕಾಮಿಡಿ ಸಿನೆಮಾ ಆಗಿದ್ದು, ಪ್ರೇಕ್ಷಕರ ಮನಗೆಲ್ಲಲಿದೆ. ಇನ್ನೂ ಈ ಸಿನೆಮಾವನ್ನು ಆದಷ್ಟೂ ಶೀಘ್ರದಲ್ಲೇ ತೆರೆ ಮೇಲೆ ತರುವುದಾಗಿ ನವೀನ್ ತಿಳಿಸಿದ್ದಾರೆ.

ಇನ್ನೂ ನವೀನ್ ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನವರು. ಚಿಕ್ಕಂದಿನಿಂದಲೇ ಬಣ್ಣದ ಲೋಕದಲ್ಲಿ ಸಾಧನೆ ಮಾಡಬೇಕೆಂಬ ಛಲ ಇಟ್ಟುಕೊಂಡಿದ್ದ ನವೀನ್ ಪಿಯುಸಿ ವ್ಯಾಸಂಗ ಮಾಡುತ್ತಿರುವಾಗಲೇ ನಾಯಕ ನಟ ಹಾಗೂ ನಿರ್ದೇಶಕ ಉಪೇಂದ್ರ ರವರಿಗೆ ಕರೆ ಮಾಡಿ ಸಿನೆಮಾದಲ್ಲಿ ನಟಿಸಲು ಅವಕಾಶ ಕೇಳಿದ್ದರು. ಮೊದಲು ಶಿಕ್ಷಣಕ್ಕೆ ಒತ್ತು ನೀಡು ನಂತರ ಸಿನೆಮಾ ಕ್ಷೇತ್ರಕ್ಕೆ ಬಾ ಎಂದು ಹೇಳಿದ್ದರಂತೆ.


ಇನ್ನೂ ನವೀನ್ ಹಾಂಗ್‌ಕಾಂಗ್ ಪ್ರವಾಸದಲ್ಲಿದ್ದಾಗ ಪ್ರತೀ ದಿನ ವಾಂಚಯಿ ಪ್ರದೇಶದಲ್ಲಿರುವ ಸ್ಟಾರ್‍ಸ್ ಆಫ್ ಅವೆನ್ಯೂ ಎಂಬಲ್ಲಿಗೆ ಭೇಟಿ ನೀಡಿ ಅಲ್ಲಿ ಚಿತ್ರರಂಗಕ್ಕೆ ಸಂಬಂಧಿಸಿದ ವಿಷಯಗಳನ್ನು ತಿಳಿದು, ಅಲ್ಲಿದ್ದ ಡೈರೆಕ್ಟರ್ ಕುರ್ಚಿಯಲ್ಲಿ ಕೂತು ನಿರ್ದೇಶಕನಾಗುವ ಕನಸು ಕಾಣುತ್ತಿದ್ದ ನವೀನ್ ಇದೀಗ ಮೊದಲ ಚಿತ್ರದ ಮೂಲಕ ತಮ್ಮ ಆಸೆಯನ್ನು ಪೂರೈಸಿಕೊಂಡಿದ್ದಾರೆ. ಇನ್ನೂ ನವೀನ್ ಬಿಗ್ ಬಜೆಟ್ ಸಿನೆಮಾವೊಂದನ್ನು ನಿರ್ದೇಶನ ಮಾಡುವ ಕೆಲಸದಲ್ಲಿದ್ದು ಸ್ಟಾರ್ ನಟರೊಬ್ಬರ ಡೇಟ್ಸ್‌ಗಾಗಿ ಕಾಯುತ್ತಿದ್ದಾರೆ.

Trending

To Top