ಗಿಣಿಮರಿಗಳ ಜೊತೆ ದಿನ ಕಳೆದ ರಾಖಿ ಭಾಯ್ ಕುಟುಂಬ……!

ಸ್ಯಾಂಡಲ್ ವುಡ್ ಸ್ಟಾರ್‍ ಜೋಡಿಯಾದ ಯಶ್ ಹಾಗೂ ರಾಧಿಕಾ ದಂಪತಿ ಸಮಯ ಸಿಕ್ಕಾಗ ಪ್ರವಾಸ ಕೈಗೊಳ್ಳುತ್ತಿರುತ್ತಾರೆ. ಕೆಜಿಎಫ್-2 ಸಿನೆಮಾದ ಕಾರಣದಿಂದ ಯಶ್ ತಮ್ಮ ಕುಟುಂಬದೊಂದಿಗೆ ಕಾಲ ಕಳೆಯಲು ಆಗಿರಲಿಲ್ಲ. ಇದೀಗ ಕೆಜಿಎಫ್-2 ಸಿನೆಮಾ ಭರ್ಜರಿಯಾಗಿ ಊಹಿಸದ ರೀತಿಯಲ್ಲಿ ಯಶಸ್ಸು ಕಂಡಿದೆ. ಇದೀಗ ರಿಲ್ಯಾಕ್ಸ್ ಮೂಡ್ ನಲ್ಲಿರುವ ಯಶ್ ತಮ್ಮ ಕುಟುಂಬದೊಂದಿಗೆ ಜಾಲಿಯಾಗಿ ಸುತ್ತಾಡುತ್ತಿದ್ದಾರೆ. ಇತ್ತೀಚಿಗಷ್ಟೆ ಗೋವಾದಲ್ಲಿ ತಮ್ಮ ಕುಟುಂಬದೊಂದಿಗೆ ಸಖತ್ ಎಂಜಾಯ್ ಮಾಡಿದ್ದರು.

ನಟ ಯಶ್ ಸಿನೆಮಾಗಳಿಗೆ ಎಷ್ಟರ ಮಟ್ಟಿಗೆ ಪ್ರಾಮುಖ್ಯತೆ ಕೊಡುತ್ತಾರೋ ಅಷ್ಟೇ ತಮ್ಮ ಕುಟುಂಬಕ್ಕೂ ಸಹ ನೀಡುತ್ತಾರೆ. ಸಮಯ ಸಿಕ್ಕರೇ ಸಾಕು ಕುಟುಂಬದೊಂದಿಗೆ ಸಂತಸವಾಗಿ ಕಳೆಯಲು ಇಷ್ಟಪಡುತ್ತಾರೆ. ಇತ್ತೀಚಿಗಷ್ಟೆ ಗೋವಾ ಟೂರ್‍ ಕೈಗೊಂಡಿದ್ದ ಯಶ್ ಕುಟುಂಬ ಇದೀಗ ಪಕ್ಷಿಧಾಮಕ್ಕೆ ಭೇಟಿ ನೀಡಿದ್ದಾರೆ. ಇತ್ತೀಚಿಗಷ್ಟೆ ಕನಕಪುರ ಸಮೀಪದ ಪಕ್ಷಿಧಾಮವೊಂದಕ್ಕೆ ಭೇಟಿ ನೀಡಿದ ಯಶ್, ರಾಧಿಕಾ ಹಾಗೂ ಅವರ ಮಕ್ಕಳಾದ ಐರಾ ಹಾಗೂ ಯಥರ್ವ್ ಪಕ್ಷಿಗಳೊಂದಿಗೆ ಆಟವಾಡಿದ್ದಾರೆ. ಪಕ್ಷಿದಾಮದಲ್ಲಿದ್ದ ಗಿಣಿಗಳೊಂದಿಗೆ ಆಟವಾಡಿಕೊಂಡಿದ್ದಾರೆ. ಬಣ್ಣದ ಗಿಣಿಗಳನ್ನು ಮೈ ಮೇಲೆ ಬಿಟ್ಟುಕೊಂಡು ಸಖತ್ ಎಂಜಾಯ್ ಮಾಡಿದ್ದಾರೆ. ಮಕ್ಕಳೊಂದಿಗೆ ಯಶ್ ಹಾಗೂ ರಾಧಿಕಾ ಸಹ ಮಕ್ಕಳಂತೆ ಆಟವಾಡಿದ್ದಾರೆ. ಸದ್ಯ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ.

ಇನ್ನೂ ನಟ ಯಶ್ ಕೆಜಿಎಫ್-2 ಭರ್ಜರಿಯಾಗಿ ಗೆಲುವು ತಂದುಕೊಟ್ಟಿದೆ. ಬಾಕ್ಸ್ ಆಫೀಸ್ ನಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡಿದೆ. ಕೆಲವೊಂದು ಥಿಯೇಟರ್‍ ಗಳಲ್ಲಿ ಇನ್ನೂ ಕೆಜಿಎಫ್ ನ ಅಬ್ಬರ ಕಡಿಮೆಯಾಗಿಲ್ಲ ಎನ್ನಲಾಗಿದೆ. ಕೆಜಿಎಫ್-2 ಸಿನೆಮಾ ದೇಶದ ಬಹುತೇಕ ಎಲ್ಲಾ ಸಿನೆಮಾಗಳ ರೆಕಾರ್ಡ್‌ಗಳನ್ನು ಬ್ರೇಕ್ ಮಾಡಿದೆ. ಇಡೀ ವಿಶ್ವವೇ ಕನ್ನಡ ಸಿನಿರಂಗದತ್ತ ತಿರುಗಿ ನೋಡುವಂತೆ ಮಾಡಿದ ಹೆಮ್ಮೆ ಕೆಜಿಎಫ್-2 ಗೆ ಸಲ್ಲುತ್ತದೆ. ಸದ್ಯ ಎಲ್ಲೆಡೆ ಕೆಜಿಎಫ್-2 ಸಿನೆಮಾದ ಕಲೆಕ್ಷನ್ ಸದ್ದು ಮಾಡುತ್ತಿದೆ. ಇನ್ನೂ ಕೆಜಿಎಫ್-2 ಸಿನೆಮಾ ಮೂಲಕ ದೊಡ್ಡ ಮಟ್ಟದ ಸಕ್ಸಸ್ ಕಂಡುಕೊಂಡ ಯಶ್ ಗೆ ಇದೀಗ ಅಂತಹುದೇ ಸಿನೆಮಾ ಕಥೆ ಬೇಕಾಗಿದೆ. ದೊಡ್ಡ ಸಿನೆಮಾವನ್ನೇ ಮಾಡಬೇಕಾದ ಜವಾಬ್ದಾರಿ ಇದೆ. ಈ ಹಿನ್ನೆಲೆಯಲ್ಲಿ ಯಶ್ ಗಾಗಿ ಒಳ್ಳೆಯ ಕಥೆಯನ್ನು ಸಿದ್ದ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ.

ಯಶ್ ರವರು ನಿರ್ದೇಶಕ ನರ್ತನ್ ಜೊತೆ ಸಿನೆಮಾ ಮಾಡಲಿದ್ದಾರೆ. ಈಗಾಗಲೇ ನರ್ತನ್ ಕಥೆಯನ್ನು ಸಹ ಫೈನಲ್ ಮಾಡಲಾಗಿದೆ ಎನ್ನಲಾಗುತ್ತಿದೆ. ಈಗಾಗಲೇ ಈ ಸಿನೆಮಾವನ್ನು ಸಹ ಮೂರು ದೊಡ್ಡ ನಿರ್ಮಾಣ ಸಂಸ್ಥೆಗಳು ನಿರ್ಮಾಣ ಮಾಡಲು ಮುಂದೆ ಬಂದಿದೆ ಎನ್ನಲಾಗುತ್ತಿದ್ದು, ಶೀಘ್ರದಲ್ಲೇ ಈ ಸಿನೆಮಾದ ಕುರಿತು ಅಧಿಕೃತವಾಗಿ ಘೋಷಣೆಗಳು ಬರಲಿದೆ. ಇನ್ನೂ ನಟಿ ರಾಧಿಕಾ ಪಂಡಿತ್ ಸಹ ಯಶ್ ಸಿನೆಮಾಗಳಲ್ಲಿ ಬ್ಯುಸಿಯಾಗಿರುವ ಸಮಯದಲ್ಲಿ ಕುಟುಂಬವನ್ನು ನಿರ್ವಹಣೆ ಮಾಡುವ ಜವಾಬ್ದಾರಿಯನ್ನು ಹೊತ್ತುಕೊಳ್ಳುತ್ತಾರೆ.

Previous articleನಯನ್ ವಿಗ್ನೇಶ್ ಮದುವೆ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್….!
Next articleರಜನಿಕಾಂತ್ ಹಾಗೂ ಶಿವಣ್ಣ ಕಾಂಬಿನೇಷನ್ ಸಿನೆಮಾದ ಬಿಗ್ ಅಪ್ಡೇಟ್…!