ನಿಮಗೆಲ್ಲ ಗೊತ್ತಿರೋ ಹಾಗೆ ನೆನ್ನೆ ತಾನೇ ಕನ್ನಡದ ಮುದ್ದಾದ ಜೋಡಿ ರಾಕಿಂಗ್ ಸ್ಟಾರ್ ಯಶ್ ಹಾಗು ರಾಧಿಕಾ ಪಂಡಿತ್ ಅವರು ಮುದ್ದಾದ ಒಂದು ಹೆಣ್ಣು ಮಗುವಿಗೆ ಜನ್ಮ ನೀಡಿದರು. ನೆನ್ನೆ ಮುಂಜಾನೆ ಬೆಂಗಳೂರಿನ ಹಾಸ್ಪಿಟಲ್ ಒಂದರಲ್ಲಿ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಈ ವಿಷ್ಯ ಸೋಶಿಯಲ್ ಮೀಡಿಯಾ ದಲ್ಲಿ, ನ್ಯೂಸ್ಗಳಲ್ಲಿ ಸಕತ್ ವೈರಲ್ ಆಗಿತ್ತು. ರಾಕಿಂಗ್ ಸ್ಟಾರ್ ಯಶ್ ಅವರಿಗೆ ಕೂಡ ಒಂದು ಹೆಣ್ಣು ಮಗು ಜನನ ವಾಗಬೇಕು ಎಂದು ಬಹಳ ಆಸೆ ಇತ್ತಂತೆ. 2 ದಿನಗಳ ಹಿಂದೆ ರಾಕಿಂಗ್ ಸ್ಟಾರ್ ಯಶ್ ಅವರು ಮುಂಬೈ ಅಲ್ಲಿ KGF ಪ್ರೊಮೋಷನ್ಸ್ ಗಾಗಿ ಹೋಗಿದ್ದರು. ರಾಧಿಕಾ ಅವರಿಗೆ ವೈದ್ಯರು ಡಿಸೆಂಬರ್ 2 ಕ್ಕೆ ಡೇಟ್ ಕೊಟ್ಟಿದ್ದರು.
ಈಗ ವಿಷ್ಯ ಏನಪ್ಪಾ ಅಂದರೆ ರಾಕಿಂಗ್ ಸ್ಟಾರ್ ಯಶ್ ಅವರಿಗೆ ಹೆಣ್ಣು ಮಗು ಆಗಿದ್ದ ವಿಷಯವನ್ನು ಕೇಳಿ ಕನ್ನಡದ ಚಾಲೆಂಜಿಂಗ್ ಸ್ಟಾರ್ ಬಾಕ್ಸ್ ಆಫೀಸ್ ಸುಲ್ತಾನ್ ದರ್ಶನ್ ಅವರು ರಾಕಿಂಗ್ ಸ್ಟಾರ್ ಯಶ್ ಅವರಿಗೆ ಕರೆ ಮಾಡಿ ಶುಭಾಶಯ ಕೋರಿದ್ದಾರೆ. ಯಶ್ -ರಾಧಿಕಾ ಅವರ ಮಗುವಿನ ವಿಷ್ಯ ತಿಳಿದ ಕೂಡಲೇ ದರ್ಶನ್ ಅವರು ಯಶ್ ಅವರಿಗೆ ಕಾಲ್ ಮಾಡಿ ಮಗುವಿನ ಹಾಗು ತಾಯಿಯ ಆರೋಗ್ಯವನ್ನು ವಿಚಾರಿಸಿ ಅವರಿಗೆ ಶುಭಾಶಯಗಳನ್ನು ಹೇಳಿದ್ದಾರೆ. ಈ ಸುದ್ದಿ ಸದ್ಯ ಸೋಶಿಯಲ್ ಮೀಡಿಯಾ ದಲ್ಲಿ ಸಿಕ್ಕಾ ಪಟ್ಟೆ ವೈರಲ್ ಆಗಿದೆ.
ಇತ್ತೀಚಿಗೆ ರಾಕಿಂಗ್ ಸ್ಟಾರ್ ಯಶ್ ಹಾಗು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಅಂಬರೀಷ್ ಅವರ ಕೊನೆಯ ಯಾತ್ರೆಯಲ್ಲಿ ಇಬ್ಬರು ಅಂಬಿ ಅವರ ದತ್ತು ಮಕ್ಕಳಂತೆ ಎಲ್ಲಾ ಕೆಲಸಗಳನ್ನು ಮಾಡಿದ್ದರು. ಯಶ್ ಹಾಗು ದರ್ಶನ್ ಅವರ ಈ ಸುಂದರ ಸ್ನೇಹಕ್ಕೆ ನಮ್ಮ ಕಡೆ ಇಂದ ಒಂದು ಸಲಾಂ! ನಮ್ಮ ಕನ್ನಡದ ಎಲ್ಲಾ ನಟರು ಹೀಗೆ ಸ್ನೇಹದಿಂದ ಇದ್ದಾರೆ ನಮ್ಮ ಕನ್ನಡ ಸಿನಿಮಾ ಚಿತ್ರರಂಗ ಇನ್ನೂ ಬೆಳೆಯುತ್ತದೆ.
ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ನಟರ ಬಗ್ಗೆ, ಕನ್ನಡ ನಟಿಯರ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿರಿ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಪ್ಪದೆ ನಮಗೆ ತಿಳಿಸಿರಿ.