ಯೂರೋಪ್ ನಲ್ಲಿ ಎಂಜಾಯ್ ಮಾಡುತ್ತಿರುವ ರಾಖಿ ಭಾಯ್ ಕುಟುಂಬ..!

ಸ್ಯಾಂಡಲ್ ವುಡ್ ನಲ್ಲಿ ಕ್ಯೂಟ್ ಜೋಡಿಗಳಲ್ಲಿ ರಾಧಿಕಾ ಪಂಡಿತ್ ಹಾಗೂ ಯಶ್ ಜೋಡಿ ಸಹ ಒಂದಾಗಿದೆ. ಯಶ್ ಸಹ ಪಕ್ಕಾ ಫ್ಯಾಮಿಲಿಮೆನ್ ಎಂಬುದನ್ನೂ ಸಹ ಈಗಾಗಲೇ ನಿರೂಪಿಸಿದ್ದಾರೆ. ಸದ್ಯ ಕೆಜಿಎಫ್-2 ಸಿನೆಮಾದ ಬಳಿಕ ಯಶ್ ತನ್ನ ಫ್ಯಾಮಿಲಿಯೊಂದಿಗೆ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಅನೇಕ ಪ್ರವಾಸಗಳನ್ನು ಹಮ್ಮಿಕೊಂಡಿದ್ದಾರೆ. ಈಗಾಗಲೇ ಕೆಲವೊಂದು ಪ್ರವಾಸಗಳನ್ನು ಪೂರ್ಣಗೊಳಿಸಿದ ಯಶ್ ಕುಟುಂಬ ಇದೀಗ  ಯುರೋಪ್ ದೇಶದಲ್ಲಿ ವೆಕೇಷನ್ ಎಂಜಾಯ್ ಮಾಡುತ್ತಿದ್ದಾರೆ.

ಕೆಜಿಎಫ್-2 ಸಿನೆಮಾದ ಪ್ರಮೋಷನ್ ಕಾರ್ಯಕ್ರಮಗಳಲ್ಲಿ ಬಿಡುವಿಲ್ಲದೇ ಊರೂರು ಸುತ್ತಿದ್ದರು. ಆ ಮೂಲಕ ಪ್ರೇಕ್ಷಕರ ಮುಂದೆ ಕಾಣಿಸಿಕೊಂಡಿದ್ದರು, ಕೆಜಿಎಫ್ ಸಿನೆಮಾ ತೆರೆಗೆ ಬಂದ ಕೂಡಲೇ ಯಶ್ ತನ್ನ ಕುಟುಂಬದ ಜೊತೆಗೆ ಕಾಲಕಳೆಯಲು ಶುರು ಮಾಡಿದರು. ಈ ಹಾದಿಯಲ್ಲಿ ರಾಜ್ಯ ಸೇರಿದಂತೆ ವಿದೇಶಗಳಲ್ಲೂ ಸಹ ಯಶ್ ಕುಟುಂಬ ಟ್ರಿಪ್ ಗಳನ್ನು ಎಂಜಾಯ್ ಮಾಡಿದ್ದರು. ಇನ್ನೂ ಯಶ್ ಅಭಿಮಾನಿಗಳೂ ಮಾತ್ರ ಯಶ್ ರವರ ಮುಂದಿನ ಸಿನೆಮಾಗಾಗಿ ಕಾಯುತ್ತಿದ್ದರೇ. ಯಶ್ ಮಾತ್ರ ತನ್ನ ಕುಟುಂಬದೊಂದಿಗೆ ಜಾಲಿ ಟ್ರಿಪ್ ಎಂಜಾಯ್ ಮಾಡುತ್ತಿದ್ದಾರೆ. ಇನ್ನೂ ಈ ಹಿಂದೆ ಯಶ್ ಅನಿಮಲ್ ಪಾರ್ಕ್‌ಗೆ ತನ್ನ ಕುಟುಂಬದ ಜೊತೆ ಹೋಗಿದ್ದರು. ಅಲ್ಲಿನ ಪೊಟೋಗಳು ವಿಡಿಯೋ ಗಳು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದರು. ಪೊಟೋಗಳು ವಿಡಿಯೋಗಳು ವೈರಲ್ ಆಗಿತ್ತು.

ಇದೀಗ ಯಶ್ ತನ್ನ ಕುಟುಂಬದೊಂದಿಗೆ ಯೂರೋಪ್ ಪ್ರವಾಸಕ್ಕೆ ಹೊರಟಿದ್ದು, ಅಲ್ಲಿನ ಸುಂದರವಾದ ಪ್ರದೇಶಗಳಲ್ಲಿ ಸುತ್ತಾಡುತ್ತಾ ಎಂಜಾಯ್ ಮಾಡುತ್ತಿದ್ದಾರೆ. ಅಲ್ಲಿನ ಕೆಲವೊಂದು ಪೊಟೋಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಯಶ್ ಪತ್ನಿ ರಾಧಿಕಾ ಪಂಡಿತ್ ಸಹ ಕ್ಯಾಪ್ಷನ್ ಹೈಲೈಟ್ ಆಗಿದೆ. ಸದ್ಯ ಈ ಪೊಸ್ಟ್ ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಜೊತೆಗೆ ಅವರ ಅಭಿಮಾನಿಗಳೂ ಸಹ ಲೈಕ್ಸ್ ಕಾಮೆಂಟ್ ಗಳನ್ನು ಹರಿಬಿಟ್ಟಿದ್ದಾರೆ. ಅಷ್ಟೇಅಲ್ಲದೇ ಈ ಪೊಟೋಗಳಿಗೆ ಹಿರಿಯ ನಟಿ ಸುಮಲತಾ ಸೇರಿದಂತೆ ಕೆಲ ಸೆಲೆಬ್ರೆಟಿಗಳೂ ಸಹ ಮೆಚ್ಚುಗೆಯ ಕಾಮೆಂಟ್ ಗಳನ್ನು ಹಾಕಿದ್ದಾರೆ. ಇನ್ನೂ ಯಶ್ ಪೊಟೋಗಳಿಗೆ ಅವರ ಅಭಿಮಾನಿಗಳು ಯಶ್ 19 ರ ಬಗ್ಗೆ ಅಪ್ಡೇಟ್ ನೀಡಿ ಎಂದು ಕಾಮೆಂಟ್ ಕೊಟ್ಟಿರುವುದು ವಿಶೇಷವಾಗಿದೆ.

ಇನ್ನೂ ಯಶ್ ಕುಟುಂಬ ಇಟಲಿ, ಸ್ಲೋವೆನಿಯಾ ಮೊದಲಾ ಯೂರೋಪ್ ರಾಷ್ಟ್ರಗಳಲ್ಲಿ ಹಾಲಿಡೇಸ್ ಎಂಜಾಯ್ ಮಾಡುತ್ತಿದ್ದಾರೆ. ಅಲ್ಲಿನ ಕೆಲವೊಂದು ಸುಂದರ ತಾಣಗಳಲ್ಲಿ ನಿಂತು ಪೋಸ್ ಕೊಟ್ಟಿದ್ದಾರೆ. ಪುಟ್ಟ ದ್ವೀಪರಲ್ಲಿರುವ ಲೇಕ್ ಬ್ಲಡ್ ಚರ್ಚ್ ಬಳಿ ರಾಧಿಕಾ ಪೋಸ್ ಕೊಟ್ಟಿದ್ದಾರೆ. ಇನ್ನೂ ಪ್ರವಾಸದಲ್ಲಿ ವಿಶೇಷ ಖಾದ್ಯಗಳನ್ನು ಸವಿಯುತ್ತಿದ್ದಾರೆ. ಸದ್ಯ ರಾಖಿ ಭಾಯ್ ಕುಟುಂಬದ ಸಂತೋಷದಿಂದ ಹಾಲಿಡೇ ಟ್ರಿಪ್ ಎಂಜಾಯ್ ಮಾಡುತ್ತಿದ್ದರೇ, ಅವರ ಅಭಿಮಾನಿಗಳಿಗೆ ಯಶ್ 19 ಸಿನೆಮಾದ ಅಪ್ಡೇಟ್ ಬಗ್ಗೆ ಚಿಂತೆಯಾಗಿದೆ.

Previous articleಮೊದಲ ಬಾರಿಗೆ ಮಗನ ಜೊತೆ ರೀಲ್ಸ್ ಮಾಡಿದ ನಟಿ ಸಂಜನಾ ಗಲ್ರಾನಿ..!
Next articleಮೈಂಡ್ ಬ್ಲಾಕ್ ಆಗುವಂತಹ ಹಾಟ್ ಪೊಟೋಸ್ ಶೇರ್ ಮಾಡಿದ ಜಾನ್ವಿ ಕಪೂರ್…!