Cinema

ಕೃಷ್ಣ ಜನ್ಮಾಷ್ಟಮಿಗೆ ಯಶ್ ಮಾಡುತ್ತಿರುವ ಕೆಲಸವನ್ನು ನೋಡಿದ್ರೆ ನಿಜಕ್ಕೂ ಕಣ್ಣೀರು ಬರುತ್ತೆ! ಸಲಾಂ ರಾಕೀ ಭಾಯ್

ಆಗಸ್ಟ್ 11 ಅಂದರೆ ನಾಳೆ ಶ್ರೀಕೃಷ್ಣ ಜನ್ಮಾಷ್ಟಮಿ. ಹಿಂದೂ ಸಂಪ್ರದಾಯದ ಪ್ರಕಾರ ಇದೊಂದು ವಿಶೇಷವಾದ ಹಬ್ಬ. ಅದರಲ್ಲೂ ಮಕ್ಕಳಿರುವ ಮನೆಯಲ್ಲಿ ಜನ್ಮಾಷ್ಟಮಿ ಸಂಭ್ರಮ ಜೋರಾಗಿಯೇ ಇರುತ್ತದೆ. ಮಕ್ಕಳಿಗೆ ಕೃಷ್ಣನ ವೇಷ ಭೂಷಣ ತೊಡಿಸಿ ಅಲಂಕರಿಸಿ, ತಂದೆ ತಾಯಿಯರು ಸಂಭ್ರಮಿಸುತ್ತಾರೆ. ಸ್ಯಾಂಡಲ್ ವುಡ್ ನಟ ರಾಕಿಂಗ್ ಸ್ಟಾರ್ ಯಶ್ ಸಹ ಕೃಷ್ಣ ಜನ್ಮಾಷ್ಟಮಿ ಆಚರಿಸಲಿದ್ದಾರೆ. ಆದರೆ, ಹಿಂದೆಂದಿಗಿಂತಲೂ ಈ ವರ್ಷದ ಆಚರಣೆ ವಿಶೇಷವಾಗಿ ಇರಲಿದೆ. ಏಕೆಂದರೆ, ಯಶ್ ಅವರಿಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ಕೃಷ್ಣನಂತೆ ಇಬ್ಬರು ಮಕ್ಕಳಿಗೂ ಅಲಂಕಾರ ಮಾಡಿ ಹಬ್ಬದ ಆಚರಣೆ ಮಾಡುವುದು ಖಂಡಿತ.
ಆದರೆ, ಆ ಸಂಭ್ರಮದ ಜೊತೆಗೆ, ಮತ್ತೊಂದು ವಿಶೇಷವಾದ ರೀತಿಯಲ್ಲಿ ಸಂಭ್ರಮಾಚರಣೆ ಮಾಡಲಿದ್ದಾರೆ ಯಶ್. ಕೃಷ್ಣ ಜನ್ಮಾಷ್ಟಮಿಯಂದು ಅನಾಥಾಶ್ರಮದ ಮಕ್ಕಳ ಬೆಳಕಾಗಲಿದ್ದಾರೆ ಯಶ್. ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಆಗಸ್ಟ್ 12ರಂದು ಇಸ್ಕಾನ್ ಸಂಸ್ಥೆ ಅನಾಥ ಮಕ್ಕಳಿಗಾಗಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಅನಾಥ ಮಕ್ಕಳಿಗೆ ಸಹಾಯ ಮಾಡಲಿದ್ದಾರೆ. “ನಿಮ್ಮೊಂದಿಗೆ ಎಂದೆಂದಿಗೂ ನಾವಿದ್ದೇವೆ..” ಎಂಬ ಭರವಸೆಯ ಬೆಳಕನ್ನು ಪುಟ್ಟ ಜೀವಗಳಿಗೆ ನೀಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಮಕ್ಕಳಿಗೆಲ್ಲಾ ವಿಶೇಷವಾದ ಉಡುಗೊರೆ ನೀಡಲಿದ್ದಾರೆ ರಾಕಿ ಭಾಯ್. ಈ ನಿಟ್ಟಿನಲ್ಲಿ ನಟ ಯಶ್ ಅವರ ಸಾಮಾಜಿಕ ಕಾರ್ಯಗಳು ಮುಂದುವರೆಯಲಿದೆ.
ನಮಗೆಲ್ಲ ತಿಳಿದಿರುವ ಹಾಗೆ ನಟ ಯಶ್ ಅವರಿಗೆ ಸಾಮಾಜಿಕ ಕಳಕಳಿ ಹೆಚ್ಚು. ಈ ಹಿಂದೆ ಸಹ ಹಲವಾರು ರೀತಿಯಲ್ಲಿ ಬಡವರಿಗೆ ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡಿದ್ದಾರೆ. ನೀರಿಲ್ಲದ ಪ್ರದೇಶಕ್ಕೆ ನೀರು ಒದಗಿಸಿ ಅದೆಷ್ಟೋ ಜನ ಜೀವನಕ್ಕೆ ಬೆಳಕಾಗಿದ್ದರು ಯಶ್. ಅವರ ಒಳ್ಳೆಯ ಕೆಲಸಗಳು ಇಂದಿಗೂ ಮುಂದುವರೆಯುತ್ತಿದೆ. ಆಗಸ್ಟ್ 11 ಅಂದರೆ ನಾಳೆ ಶ್ರೀಕೃಷ್ಣ ಜನ್ಮಾಷ್ಟಮಿ. ಹಿಂದೂ ಸಂಪ್ರದಾಯದ ಪ್ರಕಾರ ಇದೊಂದು ವಿಶೇಷವಾದ ಹಬ್ಬ. ಅದರಲ್ಲೂ ಮಕ್ಕಳಿರುವ ಮನೆಯಲ್ಲಿ ಜನ್ಮಾಷ್ಟಮಿ ಸಂಭ್ರಮ ಜೋರಾಗಿಯೇ ಇರುತ್ತದೆ. ಮಕ್ಕಳಿಗೆ ಕೃಷ್ಣನ ವೇಷ ಭೂಷಣ ತೊಡಿಸಿ ಅಲಂಕರಿಸಿ, ತಂದೆ ತಾಯಿಯರು ಸಂಭ್ರಮಿಸುತ್ತಾರೆ. ಸ್ಯಾಂಡಲ್ ವುಡ್ ನಟ ರಾಕಿಂಗ್ ಸ್ಟಾರ್ ಯಶ್ ಸಹ ಕೃಷ್ಣ ಜನ್ಮಾಷ್ಟಮಿ ಆಚರಿಸಲಿದ್ದಾರೆ. ಆದರೆ, ಹಿಂದೆಂದಿಗಿಂತಲೂ ಈ ವರ್ಷದ ಆಚರಣೆ ವಿಶೇಷವಾಗಿ ಇರಲಿದೆ. ಏಕೆಂದರೆ, ಯಶ್ ಅವರಿಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ಕೃಷ್ಣನಂತೆ ಇಬ್ಬರು ಮಕ್ಕಳಿಗೂ ಅಲಂಕಾರ ಮಾಡಿ ಹಬ್ಬದ ಆಚರಣೆ ಮಾಡುವುದು ಖಂಡಿತ.

Trending

To Top