ಸ್ಟಾರ್ ನಟ ಧನುಷ್ ಬಗ್ಗೆ ಶಾಕಿಂಗ್ ಕಾಮೆಂಟ್ಸ್ ಹಾಕಿದ ಕಣ್ಸನ್ನೆ ಸುಂದರಿ, ಧನುಷ್ ರನ್ನು ಟಾರ್ಗೆಟ್ ಮಾಡಿದ ಪ್ರಿಯಾ ವಾರಿಯರ್…!

ಒಂದೇ ಒಂದು ಸೀನ್ ಮೂಲಕ ಇಡೀ ದೇಶವ್ಯಾಪಿ ಖ್ಯಾತಿ ಪಡೆದುಕೊಂಡ ಪ್ರಿಯಾ ವಾರಿಯರ್‍ ಬಗ್ಗೆ ಹೆಚ್ಚಿನ ಪರಿಚಯ ಅಗತ್ಯವಿಲ್ಲ. ಕಣ್ಸನ್ನೆ ಮೂಲಕವೇ ಎಲ್ಲರನ್ನೂ ತನ್ನತ್ತ ತಿರುಗಿ ನೋಡುವಂತೆ ಮಾಡಿದ ಖ್ಯಾತಿ ಈಕೆಗೆ ಸಲ್ಲುತ್ತದೆ. ಸ್ಟೈಲಿಷ್ ಸ್ಟಾರ್‍ ಅಲ್ಲು ಅರ್ಜುನ್ ರಂತವರನ್ನೂ ಸಹ ಆಕೆ ಕಣ್ಸನ್ನೆ ನೋಟ ಫಿದಾ ಮಾಡಿತ್ತು. ಮಲಯಾಳ ಮೂಲದ ಈಕೆ ಓವರ್‍ ನೈಟ್ ನಲ್ಲೇ ಕ್ರೇಜಿ ನಟಿಯಾದರು. ಆದರೆ ಸಿನಿರಂಗದಲ್ಲಿ ಮಾತ್ರ ಆ ಕ್ರೇಜ್ ಅನ್ನು ಕಾಪಾಡಿಕೊಳ್ಳಲು ವಿಫಲರಾಗಿದ್ದು, ಇದೀಗ ಸಿನೆಮಾಗಳಲ್ಲಿ ಸಕ್ಸಸ್ ಕಂಡುಕೊಳ್ಳಲು ಕಷ್ಟಪಡುತ್ತಿದ್ದಾರೆ. ಇದೀಗ ಆಕೆ ನಟ ಧನುಷ್ ಬಗ್ಗೆ ಕೆಲವೊಂದು ಹೇಳಿಕೆಗಳನ್ನು ನೀಡಿದ್ದು ಕಾಲಿವುಡ್ ನಲ್ಲಿ ಹಲ್ ಚಲ್ ಸೃಷ್ಟಿಸಿದೆ.

ನಟಿ ಪ್ರಿಯಾ ಪ್ರಕಾಶ್ ವಾರಿಯರ್‍ ಓರು ಆಧಾರ್‍ ಲವ್ ಸಿನೆಮಾದಲ್ಲಿ ಕಣ್ಸನ್ನೆ ಮಾಡುವಂತಹ ವಿಡಿಯೋ ಮೂಲಕ ಇಂಟರ್‍ ನೆಟ್ ನಲ್ಲಿ ಸಖತ್ ಸದ್ದು ಮಾಡಿದ್ದರು. ಆದರೆ ಈ ಸಿನೆಮಾದ ಬಳಿಕ ಯಾವುದೇ ಸಕ್ಸಸ್ ಆಗುವಂತಹ ಸಿನೆಮಾ ದೊರೆತಿಲ್ಲ. ಆಕೆಗೆ ಒಳ್ಳೆಯ ಸಿನೆಮಾ ಸಿಕ್ಕರೇ ತಾನು ಏನು ಎಂಬುದನ್ನು ನಿರೂಪಿಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ಗ್ಲಾಮರಸ್ ಪೊಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಈ ಗ್ಲಾಮರಸ್ ಪೋಸ್ ಗಳ ಮೂಲಕವೂ ತಾನು ಗ್ಲಾಮರಸ್ ಪಾತ್ರಗಳಲ್ಲೂ ಸಹ ಕಾಣಿಸಿಕೊಳ್ಳಲು ಸಿದ್ದ ಎಂಬಂತೆ ಸೂಚನೆ ನೀಡುತ್ತಿದ್ದಾರೆ. ಇತ್ತೀಚಿಗಷ್ಟೆ ಆಕೆ ಬಿಕಿನಿಯಲ್ಲಿ ಮೈಂಡ್ ಬ್ಲಾಕ್ ಆಗುವಂತಹ ಪೋಸ್ ಗಳನ್ನು ಕೊಟ್ಟಿದ್ದರು. ಆಕೆಯ ಪೊಟೋಗಳು ಕಡಿಮೆ ಸಮಯದಲ್ಲೇ ಸಖತ್ ವೈರಲ್ ಆಗಿತ್ತು. ಇನ್ನೂ ನಟಿ ಪ್ರಿಯಾ ವಾರಿಯರ್‍ ಮಲಯಾಳಂ, ಕನ್ನಡ, ತೆಲುಗು ಹಾಗೂ ಹಿಂದಿಯಲ್ಲೂ ಸಹ ಕೆಲವೊಂದು ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಇನ್ನೂ ಕಾಲಿವುಡ್ ಗೆ ಎಂಟ್ರಿ ಕೊಟ್ಟಿಲ್ಲ. ಈ ಹಾದಿಯಲ್ಲೇ ತಮಿಳು ಸ್ಟಾರ್‍ ನಟ ಧನುಷ್ ರವರನ್ನು ಟಾರ್ಗೆಟ್ ಮಾಡಿದ್ದಾರೆ.

ಇತ್ತೀಚಿಗೆ ಪ್ರಿಯಾ ವಾರಿಯರ್‍ ಧನುಷ್ ರವರ ಬಗ್ಗೆ ಅನೇಕ ಪೋಸ್ಟ್ ಗಳನ್ನು ಹಾಕುತ್ತಿದ್ದಾರೆ. ಕೆಲ ಮಿಡಿಯಾಗಳು ಧನುಷ್ ಬಗ್ಗೆ ಏಕೆ ಅಂತಹ ಪೋಸ್ಟ್ ಗಳನ್ನು ಮಾಡುತ್ತಿದ್ದೀರಾ ಎಂದು ಕೇಳಿದ್ದಾರೆ. ಇದಕ್ಕೆ ಉತ್ತರ ನೀಡಿದ ಪ್ರಿಯಾ ಧನುಷ್ ಎಂದರೇ ನನಗೆ ತುಂಬಾ ಇಷ್ಟ ಎಂದು ಹಾಟ್ ಕಾಮೆಂಟ್ ಮಾಡಿದ್ದಾರೆ. ಧನುಷ್ ಎಂದರೇ ನನಗೆ ತುಂಬಾ ಇಷ್ಟ, ಆತನೆಂದರೇ ಒಂದು ತರಹ ಹುಚ್ಚು, ಆತನೊಂದಿಗೆ ನಟಿಸಲು ತುಂಬಾ ದಿನಗಳಿಂದ ಕಾಯುತ್ತಿದ್ದೇನೆ. ನನ್ನ ತುಂಬಾ ದಿನಗಳ ಆಸೆ ಸಹ ಶೀಘ್ರದಲ್ಲೇ ನೆರವೇರಲಿದೆ ಎಂಬ ಆಸೆಯನ್ನು ಹೊಂದಿದ್ದೇನೆ ಎಂದು ಹೇಳಿದ್ದಾರೆ. ಇದರಿಂದ ಪ್ರಿಯಾ ವಾರಿಯರ್‍ ಸಣ್ಣ ವಯಸ್ಸಿನಲ್ಲೇ ಸ್ಟಾರ್‍ ನಟರ ಜೊತೆ ತೆರೆ ಹಂಚಿಕೊಳ್ಳುವ ಮಾದರಿಯಲ್ಲಿ ಆಕೆ ಕಾಮೆಂಟ್ ಗಳನ್ನು ಮಾಡಿದ್ದಾರೆ ಎಂದು ಕಾಮೆಂಟ್ ಗಳೂ ಸಹ ಕೇಳಿಬರುತ್ತಿವೆ.

ಇನ್ನೂ ನಟಿ ಪ್ರಿಯಾ ಮದುವೆಯಾದ ಧನುಷ್ ಬಗ್ಗೆ ಈ ರೀತಿಯಲ್ಲಿ ಮಾತನಾಡಿರುವುದು ಸಹ ಚರ್ಚೆಗೆ ಕಾರಣವಾದ ಅಂಶವಾಗಿದೆ. ಇನ್ನೂ ತೆಲುಗಿನಲ್ಲಿ ಪ್ರಿಯಾ ವಾರಿಯರ್‍ ಯಂಗ್ ನಟ ನಿತಿನ್ ಜೊತೆಗೆ ಚೆಕ್ ಎಂಬ ಸಿನೆಮಾದಲ್ಲಿ ನಟಿಸಿದ್ದರು. ಈ ಸಿನೆಮಾ ಸಹ ಆಕೆಗೆ ದೊಡ್ಡ ನಿರಾಸೆಯನ್ನು ಮೂಡಿಸಿತ್ತು. ಇದೀಗ ಮತ್ತೊಂದು ಒಳ್ಳೆಯ ಆಫರ್‍ ಗಾಗಿ ಆಕೆ ಕಾಯುತ್ತಿದ್ದಾರೆ. ಈ ಹಾದಿಯಲ್ಲೇ ಪ್ರಿಯಾ ವಾರಿಯರ್‍ ಸೋಷಿಯಲ್ ಮಿಡಿಯಾದಲ್ಲಿ ತೆರೆದ ಪುಸ್ತಕದಂತೆ ಹಾಟ್ ಟ್ರೀಟ್ ನೀಡುತ್ತಿದ್ದಾರೆ.

Previous articleಗ್ಲಾಮರ್ ವಿಚಾರಕ್ಕೆ ಸಂಬಂಧಿಸಿದಂತೆ ಶಾಕಿಂಗ್ ಹೇಳಿಕೆ ಕೊಟ್ಟ ನಿಧಿ ಅಗರ್ವಾಲ್, ವೈರಲ್ ಆದ ಕಾಮೆಂಟ್ಸ್…..!
Next articleಸ್ಟಾರ್ ಕಮೆಡಿಯನ್ ಗೀತಾಸಿಂಗ್ ಗೆ ಸಂಕಷ್ಟ, ಸ್ವಂತದವರೇ ಮೋಸ ಮಾಡಿದರು ಎಂದ ನಟಿ…!