Kannada Cinema News

(video) ಹೀರೊ ಅಲ್ಲ, ವಿಲ್ಲನ್ ಬರುತ್ತಿದ್ದಾನೆ ಎಂದು ಅದ್ಭುತ ವಿಡಿಯೋ ಹಾಕಿದ ಯಶ್! ಸಕತ್ ವಿಡಿಯೋ ನೋಡಿ

ಭಾರತ ಚಿತ್ರರಂಗದ ಇತಿಹಾಸದಲ್ಲಿ ದಾಖಲೆ ಬರೆದ ಚಿತ್ರ ಕೆಜಿಎಫ್ ಚಾಪ್ಟರ್ 1. ಸ್ಯಾಂಡಲ್ ವುಡ್ ಪ್ರತಿಭೆಗಳಾದ ರಾಕಿಂಗ್ ಸ್ಟಾರ್ ಯಶ್ ಮತ್ತು ನಿರ್ದೇಶಕ ಪ್ರಶಾಂತ್ ನೀಲ್ ಅವರ ಕನಸಿನ ಕೂಸು ಈ ಸಿನಿಮಾ. ಇದೊಂದು ಸಿನಿಮಾ ಮೂಲಕ ರಾಕಿಂಗ್ ಸ್ಟಾರ್ ಯಶ್ ನ್ಯಾಷನಲ್ ಸ್ಟಾರ್ ಆದರೂ, ಪ್ರಶಾಂತ್ ನೀಲ್ ಸ್ಟಾರ್ ಡೈರೆಕ್ಟರ್ ಆದರು. ಹಿಂದೆಂದೂ ಕಂಡಿರದ ಕೇಳಿರದ ಕುತೂಹಲಭರಿತ ಕಥಾ ಹಂದರ, ಅದ್ಭುತವಾದ ಮೇಕಿಂಗ್, ರೋಮಾಂಚನ ಗೊಳಿಸುವಂತಹ ಬಿಜಿಎಂ ಗಳು, ಯಶ್, ಹಾಗೂ ವಿಲನ್ ಗಳ ಅತ್ಯದ್ಭುತ ಅಭಿನಯದಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿತ್ತು ಕೆಜಿಎಫ್ ಚಾಪ್ಟರ್ 1. ಸ್ಕ್ರಾಲ್ ಡೌನ್ ಮಾಡಿ ಯಶ್ ಅವರ ಈ ಹೊಸ ವಿಡಿಯೋ ನೋಡಿ

2018 ರ ಸಾಲಿನ ಬಹುತೇಕ ಎಲ್ಲಾ ಅವಾರ್ಡ್ ಗಳನ್ನು ಬಾಚಿಕೊಂಡಿತು. ಕನ್ನಡ ಮಾತ್ರವಲ್ಲದೆ ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಯಲ್ಲಿ ಕೂಡ ತೆರೆಕಂಡ ಕೆಜಿಎಫ್, ಎಲ್ಲಾ ಭಾಷೆಗಳನ್ನು ಯಶಸ್ಸು ಕಂಡಿತು. ಕೆಜಿಎಫ್2 ಯಾವಾಗ ತೆರೆಕಾಣುತ್ತದೆ ಎಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಸಿನಿಮಾದ ಹೊಸ ಅಪ್ಡೇಟ್ ಗಾಗಿ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದರು. ಕೆಜಿಎಫ್ ಅಡ್ಡಾದಿಂದ ಸ್ವಾತಂತ್ರ್ಯ ದಿನಾಚರಣೆಯಂದು ಅಭಿಮಾನಿಗಳಿಗೆ ಒಂದು ಎಕ್ಸೈಟಿಂಗ್ ಸಿಕ್ಕಿದೆ. ಈ ಕೆಳಗಿನ ವಿಡಿಯೋ ಒಮ್ಮೆ ನೋಡಿ

ಇತ್ತೀಚೆಗಷ್ಟೆ ಕೆಜಿಎಫ್ ಕೆಜಿಎಫ್ ಸೂತ್ರಧಾರಿ ನಿರ್ದೇಶಕ ಪ್ರಶಾಂತ್ ನೀಲ್ ಅವರು ಚಿತ್ರದ ಕುರಿತು ಸಾಧ್ಯವಾದಷ್ಟು ಬೇಗ ಹೊಸ ಅಪ್ಡೇಟ್ ನೀಡುವುದಾಗಿ ಟ್ವೀಟ್ ಮಾಡಿದ್ದಾರೆ. ನಿನ್ನೆ ನಟ ಯಶ್ ಇನ್ಸ್ಟಾಗ್ರಾಮ್ ನಲ್ಲಿ ವಿಡಿಯೋ ಒಂದನ್ನು ಶೇರ್ ಮಾಡಿಕೊಳ್ಳುವ ಮೂಲಕ ಕೆಜಿಎಫ್2 ಚಿತ್ರದ ಹೊಸ ಅಪ್ಡೇಟ್ ಏನು ಎಂಬುದನ್ನು ಅಭಿಮಾನಿಗಳಿಗೆ ತಿಳಿಸಿದ್ದಾರೆ.ಯಶ್ ಶೇರ್ ಮಾಡಿರುವ ವಿಡಿಯೋದಲ್ಲಿ ಇದೇ ತಿಂಗಳು 17 ರಂದು ಅಂದರೆ ಸೋಮವಾರ ಸಿನಿಮಾದ ಹೀರೋ ಬದಲಾಗಿ ವಿಲನ್ ಬರುತ್ತಿದ್ದಾರೆ ಎಂದು ಪೋಸ್ಟ್ ಮಾಡಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ “ಈ ಸಾರಿ, ಹೀರೋ ಅಲ್ಲ, ವಿಲನ್ ಬರುತ್ತಿದ್ದಾರೆ..” ಎಂದು ಬರೆದಿದ್ದಾರೆ ಯಶ್. ಈ ಮೂಲಕ ಸೋಮವಾರ ಕೆಜಿಎಫ್ ಸಿನಿಮಾದ ಖಳನಟನ ಪೋಸ್ಟರ್ ರಿಲೀಸ್ ಮಾಡುವ ಸಾಧ್ಯತೆ ಇದೆ.

Trending

To Top