News

ಕನ್ನಡದ ಹೆಮ್ಮೆ ರಾಕಿ bhai ಯಶ್ ಅವರ ಏನೆಲ್ಲಾ ಸಾಧನೆ ಮಾಡಿದ್ದಾರೆ ಗೊತ್ತ? ಪ್ರತಿಯೊಬ್ಬ ಕನ್ನಡಿಗ ಶೇರ್ ಮಾಡಲೇಬೇಕು

yash-rare

ನಿಮಗೆಲ್ಲ ಗೊತ್ತಿರೋ ಹಾಗೆ ನಮ್ಮ ಕನ್ನಡದ ಹೆಮ್ಮೆಯ ನಟ ರಾಕಿ bhai ರಾಕಿಂಗ್ ಸ್ಟಾರ್ ಯಶ್ ಅವರು ಇತ್ತೀಚಿಗೆ ಅಷ್ಟೇ KGF ಎಂಬ ಬಹು ದೊಡ್ಡ ಚಿತ್ರವನ್ನು ಮಾಡಿ ಸದ್ಯ KGF ಚಾಪ್ಟರ್ 2 ಚಿತ್ರದಲ್ಲಿ ಬಹಳ ಬ್ಯುಸಿ ಆಗಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಅವರು ಮಾಡಿರುವ ಸಾಧನೆಗಳು ಒಂದ ಎರಡಾ? ರಾಕಿಂಗ್ ಸ್ಟಾರ್ ಯಶ್ ಅವರ ಈ ಸಾಧನೆಗಳನ್ನು ನೋಡಿದ್ರೆ ನಿಜಕ್ಕೂ ಖುಷಿ ಆಗುತ್ತೆ, ಒಬ್ಬ ಸಾಮಾನ್ಯ ಹುಡುಗ ಹೇಗೆ ಕನ್ನಡದವನ್ನು ರಾಷ್ಟ್ರ ಮಟ್ಟದಲ್ಲಿ ಬೆಳಿಸಿದ್ದಾನೆ ನೋಡಿ. ಯಶ್ ಅವರ ಸಾಧನೆಗಳ ಲಿಸ್ಟ್ ಒಮ್ಮೆ ನೋಡಿರಿ. ಇದನ್ನು ಪ್ರತಿಯೊಬ್ಬ ಕನ್ನಡಿಗ ಓದಲೇಬೇಕು ಹಾಗು ಆದಷ್ಟು ಶೇರ್ ಮಾಡಲೇಬೇಕು.
1 – ರಾಕಿಂಗ್ ಸ್ಟಾರ್ ಯಶ್ ಅವರು ಕನ್ನಡದ ಸಿಲ್ಲಿ ಲಲ್ಲಿ ಧಾರಾವಾಹಿಯ ಮೂಲಕ ಕನ್ನಡ ಕಿರುತೆರೆಗೆ ಕಾಲಿಟ್ಟರು. ಇದಾದ ನಂತರ ರಾಕಿಂಗ್ ಸ್ಟಾರ್ ಯಶ್ ಅವರು ಮಳೆಬಿಲ್ಲು ಹಾಗು ಪ್ರೀತಿ ಇಲ್ಲದ ಮೇಲೆ ಎಂಬ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಇವರ ನಟನೆಯನ್ನು ನೋಡಿ 2005 ರಲ್ಲೇ ಯಶ್ ಅವರು ಕರ್ನಾಟಕದ ಮನೆ ಮಾತಾಗಿದ್ದರು. ಇದಲ್ಲದೆ ಇವರ ಟ್ಯಾಲೆಂಟನ್ನು ನೋಡಿ ನಿರ್ದೇಶಕ ಶಶಾಂಕ್ ಅವರ ಮೊಗ್ಗಿನ ಮನಸ್ಸು ಚಿತ್ರದಲ್ಲಿ ಒಂದು ಮುಖ್ಯ ಪಾತ್ರವನ್ನು ಮಾಡಿದ್ದಾರೆ. ಯಶ್ ಅವರಿಗೆ ಅವರ ಮೊದಲ ಚಿತ್ರ ಮೊಗ್ಗಿನ ಮನಸ್ಸು ಚಿತ್ರಕ್ಕೆ Filmfare Awards South ಪ್ರಶಸ್ತಿ ಗಿಟ್ಟಿಸಿಕೊಂಡರು. ತನ್ನ ಮೊಟ್ಟ ಮೊದಲ ಚಿತ್ರಕ್ಕೆ filmfare ಅವಾರ್ಡ್ ಅನ್ನು ಪಡೆದಿರುವ ಏಕೈಕ ಕನ್ನಡ ನಟ ಯಶ್. 2 – ರಾಕಿಂಗ್ ಸ್ಟಾರ್ ಯಶ್ ಅವರ Mr. and Mrs. ರಾಮಾಚಾರಿ ಚಿತ್ರ ಗಲ್ಲ ಪೆಟ್ಟಿಗೆಯಲ್ಲಿ ಬರೋಬ್ಬರಿ 85 ಕೋಟಿಗೂ ಹೆಚ್ಚು ಸಂಪಾದನೆಯನ್ನು ಮಾಡಿತ್ತು. ಮುಂಗಾರು ಮಳೆ ಬಿಟ್ಟರೆ ಇಷ್ಟೊಂದು ಸಂಪಾದನೆಯನ್ನು ಮಾಡಿದ ಏಕೈಕ ಕನ್ನಡ ಚಿತ್ರ Mr. and Mrs. ರಾಮಾಚಾರಿ. ಇದಲ್ಲದೆ ಈ ಚಿತ್ರಕ್ಕಾಗಿ ಯಶ್ ಅವರು Filmfare Awards ಸೌತ್, SIIMA ಅವಾರ್ಡ್ ಹಾಗು IIFA ಉತ್ಸವಮ್ ಅವಾರ್ಡ್ ಗಳನ್ನೂ ಪಡೆದಿದ್ದಾರೆ. ಈ ಮೂಲಕ ಒಂದೇ ಚಿತ್ರಕ್ಕೆ ಮೂರು ದೊಡ್ಡ ಅವಾರ್ಡ್ ಗಳನ್ನೂ ಪಡೆದಿರುವ ಏಕೈಕ ಕನ್ನಡ ನಟ ಯಶ್ ಆಗಿದ್ದಾರೆ.
3 . ನಿಮಗೆಲ್ಲ ಗೊತ್ತಿರೋ ಹಾಗೆ ರಾಕಿಂಗ್ ಸ್ಟಾರ್ ಯಶ್ ಅವರು ಯಶೋ ಮಾರ್ಗ ಎಂಬ foundation ಅನ್ನು ಕೂಡ ನಡೆಸುತ್ತಿದ್ದಾರೆ. ಈ ಮೂಲಕ ಕರ್ನಾಟಕ ಅದೆಷ್ಟೋ ಹಳ್ಳಿಗಳಿಗೆ ಕುಡಿಯೋ ನೀರಿನ ವ್ಯವಸ್ಥೆಯನ್ನು ಒದಗಿಸಿ ಕೊಟ್ಟಿದ್ದಾರೆ. ತಮ್ಮ ಸಂಪಾದನೆಯ ಸುಮಾರು 40 ರಷ್ಟು ಭಾಗವನ್ನು ಯಶ್ ಅವರು ಈ ಹಳ್ಳಿಯ ಜನರ ಸೇವೆಗೆ ಉಪಯೋಗಿಸುತ್ತಾರೆ. ಇದಲ್ಲದೆ ಇತ್ತೀಚಿಗೆ ನಮ್ಮ ಕರ್ನಾಟಕ ಮಡಿಕೇರಿಯಲ್ಲಿ ಪ್ರವಾಹ ಪರಿಸ್ಥಿತಿ ಇದ್ದಾಗ ಯಶ್ ಅವರು ಅವರ foundation ಮೂಲಕ ಯಾವ ಕನ್ನಡ ನಟ ಮಾಡದೆ ಇರುವಷ್ಟು ಸಹಾಯವನ್ನು ಮಡಿಕೇರಿ ಜನಕ್ಕೆ ಮಾಡಿದ್ದಾರೆ. 4 . ಇನ್ನು KGF ಚಿತ್ರಕ್ಕೆ ಬರೋಣ! ನಿಮಗೆಲ್ಲ ಗೊತ್ತಿರೋ ಹಾಗೆ ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ KGF ಚಿತ್ರ ಬಿಡುಗಡೆ ಆಗಿ ಇಡೀ ದೇಶದಲ್ಲಿ ಬಹಳ ಸದ್ದು ಮಾಡಿತ್ತು, ಈಗಲೂ ಸದ್ದು ಮಾಡುತ್ತಿದೆ. KGF ಚಿತ್ರ ಕನ್ನಡ ಅಲ್ಲದೆ ತೆಲುಗು, ತಮಿಳು, ಮಲಯಾಳಂ ಹಾಗು ಹಿಂದಿ ಭಾಷೆಯಲ್ಲಿ ಬಿಡುಗಡೆ ಆಗಿ ಎಲ್ಲೆಡೆ ಭರ್ಜರಿ ಆಗಿ ಪ್ರದರ್ಶನ ಕಾಣುತ್ತಿದೆ. ಇದೇ ಮೊದಲ ಬಾರಿಗೆ ಒಂದು ಕನ್ನಡ ಚಿತ್ರ ಭಾರತದ 5 ಭಾಷೆಯಲ್ಲಿ ಏಕ ಕಾಲಕ್ಕೆ ಬಿಡುಗಡೆ ಆಗಿ ಎಲ್ಲಾ ಭಾಷೆಯಲ್ಲೂ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಇದಲ್ಲದೆ ಒಂದು ಕನ್ನಡ ಚಿತ್ರವನ್ನು ಇಡೀ ಭಾರತವೇ ಹಾಡಿ ಹೊಗಳುತ್ತಿರುವುದು ಇದೇ ಮೊದಲು. ಹಿಂದೆ ಯಾವ ಕನ್ನಡ ಚಿತ್ರ ಕೂಡ ಇಂತಹ ಒಂದು ಸೌಂಡ್ ಮಾಡಿರಲಿಲ್ಲ.
5 . ಇದೇ ಮೊದಲ ಬಾರಿಗೆ ಉತ್ತರ ಭಾರತ ಜನ ಒಂದು ಕನ್ನಡ ಚಿತ್ರವನ್ನು ಹಾಡಿ ಹೊಗಳಿದ್ದಾರೆ. ಇದೇ ಮೊದಲ ಬಾರಿಗೆ ಬಾಲಿವುಡ್ ನಿರ್ಮಾಪಕರು ಹಾಗು ನಟರು ಕನ್ನಡ ಚಿತ್ರವನ್ನು ನೋಡಿ ಹೆದರಿದ್ದಾರೆ. ದಲ್ಲದೆ KGF ಚಿತ್ರ ಕನ್ನಡದ ಮೊಟ್ಟ ಮೊದಲ 100 ಕೋಟಿ ಸಂಪಾದನೆಯನ್ನು ದಾಟಿದ ಚಿತ್ರವಾಗಿದೆ. ಇದು ನಿಜಕ್ಕೂ ಒಂದು ಅದ್ಭುತ ಸಾಧನೆ ಎಂದೇ ಹೇಳಬಹುದು. ರಾಕಿಂಗ್ ಸ್ಟಾರ್ ಯಶ್ ಅವರಿಗೆ ಹಾಗು KGF ಚಿತ್ರ ತಂಡಕ್ಕೆ ಒಂದು ಸಲಾಂ! ಯಶ್ ಅವರು ಹೀಗೆ ಅದ್ಭುತ ಸಿನೆಮಾವನ್ನು ಕನ್ನಡಕ್ಕೆ ಕೊಡಲಿ, ಕನ್ನಡವನ್ನು, ಕನ್ನಡ ಚಿತ್ರ ರಂಗವನ್ನು ಉತ್ತುಂಗದ ಶಿಖರಕ್ಕೆ ಏರಿಸಿದಲ್ಲಿ ಎಂಬುದೇ ನಮ್ಮ ಆಸೆ! ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿರಿ.

Trending

To Top