News

ಮುಖ್ಯಮಂತ್ರಿ ಯೋಗಿ ಅವರ ತಂಗಿ ಇವಾಗ ಕೂಡ ಟೀ ಮಾಡಿ ಜೀವನ ಸಾಗಿಸುತ್ತಿದ್ದಾರೆ! ಸತ್ಯ ಕಥೆ ನೋಡಿ

ರಾಜಕಾರಣಿಗಳು ಎಂದರೆ ಹಣ ಕೊಳ್ಳೆ ಹೊಡೆಯುವವರು ಎಂಬುದು ಎಲ್ಲರ ಭಾವನೆ. ಅದಕ್ಕೆ ತಕ್ಕ ಹಾಗೆಯೇ ದೇಶದಲ್ಲಿ ಅಂತಹ ರಾಜಕಾರಣಿಗಳು ಇರುವುದೇ ಹೆಚ್ಚು. ದೇಶದ ಜನರ ಸೇವೆ ಮಾಡುವವರಿಗಿಂತ ದೇಶದ ಸಂಪತ್ತನ್ನು ಕೊಳ್ಳೆ ಹೊಡೆಯುವವರೇ ಹೆಚ್ಚು ಈ ಕಾಲದಲ್ಲಿ.ಬಹುತೇಕ ಎಲ್ಲಾ ರಾಜಕಾರಣಿಗಳು ಮೊದಲು ತಮ್ಮ ಖಜಾನೆ ಭರ್ತಿ ಮಾಡಿಕೊಳ್ಳವುದರಲ್ಲಿಯೇ ಇರುತ್ತಾರೆ. ತಾವು, ತಮ್ಮ ಮಕ್ಕಳು, ಮೊಮ್ಮಕ್ಕಳು ಹೀಗೆ ಮೂರು ನಾಲ್ಕು ತಲೆಮಾರುಗಳಿಗೆ ಸರಿಹೋಗುವಷ್ಟು ಆಸ್ತಿಯನ್ನು ಗಳಿಸುವುದರಲ್ಲಿಯೇ ಗಮನ ಹರಿಸುತ್ತಾರೆ.ಇಂತಹ ಸ್ವಾರ್ಥ ಪ್ರಪಂಚದ ನಡುವೆ ಜನಸೇವೆಗಾಗಿ, ದೇಶದ ಒಳಿತಿಗಾಗಿ ಕೆಲಸ ಮಾಡಲು ಪಣತೊಟ್ಟು ಇತರರಿಗಿಂತ ಭಿನ್ನವಾಗಿರುವ ವ್ಯಕ್ತಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್. ಇವರ ಮೂಲ ಹೆಸರು ಅಜಯ್ ಮೋಹನ್, ಚಿಕ್ಕ ವಯಸ್ಸಿನಲ್ಲಿಯೇ ಜನ ಸೇವೆ ಮಾಡಬೇಕೆಂದು ಕುಟುಂಬವನ್ನು ಬಿಟ್ಟು ಸನ್ಯಾಸಿಯಾದರು, ನಂತರ ತಮ್ಮ ಹೆಸರನ್ನು ಯೋಗಿ ಆದಿತ್ಯನಾಥ್ ಎಂದು ಬದಲಾಯಿಸಿಕೊಂಡರು.

ಇವರಿಗೆ ಮೂವರು ಸಹೋದರರು ಹಾಗೂ ಮೂವರು ಸಹೋದರಿಯರು. ಇವರ ಸಹೋದರರಲ್ಲಿ ಇಬ್ಬರು ಸೈನಿಕರಾಗಿದ್ದರೆ. ಇನ್ನಿಬ್ಬರು ಸಹೋದರರು ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ಬದುಕನ್ನು ನಡೆಸುತ್ತಿದ್ದಾರೆ. ಅವರು ಮುಖ್ಯಮಂತ್ರರಿಯಾಗಿದ್ದರೂ ಕುಟುಂಬದ ಸ್ಥಿತಿ ಹಾಗೆಯೇ ಇದೆ. ಇವರ ಸಹೋದರಿಯಲ್ಲಿ ಒಬ್ಬರು ಶಶಿದೇವಿ. ಇವರು, ಟೀ ಅಂಗಡಿ ಇಟ್ಟುಕೊಂಡು ಸ್ವಾಭಿಮಾನಿಯಾಗಿ ಜೀವನ ನಡೆಸುತ್ತಿದ್ದಾರೆ. ಸ್ವಂತ ಅಣ್ಣ ಮುಖ್ಯಮಂತ್ರಿಯಾಗಿದ್ದರೂ ಅದರ ಬಗ್ಗೆ ಗರ್ವವಿಲ್ಲದೆ ಸಾಮಾನ್ಯರಂತೆ ಬದುಕುತ್ತಿದ್ದಾರೆ ಶಶಿದೇವಿ.

ಅಣ್ಣನ ಬಗ್ಗೆ ಕೇಳಿದರೆ, ಅವರು ಜನಸೇವೆಗಾಗಿ ಮನೆಬಿಟ್ಟು ಹೋಗಿ ಬಹಳ ವರ್ಷಗಳೇ ಆಗಿದೆ, ಅವರಿಂದ ನಾವು ಏನನ್ನೂ ಬಯಸುವುದಿಲ್ಲ. ಅಣ್ಣ ಮಾಡುತ್ತಿರುವ ನಿಸ್ವಾರ್ಥ ಸೇವೆಯನ್ನು ನೋಡಿ ನಮಗೆ ಖುಷಿಯಾಗಿದೆ ಎನ್ನುತ್ತಾರೆ. ಸ್ವಾರ್ಥದ ಪ್ರಪಂಚದ ನಡುವೆ ಇಂತಹ ಮಹಾನುಭಾವರು ಇರುವುದರಿಂದಲೇ ದೇಶದಲ್ಲಿ ಧರ್ಮ ಎನ್ನುವುದು ಉಳಿದುಕೊಂಡಿದೆ.

Trending

To Top