News

(video)ರಾಕಿ ಯಶ್ ಅವರ ಮೊದಲ ಸೀರಿಯಲ್ ನಲ್ಲಿ ಅವರ ನಟನೆ ಹೇಗಿತ್ತು ಈ ವಿಡಿಯೋ ನೋಡಿ, ಶೇರ್ ಮಾಡಿ

yash-serial

ನಿಮಗೆಲ್ಲ ಗೊತ್ತಿರೋ ಹಾಗೆ ರಾಕಿಂಗ್ ಸ್ಟಾರ್ ಯಶ್ ಅವರು ಬಹಳ ಕಷ್ಟ ಪಟ್ಟು ಸಿನಿಮಾ ಕ್ಷೇತ್ರಕ್ಕೆ ಬಂದಿದ್ದಾರೆ. ಒಂದು ಕಾಲದಲ್ಲಿ ಒಂದು ಹೊತ್ತಿನ ಊಟಕ್ಕೂ ಕೂಡ ಕಷ್ಟ ಪಡುತ್ತಿದ್ದ ರಾಕಿಂಗ್ ಸ್ಟಾರ್ ಯಶ್ ಅವರು ಇವತ್ತು ಇಡೀ ದೇಶಕ್ಕೆ ಗೊತ್ತಾಗಿರುವ ರಾಕಿಂಗ್ ಸ್ಟಾರ್! ನಿಜಕ್ಕೂ ಯಶ್ ಅವರ ಸಾಧನೆಗೆ, ಹಾರ್ಡ್ ವರ್ಕಿಗೆ ಒಂದು ಸಲಾಂ! ಸದ್ಯ ಯಶ್ ಅವರ KGF ಚಿತ್ರ ಇಂದು ಬಿಡುಗಡೆ ಆಗಿದೆ, ಇಡೀ ದೇಶದ ಜನರೇ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಸದ್ಯ ನಮ್ಮ ರಾಕಿಂಗ್ ಸ್ಟಾರ್ ಯಶ್ ರಾಕೀ bhai ಯಶ್ ಅವರು ನ್ಯಾಷನಲ್ ಸ್ಟಾರ್. ಇವರ ಕಾಲ್ ಶೀಟ್ ಗಾಗಿ ದಕ್ಷಿಣ ಭಾರತದ ದೊಡ್ಡ ದೊಡ್ಡ ನಿರ್ಮಾಪಕರು ವೇಟ್ ಮಾಡುತ್ತಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಅವರು ನಟಿಸಿದ್ದ ಮೊದಲ ಧಾರಾವಾಹಿಯ ಮೊದಲ ದೃಶ್ಯ ಹೇಗಿತ್ತು ಒಮ್ಮೆ ನೋಡಿ! ಈ ಕೆಳಗಿನ ವಿಡಿಯೋ ತಪ್ಪದೆ ನೋಡಿರಿ
ನಾಳೆಯಿಂದ ವಿಶ್ವ ದಾದ್ಯಂತ KGF ಚಿತ್ರ ಬಿಡುಗಡೆ ಆಗಲಿದೆ. KGF ಚಿತ್ರ ಕನ್ನಡ ಅಲ್ಲದೆ, ತೆಲುಗು, ತಮಿಳು, ಮಲಯಾಳಂ ಹಾಗು ಹಿಂದಿ ಭಾಷೆ ಯಲ್ಲಿ ಬಿಡುಗಡೆ ಆಗಲಿದೆ. KGF ಚಿತ್ರವನ್ನು ಪ್ರಶಾಂತ್ ನೀಲ್ ಅವರು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ಭುವನ್ ಗೌಡ ಅವರು ಛಯಾಗ್ರಹಣ ಕೆಲಸವನ್ನು ಮಾಡಿದ್ದಾರೆ. ನಮ್ಮ ಇಡೀ ದೇಶವೇ ಈ ಚಿತ್ರಕ್ಕಾಗಿ ವೇಟ್ ಮಾಡುತ್ತಿದೆ ಎಂದೇ ಹೇಳಬಹುದು. ಬಿಡುಗಡೆಗೆ ಒಂದು ದಿನ ಮುಂಚೆ ರಾಕಿಂಗ್ ಸ್ಟಾರ್ ಯಶ್ ಅವರ ಮನ ದಾಳದ ಮಾತುಗಳನ್ನು ಒಮ್ಮೆ ಕೇಳಿರಿ. ಈ ಕೆಳಗಿನ ವಿಡಿಯೋ ಸಂದರ್ಶನ ತಪ್ಪದೆ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ KGF ಚಿತ್ರವನ್ನು ಕೋಲಾರದ ಸೈಯನೈಡ್ ಹಿಲ್ಸ್ ನಲ್ಲಿ ಶೂಟ್ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಇಡೀ KGF ಚಿತ್ರ ತಂಡ ಭುವನ್ ಗೌಡ, ಯಶ್, ಪ್ರಶಾಂತ್ ನೀಲ್, ನಿಮಾಪಕರು, ಆರ್ಟ್ ಡೈರೆಕ್ಟರ್ ಶಿವೂ ಕೂಡ ಇದ್ದರು. ಸ್ಥಳದಲ್ಲಿ ಭಯಂಕರ ಗಾಳಿಯಿಂದ , ಭಯಾನಕ ಮಳೆಯಿಂದ ಸೆಟ್ ನಲ್ಲಿ ಇದ್ದ ದೊಡ್ಡ ದೊಡ್ಡ ಕಂಬ ಗಳು, ಹಾಗು ಆಕೃತಿಗಳು ಎಲ್ಲಾ ಛಿದ್ರ ಗೊಂಡಿತ್ತು. ಈ ಸಮಯದಲ್ಲಿ KGF ಚಿತ್ರ ತಂಡ ಕೂದಲೆಳೆ ಅಂತರದಲ್ಲಿ ಬಚಾವ್ ಆಗಿದ್ದರು. ಈ ಭಯಾನಕ ಮೇಕಿಂಗ್ ವಿಡಿಯೋ, ಹಾಗು KGF ನಲ್ಲಿ ಶೂಟಿಂಗ್ ಮಾಡಿದ್ದ ತಮ್ಮ ಅನುಭವದ ಬಗ್ಗೆ ಯಶ್, ಶಿವೂ ಹಾಗು ಭುವನ್ ಗೌಡ ಏನ್ ಹೇಳಿದ್ದಾರೆ ನೋಡಿದ್ರೆ ನಿಮಗೆ KGF ಚಿತ್ರ ತಂಡ ಎಷ್ಟು ಕಷ್ಟ ಪಟ್ಟಿದ್ದಾರೆ ಗೊತ್ತಾಗುತ್ತೆ. ಈ ಕೆಳಗಿನ ವಿಡಿಯೋ ನೋಡಲೇಬೇಕು
ನಿಮಗೆಲ್ಲ ಗೊತ್ತಿರೋ ಹಾಗೆ ಇನ್ನು ಎರಡೇ ಎರಡು ದಿನದಲ್ಲಿ KGF ಚಿತ್ರ ವಿಶ್ವ ದಾದ್ಯಂತ ಬಿಡುಗಡೆ ಆಗಲಿದೆ. KGF ಚಿತ್ರ ಕನ್ನಡ ತಮಿಳು , ತೆಲುಗು , ಮಲಯಾಳಂ ಹಾಗು ಹಿಂದಿ ಭಾಷೆಯಲ್ಲಿ ಬಿಡುಗಡೆ ಆಗಲಿದೆ. KGF ಚಿರದಿಂದ ಇಡೀ ದೇಶವೇ ನಮ್ಮ ಕನ್ನಡ ಚಿತ್ರ ರಂಗದ ಕಡೆ ತಿರುಗಿ ನೋಡುವಂತೆ ಮಾಡಿದೆ. KGF ಚಿತ್ರ ನರ್ತಕೀ ಚಿತ್ರ ಮಂದಿರದಲ್ಲಿ ಕೂಡ ಬಿಡುಗಡೆ ಆಗಲಿದೆ. ಬೆಂಗಳೂರಿನ ನರ್ತಕೀ ಚಿತ್ರ ಮಂದಿರದಲ್ಲಿ KGF ಬಿಡುಗಡೆಗೆ ಭರ್ಜರಿ ಸಿದ್ಧತೆ ನಡೆಯುತ್ತಿದೆ. ಈ ಕೆಳಗಿನ ವಿಡಿಯೋ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ ಬಹು ನಿರೀಕ್ಷೆಯ ಕನ್ನಡ ಚಿತ್ರ KGF ಇದೆ ತಿಂಗಳು 21 ಕ್ಕೆ ಬಿಡುಗಡೆ ಆಗಲಿದೆ. ಇತ್ತೀಚಿಗೆ KGF ಚಿತ್ರದ ಎರಡನೇ ಟ್ರೇಲರ್, ಸಲಾಂ ರಾಕಿ bhai ಹಾಡಿನ ವಿಡಿಯೋ , ಹಾಗು ತಾಯಿ ಸೆಂಟಿಮೆಂಟ್ ಇರುವ ಒಂದು ಹಾಡನ್ನು ಕೂಡ ಬಿಡುಗಡೆ ಮಾಡಿದ್ದರು. ಈ ಎಲ್ಲಾವೂ ಯೌಟ್ಯೂಬ್ ನಲ್ಲಿ ಸುಮಾರು ಒಂದು ವಾರದಿಂದ ಟ್ರೆಂಡಿಂಗ್ ನಲ್ಲಿದೆ. ಇಡೀ ಭಾರತವೇ KGF ಚಿತ್ರಕ್ಕಾಗಿ ವೇಟ್ ಮಾಡ್ತಾ ಇದ್ದಾರೆ. ಈಗ KGF ಚಿತ್ರ ತಂಡ KGF ಚಿತ್ರದ ಮೇಕಿಂಗ್ ವಿಡಿಯೋ ಬಿಡುಗಡೆ ಆಗಿದೆ. ಬಿಡುಗಡೆ ಆಗೇ ಕೆಲವೇ ಕೆಲವು ಘಂಟೆಗಳಲ್ಲಿ ಯೌಟ್ಯೂಬ್ ನಲ್ಲಿ ಟ್ರೆಂಡಿಂಗ್ ನಲ್ಲಿದೆ. ನೀವು ಒಮ್ಮೆ KGF ಚಿತ್ರದ ಮೇಕಿಂಗ್ ನೋಡಿ!

Trending

To Top