ಚೆನೈ: ಕಾಲಿವುಡ್ ನ ಖ್ಯಾತ ನಟ ಅಜಿತ್ ಕುಮಾರ್ ಹಾಗೂ ನಟಿ ನಯನತಾರಾ ಕಾಂಬಿನೇಷನ್ ನಲ್ಲಿ ಮೂಡಿಬಂದ ವಿಶ್ವಾಸಂ ಚಿತ್ರ ದೊಡ್ಡ ಮಟ್ಟದಲ್ಲೇ ಹಿಟ್ ಹೊಡೆದಿತ್ತು. ಇನ್ನೂ ಅಜಿತ್ ಹಾಗೂ ನಯನತಾರ ಮಗಳ ಪಾತ್ರವನ್ನು ಪೋಷಣೆ ಮಾಡಿದ ಅನಿಕಾ ಸುರೇಂದರ್ ಹಾಟ್ ಅವತಾರದಲ್ಲಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆರಂತೆ.
ಅನಿಕಾ ಸುರೇಂದರ್ ಮಲಯಾಳಂ ಚಿತ್ರದಲ್ಲಿ ಬಾಲನಟಿಯಾಗಿ ಸಿನಿರಂಗಕ್ಕೆ ಎಂಟ್ರಿ ಕೊಟ್ಟಿದ್ದು, ತಮಿಳು ಸಿನೆಮಾಗಳಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಇದೀಗ ಅನಿಕಾ ಹಾಟ್ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಕಪ್ಪು ಬಟ್ಟೆ ಧರಿಸಿ ಹಾಟ್ ಆಗಿ ನೃತ್ಯವನ್ನು ಸಹ ಮಾಡಿದ್ದಾರೆ. ಈ ವಿಡಿಯೋ ಕಂಡ ಅಭಿಮಾನಿಗಳು ಶಾಕ್ ಆಗಿದ್ದಾರಂತೆ. ಇನ್ನೂ ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ.
ವಿಶ್ವಾಸಂ ಚಿತ್ರದಲ್ಲಿ ಅನಿಕಾ ನಟನೆ ಅನೇಕ ಪ್ರೇಕ್ಷಕರ ಮನ ಗೆದಿದ್ದು, ಅಜಿತ್ ರವರ ಎನೈ ಅರಿಂದಾಲ್ ಚಿತ್ರದ ಮೂಲಕ ತಮಿಳು ರಂಗಕ್ಕೆ ಕಾಲಿಟ್ಟರೂ ವಿಶ್ವಾಸಂ ಚಿತ್ರದ ಮೂಲಕ ಖ್ಯಾತಿ ಗಳಿಸಿದ್ದಾರೆ. ಇನ್ನೂ ಸಿನೆಮಾರಂಗದಲ್ಲಿ ತನ್ನ ಚಾಪು ಮೂಡಿಸಿಕೊಳ್ಳಲು ಸಿದ್ದರಾಗುತ್ತಿರುವ ಅನಿಕಾ, ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿ, ವಿಡಿಯೋ ಪೊಟೋಗಳನ್ನು ಆಗಾಗಾ ಶೇರ್ ಮಾಡುತ್ತಿರುತ್ತಾರೆ.
ಇನ್ನೂ ಈ ವೈರಲ್ ಆಗುತ್ತಿರುವ ವಿಡಿಯೋ ಕುರಿತು ಸ್ಪಷ್ಟನೆ ನೀಡಿರುವ ಅನಿಕಾ, ಈ ವಿಡಿಯೋ ನನ್ನದೇ ಅಲ್ಲ. ವಿಡಿಯೋದಲ್ಲಿ ನೃತ್ಯ ಮಾಡುತ್ತಿರುವುದು ನಾನಲ್ಲ. ಆ ವಿಡಿಯೋ ಎಡಿಟ್ ಮಾಡಿರಬಹುದಾಗಿದೆ. ಇದರಿಂದ ನಾನು ತುಂಬಾ ನೊಂದಿದ್ದೇನೆ. ಇಂತಹ ಘಟನೆ ಯಾವುದೇ ಹುಡುಗಿಗೂ ಆಗಬಾರದು. ಈ ವಿಡಿಯೋ ಕುರಿತು ಕಾನೂನು ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
