ಧಮಾಕಾ ಸಿನೆಮಾದಲ್ಲಿನ ರೊಮ್ಯಾನ್ಸ್ ಟ್ರೋಲ್ ಗೆ ಶ್ರೀಲೀಲಾ ಮೈಂಡ್ ಬ್ಲಾಕಿಂಗ್ ಕೌಂಟರ್, ಟ್ರೋಲ್ ಗಳ ಬಾಯಿ ಮುಚ್ಚಿಸಿದ ನಟಿ…!

ಕನ್ನಡದ ನಟಿ ಶ್ರೀಲೀಲಾ ಟಾಲಿವುಡ್ ನಲ್ಲಿ ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಬ್ಯುಸಿಯಾಗಿದ್ದಾರೆ. ಅದರಲ್ಲೂ ಆಕೆಯ ಕೈಯಲ್ಲಿ ಬಿಗ್ ಬಜೆಟ್, ಸ್ಟಾರ್‍ ನಟರ ಸಿನೆಮಾಗಳೇ ಎಂಬುವುದು ವಿಶೇಷ ಎನ್ನಬಹುದಾಗಿದೆ. ಇನ್ನೂ ಆಕೆ ಮಾಸ್ ಮಹಾರಾಜ ರವಿತೇಜ ಜೊತೆಗೆ ಧಮಾಕಾ ಸಿನೆಮಾದಲ್ಲಿ ನಟಿಸಿದ್ದು, ಈ ಸಿನೆಮಾದಲ್ಲಿ ಆಕೆ ರವಿತೇಜ ಜೊತೆಗೆ ರೊಮ್ಯಾನ್ಸ್ ಮಾಡಿರುವ ವಿಚಾರಕ್ಕೆ ವಿಮರ್ಶೆಗಳು ಎದುರಾಗಿತ್ತು. ಈ ವಿಮರ್ಶೆಗಳಿಗೆ ಆಕೆ ಮೈಂಡ್ ಬ್ಲಾಕ್ ಆಗುವಂತಹ ಕೌಂಟರ್ ಕೊಟ್ಟಿದ್ದಾರೆ.

ಪೀಪುಲ್ಸ್ ಮಿಡಿಯಾ ಫ್ಯಾಕ್ಟರಿ ನಿರ್ಮಾಣದಲ್ಲಿ ತ್ರಿನಾಧರಾವ್ ನಿರ್ದೇಶನದಲ್ಲಿ ಮೂಡಿಬಂದ ಧಮಾಕಾ ಸಿನೆಮಾದಲ್ಲಿ ಮಾಸ್ ಮಹಾರಾಜ ರವಿತೇಜ ಹಾಗೂ ಶ್ರೀಲೀಲಾ ನಟಿಸಿದ್ದಾರೆ. ಈ ಸಿನೆಮಾದ ಪ್ರಮೋಷನ್ ಸಹ ಚಿತ್ರತಂಡ ಭರ್ಜರಿಯಾಗಿ ನೆರವೇರಿಸಿದೆ. ಈ ಪ್ರಮೋಷನ್ ಭಾಗವಾಗಿ ಚಿತ್ರತಂಡ ಕೆಲವೊಂದು ಚಾನಲ್ ಗಳಿಗೆ ಸಂದರ್ಶನ ಸಹ ನೀಡಿದೆ. ಡಿ.23 ರಂದು ಈ ಸಿನೆಮಾ ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಚಿತ್ರತಂಡ ಮಾಡಿದ ವಿಭಿನ್ನವಾಗಿ ಮಾಡಿದ ಪ್ರಮೋಷನ್ ಕಾರಣದಿಂದಾಗಿ ಸಿನೆಮಾದ ಮೇಲೆ ನಿರೀಕ್ಷೆ ದುಪ್ಪಟ್ಟು ಆಗಿದೆ. ಇನ್ನೂ ಈ ಸಿನೆಮಾದಲ್ಲಿ ಶ್ರೀಲೀಲಾ ತನಗಿಂತ ತುಂಬಾ ವಯಸ್ಸಿನಲ್ಲಿ ದೊಡ್ಡವರಾದ ರವಿತೇಜ ಜೊತೆಗೆ ನಟಿಸಿದ ಬಗ್ಗೆ ಕೆಲವರು ವಿಮರ್ಶೆ ಮಾಡಿದ್ದರು. ಇದೀಗ ಪ್ರಮೋಷನ್ ಒಂದರಲ್ಲಿ ಶ್ರೀಲೀಲಾ ಅದಕ್ಕೆ ಸ್ಟ್ರಾಂಗ್ ಆಗಿಯೇ ಉತ್ತರ ನೀಡಿದ್ದಾರೆ.

ನಟಿ ಶ್ರೀಲೀಲಾಗೆ ಸದ್ಯ 21 ವಯಸ್ಸು, ರವಿತೇಜಾ ರವರು ಶೀಘ್ರದಲ್ಲೇ ಹಾಫ್ ಸೆಂಚುರಿ ದಾಟಿದ್ದಾರೆ. ಅವರ ವಯಸ್ಸು 54 ವರ್ಷ. ಈ ಕಾಂಬಿನೇಷನ್ ಬಗ್ಗೆ ಅನೇಕರು ವಿಮರ್ಶೆಗಳನ್ನು ಮಾಡುತ್ತಿದ್ದಾರೆ. ಸೀನಿಯರ್‍ ನಟರನೊಂದಿಗೆ ಯಂಗ್ ನಟಿ ನಟಿಸಿದ್ದ ಕಾರಣ ಅನೇಕರು ಟ್ರೋಲ್ ಸಹ ಮಾಡಿದ್ದರು. ಇದೇ ವಿಚಾರ ಶ್ರೀಲೀಲಾಗೆ ಪ್ರಶ್ನೆ ಎದುರಾಗಿತ್ತು. ಈ ಬಗ್ಗೆ ಮಾತನಾಡಿದ ಶ್ರೀಲೀಲಾ ನನಗಿಂತ ಮುಂದೆ ಅನೇಕ ಸ್ಟಾರ್‍ ನಟಿಯರು ಹೆಚ್ಚು ವಯಸ್ಸಿನ ಹಿರೋಗಳೊಂದಿಗೆ ನಟಿಸಿ ಜಯ ಗಳಿಸಿದ್ದಾರೆ. ಅವರೇ ವಯಸ್ಸಿನ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಅಂತಹುದರಲ್ಲಿ ನಾನು ಎಷ್ಟು ಹೇಳಿ ಎಂದು ನಗುತ್ತಲೇ ಹೇಳಿದ್ದಾರೆ. ಸದ್ಯ ಆಕೆಯ ಈ ಹೇಳಿಕೆಯಿಂದ ಏಜ್ ಗ್ಯಾಪ್ ಬಗ್ಗೆ ಹುಟ್ಟಿಕೊಂಡ ವಿಮರ್ಶೆಗಳಿಗೆ ಚೆಕ್ ಇಟ್ಟಿದ್ದಾರೆ.

ಪೆಳ್ಳಿಸಂದಡಿ ಸಿನೆಮಾದ ಮೂಲಕ ತೆಲುಗು ಸಿನೆಮಾಗಳಲ್ಲಿ ಎಂಟ್ರಿ ಕೊಟ್ಟ ಶ್ರೀಲೀಲಾ ಸಾಲು ಸಾಲು ಸಿನೆಮಾಗಳಿಗೆ ಒಪ್ಪಿಗೆ ನೀಡುತ್ತಿದ್ದಾರೆ. ಧಮಾಕಾ ಸಿನೆಮಾದಲ್ಲಿ ರವಿತೇಜಾ ಜೊತೆಗೆ ಜಿಂತಾಕ್ ಎಂಬ ಹಾಡಿನಲ್ಲಿ ಶ್ರೀಲೀಲಾ ಮಾಸ್ ಸಾಂಗ್ ನಲ್ಲಿ ಸಖತ್ ಸ್ಟೆಪ್ಸ್ ಹಾಕಿದ್ದಾರೆ. ಆಕೆಯ ಗ್ಲಾಮರ್‍, ಡ್ಯಾನ್ಸ್ ಎಲ್ಲಾ ನೋಡುತ್ತಿದ್ದರೇ ಆಕೆ ಪಕ್ಕಾ ಟಾಲಿವುಡ್ ನಲ್ಲಿ ಸ್ಟಾರ್‍ ನಟಿಯಾಗಬಹುದು ಎಂಬ ಮಾತುಗಳು ಸಹ ಕೇಳಿಬರುತ್ತಿದೆ.

Previous articleಲೆಹಂಗಾದಲ್ಲಿ ವಿವಿಧ ಭಂಗಿಮಗಳಲ್ಲಿ ಹಾಟ್ ಪೋಸ್ ಕೊಟ್ಟ ಜಬರ್ದಸ್ತ್ ವರ್ಷ, ವೈರಲ್ ಆದ ಪೊಟೋಸ್……!
Next articleರೆಡ್ ಕಲರ್ ಟ್ರಾನ್ಸಫರೆಂಟ್ ಮಾಡ್ರನ್ ಡ್ರೆಸ್ ನಲ್ಲಿ ಸೌಂದರ್ಯ ಸುನಾಮಿ ಹಬ್ಬಿಸಿದ ಬ್ಯೂಟಿ ಶೋಭಿತಾ ಧೂಳಿಪಾಲ….!