ನಮ್ಮ ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳ ಅಭಿಮಾನಿಗಳು ಈ ವರ್ಷ ಗಣೇಶ ಹಬ್ಬಕ್ಕೆ ವಿಶೇಷವಾದ ಎಡಿಟ್ ಗಳನ್ನು ಮಾಡಿ ತಮ್ಮ ಮೆಚ್ಚಿನ ಕಲಾವಿದರನ್ನು ಮೆಚ್ಚಿಸಿದ್ದಾರೆ. ಚಂದನವನದ ನಾಯಕರ ಮುದ್ದಾದ ಮಕ್ಕಳ ಫೋಟೋಗಳನ್ನು ಗಣೇಶ ಹಬ್ಬಕ್ಕೆ ತಕ್ಕಂತೆ ಎಡಿಟ್ ಮಾಡಿದ್ದಾರೆ ಅವರ ಅಭಿಮಾನಿಗಳು ಇದನ್ನು ಮೆಚ್ಚಿರುವ ಕಲಾವಿದರು, ಸಾಮಾಜಿಕ ಜಾಲತಾಣಗಳಲ್ಲಿರುವ ತಮ್ಮ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ಅವರ ಮುದ್ದು ಮಗನನ್ನು ಗಣೇಶನ ಹಾಗೆ ಎಡಿಟ್ ಮಾಡಿ, ಯಶ್ ಮಗನ ಮುಖಕ್ಕೆ ಸೊಂಡಿಲು ಸೇರಿಸಿ, ಗಣೇಶ ಹಬ್ಬದ ಶುಭಾಶಯ ಎಂದು ಪೋಸ್ಟ್ ಮಾಡಿದ್ದಾರೆ ಯಶ್ ಅಭಿಮಾನಿಗಳು. ಇದನ್ನು ಮೆಚ್ಚಿಕೊಂಡಿರುವ ನಟ ಯಶ್, ಈ ಪೋಸ್ಟ್ ಅನ್ನು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಅಪ್ಡೇಟ್ ಮಾಡಿ, “ಸೂಪರ್ 😂 ನನ್ನ ಪುಟ್ಟ ಗಣೇಶ..” ಎಂದು ಬರೆದುಕೊಂಡಿದ್ದಾರೆ.
ಜೊತೆಗೆ, ಸ್ಯಾಂಡಲ್ ವುಡ್ ನ ಯಶಸ್ವಿ ನಿರ್ದೇಶಕ ಮತ್ತು ನಟ ರಿಷಬ್ ಶೆಟ್ಟಿ ಅವರ ಮಗನ ಫೋಟೋ ಸಹ ಎಡಿಟ್ ಮಾಡಲಾಗಿದ್ದು, ರಿಷಬ್ ಅವರ ಮಗ ಆನೆಗಳನ್ನು ಎಳೆದುಕೊಂಡು ಬರುತ್ತಿರುವ ಹಾಗೆ ಫೋಟೋವನ್ನು ಎಡಿಟ್ ಮಾಡಲಾಗಿದೆ, ಈ ಫೋಟೋವನ್ನು ಹಂಚಿಕೊಂಡಿರುವ ರಿಷಬ್ ಶೆಟ್ಟಿ, ಗಣೇಶ ಹಬ್ಬದ ಶುಭಾಶಯ ತಿಳಿಸಿದ್ದಾರೆ.
ಹಾಗೂ, ಸ್ಯಾಂಡಲ್ ವುಡ್ ನ ಸ್ಟಾರ್ ಡೈರೆಕ್ಟರ್ ಪ್ರಶಾಂತ್ ನೀಲ್ ಅವರ ಮುದ್ದಿನ ಮಗಳು, ಮನೆಯಲ್ಲಿ ತಮ್ಮ ಕೈಯಾರೆ ಗಣೇಶನ ಮೂರ್ತಿಯನ್ನು ತಯಾರಿಸಿದ್ದಾರೆ. ಅರಿಷಿಣದಲ್ಲಿ ಗಣೇಶನನ್ನು ತಯಾರಿಸಿದ್ದಾರೆ ಪ್ರಶಾಂತ್ ನೀಲ್ ಅವರ ಮುದ್ದಿನ ಮಗಳು. ಮಗಳು ಗಣೇಶ ಮೂರ್ತಿ ತಯಾರಿಸುತ್ತಿರುವ ಫೋಟೋವನ್ನು ಹಂಚಿಕೊಂಡಿರುವ ಪ್ರಶಾಂತ್ ನೀಲ್, ನಮ್ಮಿಂದ ನಿಮ್ಮೆಲ್ಲರಿಗೂ ಗಣೇಶ ಹಬ್ಬದ ಶುಭಾಶಯಗಳು ಎಂದು ಬರೆದಿದ್ದಾರೆ. ನಮ್ಮ ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳ ಅಭಿಮಾನಿಗಳು ಈ ವರ್ಷ ಗಣೇಶ ಹಬ್ಬಕ್ಕೆ ವಿಶೇಷವಾದ ಎಡಿಟ್ ಗಳನ್ನು ಮಾಡಿ ತಮ್ಮ ಮೆಚ್ಚಿನ ಕಲಾವಿದರನ್ನು ಮೆಚ್ಚಿಸಿದ್ದಾರೆ. ಚಂದನವನದ ನಾಯಕರ ಮುದ್ದಾದ ಮಕ್ಕಳ ಫೋಟೋಗಳನ್ನು ಗಣೇಶ ಹಬ್ಬಕ್ಕೆ ತಕ್ಕಂತೆ ಎಡಿಟ್ ಮಾಡಿದ್ದಾರೆ ಅವರ ಅಭಿಮಾನಿಗಳು ಇದನ್ನು ಮೆಚ್ಚಿರುವ ಕಲಾವಿದರು, ಸಾಮಾಜಿಕ ಜಾಲತಾಣಗಳಲ್ಲಿರುವ ತಮ್ಮ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಅವರ ಮುದ್ದು ಮಗನನ್ನು ಗಣೇಶನ ಹಾಗೆ ಎಡಿಟ್ ಮಾಡಿ, ಯಶ್ ಮಗನ ಮುಖಕ್ಕೆ ಸೊಂಡಿಲು ಸೇರಿಸಿ, ಗಣೇಶ ಹಬ್ಬದ ಶುಭಾಶಯ ಎಂದು ಪೋಸ್ಟ್ ಮಾಡಿದ್ದಾರೆ ಯಶ್ ಅಭಿಮಾನಿಗಳು. ಇದನ್ನು ಮೆಚ್ಚಿಕೊಂಡಿರುವ ನಟ ಯಶ್, ಈ ಪೋಸ್ಟ್ ಅನ್ನು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಅಪ್ಡೇಟ್ ಮಾಡಿ, “ಸೂಪರ್ 😂 ನನ್ನ ಪುಟ್ಟ ಗಣೇಶ..” ಎಂದು ಬರೆದುಕೊಂಡಿದ್ದಾರೆ.
