News

(video)ಹಿಂದಿ ಫೇಮಸ್ ಚಾನೆಲ್ ಗಳಲ್ಲಿ ಯಶ್ ಅವರ ಸಂದರ್ಶನ! ಬಾಲಿವುಡ್ ನಟರಿಗೆ ಸಕತ್ ಟಾಂಗ್, ವಿಡಿಯೋ ವೈರಲ್

kgf11

ನಿಮಗೆಲ್ಲ ಗೊತ್ತಿರೋ ಹಾಗೆ ಕನ್ನಡದ ಹೆಮ್ಮೆಯ ರಾಕಿಂಗ್ ಸ್ಟಾರ್ ಯಶ್ ಅವರು ಮೊನ್ನೆ KGF ಪ್ರೊಮೋಷನ್ಸ್ ಗಾಗಿ ಮುಂಬೈ ನಲ್ಲಿ ಇದ್ದರು. ಯಶ್ ಅವರು ಬಹಳ ಫೇಮಸ್ ಆದ ಹಿಂದಿ ಚಾನೆಲ್ ಗಳಲ್ಲಿ ಸಂದರ್ಶನ ಕೊಟ್ಟರು. ಯಶ್ ಅವರ ಬಾಲಿವುಡ್ ಚಾನೆಲ್ ಸಂದರ್ಶನ ಯೌಟ್ಯೂಬ್ ನಲ್ಲಿ ಸಿಕ್ಕಾ ಪಟ್ಟೆ ವೈರಲ್ ಆಗಿದೆ. KGF ಚಿತ್ರ ನಿಮಗೆಲ್ಲ ಗೊತ್ತಿರೋ ಹಾಗೆ ಕನ್ನಡ ಅಲ್ಲದೆ, ತಮಿಳು, ತೆಲುಗು, ಮಲಯಾಳಂ ಹಾಗು ಹಿಂದಿ ಭಾಷೆಯಲ್ಲಿ ಕೂಡ ಬಿಡುಗಡೆ ಆಗಲಿದೆ. ಈ ಸಂದರ್ಶನ ದಲ್ಲಿ ಯಶ್ ಅವರ ಬಾಲಿವುಡ್ ನಟರಿಗೆ ಹಾಗು ಯಾಕೆ ದಕ್ಷಿಣ ಭಾರತದ ಸಿನೆಮಾಗಳಲ್ಲಿ ಒಳ್ಳೆಯ ಕಂಟೆಂಟ್ ಇರುತ್ತದೆ ಎಂಬುವುದನ್ನು ಹೇಳಿದ್ದಾರೆ. ನೀವು ತಪ್ಪದೆ ಈ ಕೆಳಗಿನ ವಿಡಿಯೋ ನೋಡಿರಿ

ಯಶ್ ಅವರ KGF ಚಿತ್ರಕ್ಕಾಗಿ ಉತ್ತರ ಭಾರತದಲ್ಲಿ ಜನ ಎಷ್ಟು ಕಾತುರದಿಂದ ವೇಟ್ ಮಾಡ್ತಾ ಇದ್ದಾರೆ ಗೊತ್ತ! ಶಾರುಖ್ ಖಾನ್ ಅವರ ಜೀರೋ ಚಿತ್ರಕ್ಕೆ ಕೂಡ ಇಷ್ಟೊಂದು ವೇಟ್ ಮಾಡ್ತಾ ಇಲ್ಲ ಭಾರತದ ಜನ! ಕನ್ನಡ ಚಿತ್ರ ರಂಗದ ಕಡೆ ಇಡೀ ಭಾರತದ ಜನ ತಿರುಗಿ ನೋಡುವಂತೆ ಮಾಡಿದ ರಾಕಿಂಗ್ ಸ್ಟಾರ್ ಯಶ್, ನಿರ್ದೇಶಕ ಪ್ರಶಾಂತ್ ನೀಲ್ ಹಾಗು KGF ಚಿತ್ರದ ನಿರ್ಮಾಪಕರಿಗೆ ನಮ್ಮ ಕಡೆ ಇಂದ ಸಲಾಂ! ಯಶ್ ಅವರು ಈಗಾಗಲೇ ಹಿಂದಿಯಲ್ಲಿ, ತಮಿಳಿನಲ್ಲಿ, ತೆಲುಗಿನಲ್ಲಿ ಸಂದರ್ಶನವನ್ನು ಕೊಟ್ಟಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಅವರು ಎಲ್ಲೇ ಹೋಗಲಿ ಎಲ್ಲ ಕಡೆ ಬರೀ ತಮ್ಮ ಬಗ್ಗೆ ಮಾತಾಡಿಲ್ಲ, ಯಶ್ ಅವರು ಕನ್ನಡ ಚಿತ್ರಗಳ ಬಗ್ಗೆ, ಕರ್ನಾಟಕದ ಬಗ್ಗೆ, ಕನ್ನಡ ಟ್ಯಾಲೆಂಟ್ ಗಳ ಬಗ್ಗೆ ಮಾತಾಡಿ ಕನ್ನಡದ ಕೀರ್ತಿ ಪತಾಕೆಯನ್ನು ಇಡೀ ಭಾರತದಲ್ಲಿ ಹರಿಸಿದ್ದಾರೆ.
ಇತ್ತೀಚಿಗೆ ರಾಕಿಂಗ್ ಸ್ಟಾರ್ ಯಶ್ ಹಾಗು ರಾಧಿಕಾ ಪಂಡಿತ್ ಜೋಡಿಗೆ ಒಂದು ಮುದ್ದಾದ ಹೆಣ್ಣು ಮಗು ಆಗಿದೆ. ಈ ವಿಷ್ಯ ತಿಳಿದು ಯಶ್ ಅಭಿಮಾನಿಗಳು ಹಾಗು ಎಲ್ಲಾ ಕನ್ನಡಿಗರು ಖುಷಿ ಪಟ್ಟಿದ್ದಾರೆ. ಈ ಸುದ್ದಿ ನೆನ್ನೆ ಎಲ್ಲಾ ಸೋಶಿಯಲ್ ಮೀಡಿಯಾ ದಲ್ಲಿ ಹಾಗು ನ್ಯೂಸ್ ಚಾನೆಲ್ ಗಳಲ್ಲಿ ವೈರಲ್ ಆಗಿತ್ತು. ಅದಲ್ಲದೆ ಯಶ್ ಅವರಿಗೆ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕೂಡ ಕರೆ ಮಾಡಿ ಶುಭ ಕೋರಿದ್ದಾರೆ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿರಿ.

Trending

To Top