Cinema

ಕೊನೆಗೂ ಯಶ್ ರಾಧಿಕಾ ಮಗನಿಗೆ ನಾಮಕರಣ ಆಗಿದೆ! ಯಶ್ ಮಗನ ಹೆಸರು ಏನು ಗೊತ್ತಾ,ನಾಮಕರಣ ವಿಡಿಯೋ ನೋಡಿ

ನಮ್ಮ ರಾಕಿಂಗ್ ಸ್ಟಾರ್ ಯಶ್ ಹಾಗು ರಾಧಿಕಾ ಅವರ ಮುದ್ದಾಗ ಮಗನಿಗೆ ನಾಮಕರಣ ನಡೆದಿದೆ. ನೆನ್ನೆ ಅಷ್ಟೇ ಯಶ್ ರಾಧಿಕಾ ಅವರು ತಮ್ಮ ಕುಟುಂಬದ ಸಮೇತ ಮಗನಿಗೆ ನಾಮಕರಣ ಮಾಡಿದ್ದಾರೆ. ಯಶ್ ಹಾಗು ರಾಧಿಕಾ ಅವರ ಮಗಳ ಹೆಸರು ಐರಾ ಹಾಗು ಯಶ್ ರಾಧಿಕಾ ಅವರು ತಮ್ಮ ಮಗನಿಗೆ “ಯಥರ್ವ್ ಯಶ್” ಎಂದು ನಾಮಕರಣ ಮಾಡಿದ್ದಾರೆ! ಸದ್ಯ ಯಶ್ ಮಗನ ನಾಮಕರಣ ವಿಡಿಯೋವನ್ನು ಯಶ್ ಹಾಗು ರಾಧಿಕಾ ಪಂಡಿತ್ ಅವರು ತಮ್ಮ ಸೋಶಿಯಲ್ ಮೀಡಿಯಾ ದಲ್ಲಿ ಪೋಸ್ಟ್ ಮಾಡಿದ್ದು ಸದ್ಯ ಈ ವಿಡಿಯೋ ಸಕತ್ ವೈರಲ್ ಆಗಿದೆ. ಹಾಗಾದ್ರೆ ಯಶ್ ರಾಧಿಕಾ ಮಗನ ನಾಮಕರಣ ಹೇಗಿತ್ತು ಗೊತ್ತಾ! ಸ್ಕ್ರಾಲ್ ಡೌನ್ ಮಾಡಿ ವಿಡಿಯೋ ನೋಡಿ

ಹೌದು! ಯಶ್ ಅವರು ತಮ್ಮ ಮಗನಿಗೆ “ಯಥರ್ವ್ ಯಶ್” ಎಂದು ನಾಮಕರಣ ಮಾಡಿದ್ದಾರೆ. ರಾಧಿಕಾ ಪಂಡಿತ್ ಅವರು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಈ ಕೆಳಗಿನ ಸುಂದರವಾದ ನಾಮಕರಣದ ವಿಡಿಯೋ ಹಾಕಿದ್ದಾರೆ! ಯಶ್ ರಾಧಿಕಾ ಮುದ್ದಾದ ಮಗನ ನಾಮಕರಣ ಹೇಗಿತ್ತು ಗೊತ್ತಾ! ಈ ಕೆಳಗಿನ ವಿಡಿಯೋ ತಪ್ಪದೆ ನೋಡಿ ಹಾಗು ಶೇರ್ ಮಾಡಿ

ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಅವರಿಗೆ 2020ರ ಮೊದಲ ಹಬ್ಬ ಅಂದರೆ ಈ ಸಂಕ್ರಾಂತಿ. ತಮ್ಮ ಮುದ್ದಾದ ಕುಟುಂಬದೊಂದಿಗೆ, ಅತ್ತೆ-ಮಾವ ರೊಂದಿಗೆ ತುಂಬಾ ಸಂತೋಷದಿಂದ ಸಂಕ್ರಾಂತಿ ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಹಾಗೆಯೇ ರಾಧಿಕಾ ಪಂಡಿತ್ ಅವರು ತಮ್ಮ ಅಭಿಮಾನಿಗಳಿಗೆ ಪ್ರೀತಿಯ ಶುಭಾಶಯಗಳು ತಿಳಿಸಿದ್ದಾರೆ. “ನಮ್ಮ ಕುಟುಂಬದ ಮೇಲೆ ನೀವು ಇಟ್ಟಿರುವ ಪ್ರೀತಿಗೆ ನಾನು ಎಷ್ಟು ಹೇಳಿದರೂ ಕಡಿಮೆ ಆದರೆ ಪ್ರತಿಯೊಬ್ಬರಿಗೂ ಪ್ರತಿಯೊಂದು ವಿಷಯದಲ್ಲಿಯೂ ಹೃದಯಪೂರ್ವಕವಾಗಿ ಧನ್ಯವಾದಗಳನ್ನು ತಿಳಿಸುತ್ತೇವೆ, ಜೊತೆಗೆ ಎಲ್ಲರಿಗೂ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು” ಎಂದು ಹೇಳಿದ್ದಾರೆ.

ರಾಕಿಂಗ್ ಜೋಡಿಗಳಾದ ಯಶ್ ಹಾಗೂ ರಾಧಿಕಾ ಪಂಡಿತ್ ತಮ್ಮ ಮನೆ ಯಾವುದೇ ಕಾರ್ಯಕ್ರಮ ಹಬ್ಬ ಸಮಾರಂಭಗಳಾದರು ಅದನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾರೆ. ಅದೇ ರೀತಿ ನಿನ್ನೆ ರಾಧಿಕಾ ಪಂಡಿತ್ ಅವರ ಮನೆಯಲ್ಲಿ ಸಂಕ್ರಾಂತಿ ಹಬ್ಬ ಹೇಗೆಲ್ಲಾ ಆಚರಿಸಿದ್ದಾರೆ ಅಂತ ನೋಡೋಣ ಬನ್ನಿ

Trending

To Top