Cinema

ದುನಿಯಾ ಚಿತ್ರದ ಆ ಒಂದು ಪಾತ್ರವನ್ನು ಯಶ್ ಮಾಡಬೇಕಿತ್ತು! ಕೈ ತಪ್ಪಿದ್ದು ಹೇಗೆ ಗೊತ್ತಾ

ನಟ ಯಶ್ ಈಗ ನ್ಯಾಷನಲ್ ಸ್ಟಾರ್. ಅವರನ್ನು ರಾಕಿ ಭಾಯ್, ರಾಕಿಂಗ್ ಸ್ಟಾರ್ ಯಶ್ ಎಂದೇ ಕರೆಯಲಾಗುತ್ತದೆ. ಕೆಜಿಎಫ್ ಸಿನಿಮಾ ಮೂಲಕ ಯಶ್ ಅವರ ಜನಪ್ರಿಯತೆ ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆದಿದೆ. ಇದೀಗ ಯಶ್ ಅವರ ಕೆಲಸ ಮಾಡಲು ಹಲವಾರು ನಿರ್ದೇಶಕರು ಹಾಗೂ ನಿರ್ಮಾಪಕರು ಕಾಯುತ್ತಿದ್ದಾರೆ. ಆದರೆ ಅಂದು ಯಶ್ ಅವರು ಸಿನಿಮಾದಲ್ಲಿ ನಟಿಸುವ ಅವಕಾಶಕ್ಕಾಗಿ ಎದುರು ನೋಡುತ್ತಿದ್ದ ಸಂದರ್ಭದಲ್ಲಿ, ಚಿತ್ರೀಕರಣ ಶುರುಮಾಡಿದ್ದ ಸಿನಿಮಾ ದುನಿಯಾ. ಈ ಸಿನಿಮಾದಲ್ಲಿ ಒಂದು ಸಣ್ಣ ಪಾತ್ರದಲ್ಲಿ ನಟಿಸಬೇಕಿತ್ತು ಯಶ್. ಆದರೆ ಆ ಪಾತ್ರ ಕೈತಪ್ಪಿ ಹೋಯಿತು.. ಯಾಕೆ ಗೊತ್ತಾ ಮುಂದೆ ಓದಿ..
2006 ಮತ್ತು 2007 ಕನ್ನಡ ಚಿತ್ರರಂಗಕ್ಕೆ ಹೊಸ ಆಯಾಮ ಬರೆದ ವರ್ಷ. ಹೊಸಬರ ದಂಡೇ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿತು. ಅದರಲ್ಲಿ ಬಹಳ ಪ್ರಮುಖವಾದ ಸಿನಿಮಾಗಳು ಮುಂಗಾರು ಮಳೆ ಮತ್ತು ದುನಿಯಾ . ಈ ಎರಡು ಸಿನಿಮಾಗಳ ಕಥಾ ಹಂದರ ಬಹಳ ವಿಭಿನ್ನವಾಗಿದ್ದವು ಒಂದು ಲವ್ ಸ್ಟೋರಿ ಮತ್ತೊಂದು ರೌಡಿಸಂ ಜೊತೆಗೆ ಲವ್ ಸ್ಟೋರಿ. ನಿರ್ದೇಶಕ ಸೂರಿ ಅವರ ದುನಿಯಾ ಸಿನಿಮಾದಲ್ಲಿ ರೌಡಿಸಂ ಜೊತೆಗೆ ಲವ್ ಸ್ಟೋರಿಯನ್ನು ಉತ್ತಮವಾಗಿ ಬೆರೆಸಲಾಗಿತ್ತು. ಹಾಗಾಗಿ ಈ ಸಿನಿಮಾ ಯಶಸ್ಸು ಗಳಿಸಿತು. ಈ ಸಿನಿಮಾ ಮೂಲಕ ದುನಿಯಾ ವಿಜಯ್, ದುನಿಯಾ ರಶ್ಮಿ , ಲೂಸ್ ಮಾದ ಯೋಗಿ, ರಂಗಾಯಣ ರಘು ಪಾತ್ರಗಳು ಬಹಳ ಫೇಮಸ್ ಆಯಿತು.
ಆಗ ನಂದಗೋಕುಲ ಸಿಲ್ಲಿ ಲಲ್ಲಿ ಧಾರಾವಾಹಿಗಳಲ್ಲಿ ಪುಟ್ಟ ಪಾತ್ರಗಳಲ್ಲಿ ನಟಿಸುತ್ತಿದ್ದ ನಟ ಯಶ್ ಅವರು ಸಿನಿಮಾ ಅವಕಾಶಕ್ಕಾಗಿ ಕಾಯುತ್ತಿದ್ದಾಗ, ದುನಿಯಾ ಸಿನಿಮದಲ್ಲಿ ಒಂದು ಸಣ್ಣ ಪಾತ್ರದಲ್ಲಿ ನಟಿಸುವ ಅವಕಾಶ ಕೊಡಿಸುವುದಕ್ಕಾಗಿ ನಂದಗೋಕುಲ ಧಾರಾವಾಹಿಯ ಛಾಯಾಗ್ರಹಕರಾದ ಸತ್ಯ ಹೆಗ್ಡೆ ಅವರು ಯಶ್ ರನ್ನು ದುನಿಯಾ ಸೂರಿ ಅವರ ಬಳಿ ಕರೆದುಕೊಂಡು ಹೋಗಿದ್ದರು. ದುನಿಯಾ ಸಿನಿಮಾದಲ್ಲಿ ಒಂದು ಪ್ರಮುಖ ಪಾತ್ರ ನಟ ಕಿಶೋರ್ ನಿರ್ವಹಿಸಿದ ಪೊಲೀಸ್ ಆಫೀಸರ್ ಪಾತ್ರ. ಇದರಲ್ಲಿ ಕಿಶೋರ್ ಅವರಿಗೆ ಆಸಿಸ್ಟಂಟ್ ಒಬ್ಬರಿದ್ದರು, ಆ ಆಸಿಸ್ಟಂಟ್ ಪಾತ್ರದಲ್ಲಿ ಯಶ್ ನಟಿಸಬೇಕಿತ್ತು. ಕಿಶೋರ್ ಅವರ ಆಸಿಸ್ಟಂಟ್, ರೌಡಿ ಒಬ್ಬನನ್ನು ಎಳೆದುಕೊಂಡು ಹೋಗಿ ಶೂಟ್ ಮಾಡುವ ದೃಶ್ಯ ಇತ್ತಂತೆ , ಇದರಲ್ಲಿ ನಟಿಸಬೇಕಿತ್ತು ಯಶ್.
ಆದರೆ ಸ್ಕ್ರಿಪ್ಟ್ ನಲ್ಲಿ ಬದಲಾವಣೆ ಮಾಡಿ ಕಿಶೋರ್ ಅವರೇ ರೌಡಿಯನ್ನು ಶೂಟ್ ಮಾಡಿದರೆ ಚೆನ್ನಾಗಿರುತ್ತದೆ ಎಂದು ನಿರ್ಧರಿಸಲಾಯಿತಂತೆ. ಹಾಗಾಗಿ, ಆಸಿಸ್ಟಂಟ್ ಪಾತ್ರದಲ್ಲಿ ಯಶ್ ನಟಿಸುವ ಅವಕಾಶ ಕೈತಪ್ಪಿಹೋಯಿತು ಎನ್ನಲಾಗಿದೆ. ಈ ಸುದ್ದಿ ಇಷ್ಟವಾದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ, ನಿಮ್ಮ ಅನಿಸಿಕೆ ಗಳನ್ನೂ ತಪ್ಪದೆ ಕಾಮೆಂಟ್ ಮೂಲಕ ನಮಗೆ ತಿಳಿಸಿ.

Trending

To Top