News

(video)ನ್ಯಾಷನಲ್ ಸ್ಟಾರ್ಸ್ ಯಶ್ ಹಾಗು ಪ್ರಭಾಸ್ ಹೇಗೆ ಹಿಂದಿ ಮಾತಾಡುತ್ತಾರೆ ಒಮ್ಮೆ ವಿಡಿಯೋ ನೋಡಿ

yash-prabas

ಕೆಜಿಫ್ ಚಿತ್ರದ ನಂತರ ನಮ್ಮ ರಾಕಿಂಗ್ ಸ್ಟಾರ್ ಯಶ್ ಅವರು ಈಗ ಇಡೀ ಭಾರತದಲ್ಲೇ ಚಿರ ಪರಿಚಿತರು. ಯಶ್ ಅವರು ಸದ್ಯ ನ್ಯಾಷನಲ್ ಸ್ಟಾರ್. ಇದೇ ರೀತಿ ತೆಲುಗು ಭಾಷೆಯಲ್ಲಿ ಬಾಹುಬಲಿ ಚಿತ್ರ ಬಂದ ಮೇಲೆ ತೆಲುಗು ನಟ ಪ್ರಭಾಸ್ ಅವರು ಕೂಡ ನ್ಯಾಷನಲ್ ಸ್ಟಾರ್. ಒಂದು ಹಿಂದಿ ಯೌಟ್ಯೂಬ್ ಚಾನೆಲ್ ನಲ್ಲಿ ಯಶ್ ಹಾಗು ಪ್ರಭಾಸ್ ಇಬ್ಬರೂ ಹಿಂದಿ ಭಾಷೆಯನ್ನು ಹೇಗೆ ಮಾತಾಡುತ್ತಾರೆ ಎಂದು ಒಂದು ವಿಡಿಯೋ ಹಾಕಲಾಗಿದೆ, ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾ ಗಳಲ್ಲಿ ಸಿಕ್ಕಾ ಪಟ್ಟೆ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಹಲವಾರು ಉತ್ತರ ಭಾರತದ ಜನ ನಮ್ಮ ಯಶ್ ಅವರು ಬಹಳ ಅದ್ಭುತವಾಗಿ ಹಿಂದಿ ಮಾತಾಡುತ್ತಾರೆ ಎಂದು ಹಾಡಿ ಹೊಗಳಿದ್ದಾರೆ, ಈ ವಿಡಿಯೋ ನೀವು ನೋಡಲೇಬೇಕು, ಈ ಕೆಳಗಿನ ವಿಡಿಯೋ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ ನಮ್ಮ ರಾಕಿಂಗ್ ಸ್ಟಾರ್ ಯಶ್ ಅವರು ಕೆಜಿಫ್ ಚಿತ್ರದ ಪ್ರೊಮೋಷನ್ಸ್ ಗಾಗಿ ಸುಮಾರು ಒಂದು ತಿಂಗಳಿಗೂ ಹೆಚ್ಚು ಕಾಲ ಮುಂಬೈ ನಲ್ಲಿ ಇದ್ದರು. ಮುಂಬೈ ನಲ್ಲಿ ದೊಡ್ಡ ದೊಡ್ಡ ಚಾನೆಲ್ ಗಳಿಗೆ ಯಶ್ ಅವರು ಸಂದರ್ಶನ ಕೊಟ್ಟಿದ್ದರು. ಎಲ್ಲರಿಗೂ ಗೊತ್ತಿರದ ಮಾಹಿತಿ ಏನಪ್ಪಾ ಅಂದರೆ ನಮ್ಮ ರಾಕಿಂಗ್ ಸ್ಟಾರ್ ಯಶ್ ಅವರಿಗೆ ಕನ್ನಡ ಅಲ್ಲದೆ, ತಮಿಳು, ತೆಲುಗು, ಹಾಗು ಹಿಂದಿ ಭಾಷೆ ಬಹಳ ಸ್ಪಷ್ಟವಾಗಿ ಮಾತಾಡಲು ಬರುತ್ತದೆ. ಯಶ್ ಅವರಿಗೆ ಸುಮಾರು 5 ಭಾಷೆಗಳಲ್ಲಿ ಸ್ಪಷ್ಟವಾಗಿ ಮಾತಾಡಲು ಬರುತ್ತದೆ. ಕೆಜಿಫ್ ಚಿತ್ರ ಬರೋಬ್ಬರಿ 200 ಕೋಟಿ ಗು ಹೆಚ್ಚು ಸಂಪಾದನೆಯನ್ನು ಗಲ್ಲಾ ಪೆಟ್ಟಿಗೆಯಲ್ಲಿ ಗಳಿಸಿದೆ.
ಕೆಜಿಫ್ ಚಿತ್ರ ಕನ್ನಡದ ಒಂದು ಹೆಮ್ಮೆಯ ಚಿತ್ರ ಎಂದು ಹೇಳಬಹುದು. ಕೆಜಿಫ್ ಚಿತ್ರ ಕನ್ನಡ ಅಲ್ಲದೆ, ತಮಿಳು, ತೆಲುಗು, ಮಲಯಾಳಂ ಹಾಗು ಹಿಂದಿ ಭಾಷೆಯಲ್ಲಿ ಕೂಡ ಬಿಡುಗಡೆ ಆಗಿ ಈಗ ಕೂಡ ಭರ್ಜರಿ ಆಗಿ ಪ್ರದರ್ಶನ ಕಾಣುತ್ತಿದೆ. ಕೆಜಿಫ್ ಚಿತ್ರವನ್ನು ಇಡೀ ಭಾರತದ ಜನ ಹಾಡಿ ಹೊಗಳಿದ್ದಾರೆ. ಇದಲ್ಲದೆ ಹೊರ ದೇಶ ಗಳಲ್ಲಿ ಕೂಡ ಕೆಜಿಫ್ ಚಿತ್ರ ಭರ್ಜರಿ ಆಗಿ ಪ್ರದರ್ಶನ ಕಾಣುತ್ತಿದೆ. ಬಿಡುಗಡೆ ಆಗಿ 30 ದಿನವಾದರೂ ಕೆಜಿಫ್ ಚಿತ್ರ ಉತ್ತರ ಭಾರತದಲ್ಲಿ ಬರೋಬ್ಬರಿ 600 ಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ಅಮೋಘವಾದ ಪ್ರದರ್ಶನ ಕಾಣುತ್ತಿದೆ. ಇದಲ್ಲದೆ ಆಂಧ್ರ ಪ್ರದೇಶದಲ್ಲಿ, ತಮಿಳು ನಾಡಿನಲ್ಲಿ ಹಾಗು ಕೇರಳದಲ್ಲಿ ಕೆಜಿಫ್ ಚಿತ್ರ ಈಗ ಕೂಡ ಸುಮಾರು 500 ಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ಪ್ರದರ್ಶನ ಕಾಣುತ್ತಿದೆ.
ನಮ್ಮ ಕರ್ನಾಟಕದಲ್ಲಿ ಕೆಜಿಫ್ ಚಿತ್ರ ಬಹಳಷ್ಟು ಬೇರೆ ಸಿನಿಮಾಗಳು ಬಂದರೂ ಕೂಡ ಸುಮಾರು 400 ಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ಭರ್ಜರಿ ಆಗಿ ಪ್ರದರ್ಶನ ಕಾಣುತ್ತಿದೆ. ಸದ್ಯ ನಮ್ಮ ರಾಕಿಂಗ್ ಸ್ಟಾರ್ ಯಶ್ ಅವರು ರೆಸ್ಟ್ ಮಾಡುತ್ತಾ ಇದ್ದಾರೆ, ಸುಮಾರು 3 ವರ್ಷಕ್ಕೂ ಹೆಚ್ಚು ಕಾಲ ಕೆಜಿಫ್ ಚಿತ್ರಕ್ಕಾಗಿ ಬಹಳ ಕಷ್ಟ ಪಟ್ಟು ದುಡಿದ್ದಿದ್ದಾರೆ ನಮ್ಮ ರಾಕಿಂಗ್ ಸ್ಟಾರ್ ಯಶ್. ಇನ್ನೊಂದು ಕಡೆ ಇದೇ ವರ್ಷ ಮಾರ್ಚ್ ತಿಂಗಳಿಂದ ಕೆಜಿಫ್ ಚಿತ್ರದ ಚಾಪ್ಟರ್ 2 ಚಿತ್ರೀಕರಣ ಶುರು ಆಗಲಿದೆ. ಕೆಜಿಫ್ ಚಿತ್ರದ ಚಾಪ್ಟರ್ 2 ಮುಗಿದ ಮೇಲೆ ನಮ್ಮ ರಾಕಿಂಗ್ ಸ್ಟಾರ್ ಯಶ್ ಅವರ ಕಿರಾತಕ 2 ಚಿತ್ರದ ಚಿತ್ರೀಕರಣದಲ್ಲಿ ಪಾಲ್ಗೊಳ್ಳರಿದ್ದಾರೆ.
ಸದ್ಯ ಕೆಜಿಫ್ ಚಿತ್ರ 50 ದಿನಗಳತ್ತ ಮುನ್ನುಗ್ಗುತ್ತಿದೆ. ಯಾವುದೇ ಕನ್ನಡ ಸಿನಿಮಾ ಕೂಡ ಮಾಡದೆ ಇರುವ ಸಾಧನೆಯನ್ನು ನಮ್ಮ ಕೆಜಿಫ್ ತಂಡ ಮಾಡಿ ತೋರಿಸಿದೆ. ಒಂದು ಸಿನೆಮಾವನ್ನು ಹಿಂಗೂ ಮಾಡಬಹುದು, ಇಡೀ ವಿಶ್ವಕ್ಕೆ ರೀಚ್ ಮಾಡಿಸ ಬಹುದು ಎಂದು ಕೆಜಿಫ್ ಚಿತ್ರ ತಂಡ ತೋರಿಸಿ ಕೊಟ್ಟಿದ್ದಾರೆ. ಇನ್ನಾದರೂ ನಮ್ಮ ಕನ್ನಡದ ಬೇರೆ ನಟರು, ರಿಮೇಕ್ ಚಿತ್ರಗಳನ್ನು, ಅದೇ ಮಾಮೂಲಿ ಕಮರ್ಷಿಯಲ್ ಚಿತ್ರವನ್ನು ಮಾಡುವುದುನ್ನು ಬಿಟ್ಟು, ಒಂದೊಳ್ಳೆ ಅದ್ಭುತ ಕಂಟೆಂಟ್ ಇರುವ ಸಿನೆಮಾವನ್ನು ಮಾಡಲಿ ಎಂದು ನಮ್ಮ ಆಸೆ. ಕೆಜಿಫ್ ಚಿತ್ರದ ತರಹ ಬೇರೆ ಚಿತ್ರಗಳನ್ನು ಕೂಡ ಇಡೀ ಭಾರತದ ದೇಶದ ಜನ ಹಾಡಿ ಹೊಗಳಬೇಕು. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿರಿ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯ್ವನ್ನು ತಪ್ಪದೆ ನಮಗೆ ತಿಳಿಸಿರಿ.

Trending

To Top