Film News

ಹಾಸನದಲ್ಲಿ ನಟ ಯಶ್ ಏನ್ ಮಾಡ್ತಿದ್ದಾರೆ ನೋಡಿ!

ನಟ ರಾಕಿಂಗ್ ಸ್ಟಾರ್ ಯಶ್ ಈಗ ಪ್ಯಾನ್ ಇಂಡಿಯಾ ಸ್ಟಾರ್. ಕೆಜಿಎಫ್ ಸಿನಿಮಾ ನಂತರ ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಯ ಜನತೆ ಕೂಡ ಯಶ್ ಅವರ ಅಭಿಮಾನಿಗಳಾಗಿ ಅವರನ್ನು ಫಾಲೋ ಮಾಡುತ್ತಾರೆ. ನಮಗೆಲ್ಲ ತಿಳಿದಿರುವ ಹಾಗೆ ನಟ ಯಶ್ ಕೆಜಿಎಫ್ ಚಾಪ್ಟರ್ 2 ಸಿನಿಮಾದ ಕೆಲಸಗಳಲ್ಲಿ ಬ್ಯುಸಿಯಾಗಿದ್ದರು. ಈಗ ಕೆಜಿಎಫ್ ಚಾಪ್ಟರ್ 2 ಕೆಲಸಗಳು ಬಹುತೇಕ ಮುಗಿದಿದೆ, ಈಗ ಯಶ್ ಏನ್ ಮಾಡ್ತಿದ್ದಾರೆ ಗೊತ್ತಾ ?

ಕೆಜಿಎಫ್ ಕೆಲಸಗಳ ನಂತರ ಬಿಡುವಾಗಿರುವ ನಟ ಯಶ್ ಕೃಷಿ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು ತಯಾರಿ ನಡೆಸುತ್ತಿದ್ದಾರೆ. ನಮಗೆಲ್ಲ ತಿಳಿದಿರುವ ಹಾಗೆ ಯಶ್ ಅವರು ಎರಡು ವರ್ಷಗಳ ಹಿಂದೆ ಹಾಸನದ ಒಂದು ಗ್ರಾಮದಲ್ಲಿ 80 ಎಕರೆ ಜಮೀನು ಖರೀದಿಸಿದ್ದರು. ಅಲ್ಲಿ ಮಾದರಿ ರೀತಿಯಲ್ಲಿ ಕೃಷಿ ಮಾಡಬೇಕು ಎಂಬ ಕನಸು ಕಟ್ಟಿದ್ದರು. ಇದೀಗ ತಮ್ಮ ಕನಸನ್ನು ನನಸು ಮಾಡುವ ಹಾದಿಯಲ್ಲಿದ್ದಾರೆ.

ಹಾಸನದ ಜಮೀನಿನಲ್ಲಿ ಬೀಡು ಬಿಟ್ಟಿರುವ ನಟ ಯಶ್, ತಾವೇ ಖುದ್ದಾಗಿ ನಿಂತು ಜೆಸಿಬಿ ಮೂಲಕ ನೆಲವನ್ನು ಮಟ್ಟ ಮಾಡಿಸುತ್ತಿದ್ದಾರೆ. ಈಗ ಏಪ್ರಿಲ್ ತಿಂಗಳು, ಮೇ ತಿಂಗಳು ಕಳೆದ ನಂತರ ಮಳೆಗಾಲ ಶುರುವಾಗಲಿದೆ. ಹಾಗಾಗಿ ಕೃಷಿ ಆರಂಭಿಸಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ ನಟ ಯಶ್. ಈ ಮೂಲಕ ಯಶ್ ಅವರು ಎಲ್ಲರಿಗು ಮಾದರಿ ಆಗುವಲ್ಲಿ ಸಂದೇಹವಿಲ್ಲ.

Trending

To Top