Film News

ಕುಟುಂಬದೊಂದಿಗೆ ಮಾಲ್ಡಿವ್ಸ್ ನಲ್ಲಿ ಎಂಜಾಯ್ ಮಾಡುತ್ತಿರುವ ಯಶ್

ಬೆಂಗಳೂರು: ಸುಮಾರು ತಿಂಗಳುಗಳಿಂದ ಶೂಟಿಂಗ್ ಕೆಲಸಗಳಲ್ಲಿ ಬ್ಯುಸಿಯಾಗಿದ್ದ ನಟ ಯಶ್ ಇದೀಗ ತಮ್ಮ ಕುಟುಂಬ ಸಮೇತ ಭೂಲೋಕದ ಸ್ವರ್ಗ ಎಂತಲೇ ಕರೆಯುವ ಮಾಲ್ಡೀವ್ಸ್ ಗೆ ತೆರಳಿದ್ದು, ಅಲ್ಲಿ ತೆಗೆದ ಪೊಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ನಟ ಯಶ್ ಕೆಜಿಎಫ್-೨ ಚಿತ್ರದ ಶೂಟಿಂಗ್ ನಲ್ಲಿದ್ದ ಕಾರಣ ಜೊತೆಗೆ ಶೂಟಿಂಗ್ ಎಲ್ಲಾ ಹೊರಪ್ರದೇಶದಲ್ಲಿ ನಡೆದ ಕಾರಣ ತಾವು ತಮ್ಮ ಕುಟುಂಬದಿಂದ ದೂರವುಳಿದಿದ್ದರು. ಕೊರೋನಾ ಹಿನ್ನೆಲೆಯಲ್ಲಿ ದೂರವಿದ್ದ ನಟ ಯಶ್ ಇದೀಗ ಕೆಜಿಎಫ್-೨ ಚಿತ್ರದ ಶೂಟಿಂಗ್ ಮುಗಿದಿದ್ದು, ತಮ್ಮ ಪತ್ನಿ ರಾಧಿಕಾ ಪಂಡಿತ್ ಹಾಗೂ ಇಬ್ಬರೂ ಮಕ್ಕಳೊಂದಿಗೆ ಮಾಲ್ಡೀವ್ಸ್ ಗೆ ತೆರಳಿದ್ದಾರೆ.

ಇತ್ತೀಚಿಗಷ್ಟೆ ಸಿನೆಮಾ ಸೆಲೆಬ್ರೆಟಿಗಳು ಮಾಲ್ಡೀವ್ಸ್ ಗೆ ತೆರಳಿ ಸಖತ್ ಎಂಜಾಯ್ ಮಾಡಿ, ಪೊಟೋಗಳನ್ನು ಶೇರ್ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದೀಗ ಯಶ್-ರಾಧಿಕಾ ಹಾಗೂ ಅವರ ಇಬ್ಬರೂ ಮಕ್ಕಳು ಮಾಲ್ಡೀವ್ಸ್ ನಲ್ಲಿ ಎಂಜಾಯ್ ಮಾಡುತ್ತಿರುವ ಪೊಟೋಗಳು ವೈರಲ್ ಆಗಿದೆ. ನಟ ಯಶ್ ರವರೇ ಪೊಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

ಇನ್ನೂ ಪೊಟೋ ಶೇರ್ ಮಾಡುವುದರ ಜೊತೆಗೆ ಸ್ವರ್ಗ ಯಾವುದಾದರೂ ಇದೇ ಎಂದರೇ ಅದು ಮಾಲ್ಡೀವ್ಸ್ ಮಾತ್ರ ಎಂದು ಫೇಸ್ ಬುಕ್ ನಲ್ಲಿ ಬರೆದು ಶೇರ್ ಮಾಡಿದ್ದಾರೆ. ಜೊತೆಗೆ ತಮ್ಮ ಮಕ್ಕಳೊಂದಿಗೆ ಆಟವಾಡುವಂತಹ ಪೊಟೋಗಳು, ಪತ್ನಿಯೊಂದಿಗೆ ಸೆಲ್ಫಿ ಮೊದಲಾದವನ್ನು ಶೇರ್ ಮಾಡಿದ್ದಾರೆ.

Trending

To Top