Cinema

ಯಶ್ ಹಾಗು ಅವರ ತಂಗಿ ನಂದಿನಿ, ರಾಕಿ ಹಬ್ಬದಾದ ಆಚರಣೆ ವಿಡಿಯೋ ವೈರಲ್! ಸುಂದರ ವಿಡಿಯೋ ನೋಡಿ

ಭಾರತ ಸಂಸ್ಕೃತಿಯಲ್ಲಿ ಬಹಳ ಮಹತ್ವವಿರುವ ಹಬ್ಬಗಳಲ್ಲಿ ಒಂದು ರಕ್ಷಾಬಂಧನ. ಒಡಹುಟ್ಟಿದವರ ನಡುವಿನ ಬಾಂಧವ್ಯವನ್ನು ಹೆಚ್ಚಿಸುವ ಹಬ್ಬ ಇದು. ರಕ್ಷಾಬಂಧನದ ದಿನ ಕಟ್ಟುವ ರಾಖಿ, ನಾನು ನಿನ್ನೊಡನೆ ಯಾವಾಗಲೂ ಇರುತ್ತೇನೆ. ಬದುಕಿನ ಪ್ರತಿಯೊಂದು ಹೆಜ್ಜೆಯಲ್ಲೂ ಕಷ್ಟ ಸುಖದಲ್ಲೂ ನಾನು ನಿನ್ನ ಜೊತೆ ಇದ್ದು ನೋಡಿಕೊಳ್ಳುತ್ತೇನೆ ಎಂದು ಹೇಳುವ ಸಂಕೇತ ರಾಖಿ. ಈ ರಾಖಿ ಹಬ್ಬ ಎಲ್ಲರಿಗೂ ವಿಶೇಷ. ನಮಗೆಲ್ಲಾ ತಿಳಿದಿರುವ ಹಾಗೆ ಸ್ಯಾಂಡಲ್ ವುಡ್ ನಟ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿಗೆ ಇಬ್ಬರು ಮಕ್ಕಳು. ಆಯ್ರಾ ಮತ್ತು ಜ್ಯೂನಿಯರ್ ರಾಕಿ ಭಾಯ್. ಈ ಇಬ್ಬರು ಮುದ್ದು ಮಕ್ಕಳು ನಿನ್ನೆ ರಕ್ಷಾಬಂಧನ ಆಚರಿಸಿ. ಮಕ್ಕಳ ಸಂಭ್ರಮವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ ರಾಧಿಕಾ ಪಂಡಿತ್. ಸ್ಕ್ರೋಲ್ ಡೌನ್ ಮಾಡಿ, ಯಶ್ ಹಾಗು ಅವರ ತಂಗಿಯ ವಿಡಿಯೋ ನೋಡಿ
ರಾಧಿಕಾ ಪಂಡಿತ್ ಅವರಿಗೂ ತಮ್ಮ ಇದ್ದಾರೆ, ಅವರ ಹೆಸರು ಗೌರಂಗ್, ಈ ವರ್ಷ ತಮ್ಮನೊಡನೆ ರಕ್ಷಾಬಂಧನ ಆಚರಿಸಲು ಆಗಿಲ್ಲ, ರಾಖಿಯನ್ನು ಕಳಿಸಿಕೊಡಲು ಸಹ ಸಾಧ್ಯವಾಗಿಲ್ಲ. ಆದರೆ ಪ್ರೀತಿಯನ್ನು ಕಲಿಸಿಕೊಡುತ್ತೇನೆ. ಇಂದು ಸಂಜೆ ಎಲ್ಲರಿಗೂ ಸರ್ಪ್ರೈಸ್ ಇದೆ ಎಂದು ರಾಧಿಕಾ ಪೋಸ್ಟ್ ಮಾಡಿದ್ದರು. ಅದರಂತೆಯೇ ನಿನ್ನೆ ಸಂಜೆ ಮಕ್ಕಳು ರಕ್ಷಾಬಂಧನ ಆಚರಿಸಿರುವ ವಿಶೇಷವಾದ ಫೋಟೋಗಳನ್ನು ರಾಧಿಕಾ ಪಂಡಿತ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಮುದ್ದು ಆಯ್ರಾ ತಮ್ಮನಿಗೆ ಆರತಿ ಬೆಳಗಿ ರಾಖಿ ಕಟ್ಟಿದ್ದಾಳೆ. ಬಿಳಿ ಬಟ್ಟೆಯಲ್ಲಿ ಜ್ಯೂನಿಯರ್ ರಾಕಿ ಭಾಯ್ ಹಾಗೂ ಆರೆಂಜ್ ಬಣ್ಣದ ಬಟ್ಟೆಯಲ್ಲಿ ಆಯ್ರಾ ಮುದ್ದಾಗಿ ಕಾಣುತ್ತಿದ್ದಾರೆ. ಈ ಕೆಳಗಿನ ವಿಡಿಯೋ ನೋಡಿ
ಇವರಿಬ್ಬರ ರಾಖಿ ಸಂಭ್ರಮ ಬಹಳ ಮುದ್ದಾಗಿದ್ದು, ಆಯ್ರಾ ಹಾಗೂ ಜ್ಯೂನಿಯರ್ ರಾಖಿ ಭಾಯ್ ರ ರಕ್ಷಾಬಂಧನ ಸಂಭ್ರಮದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಕ್ಕತ್ ವೈರಲ್ ಆಗಿದೆ. ಹಾಗೆಯೇ ರಾಕಿಂಗ್ ಸ್ಟಾರ್ ಯಶ್ ಸಹ ತಂಗಿಯೊಡನೆ ರಕ್ಷಾಬಂಧನ ಆಚರಿಸಿದ್ದಾರೆ. ತಂಗಿ ಮನೆಗೆ ಹೋಗಿ, ತಂಗಿ ಕೈಯಲ್ಲಿ ರಾಖಿ ಕಟ್ಟಿಸಿಕೊಂಡಿದ್ದಾರೆ ರಾಕಿ ಭಾಯ್. ರಕ್ಷಾಬಂಧನದ ಫೋಟೋಗಳನ್ನು ಯಶ್ ಅವರ ತಂಗಿ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದು. ಅದೇ ಪೋಸ್ಟ್ ಅನ್ನು ರಾಕಿ ಭಾಯ್ ರೀಪೋಸ್ಟ್ ಮಾಡಿದ್ದಾರೆ.

Trending

To Top