News

(video)ಯಜಮಾನ ಚಿತ್ರದ HD ಟೈಟಲ್ ವಿಡಿಯೋ ಸಾಂಗ್ ಬಿಡುಗಡೆ ಆಗಿ ವೈರಲ್ ಆಗಿದೆ! ವಿಡಿಯೋ ನೋಡಿ

yajamana-title

ನಮ್ಮ ದರ್ಶನ್ ಅವರ ಯಜಮಾನ ಚಿತ್ರ ಎರಡು ತಿಂಗಳ ಹಿಂದೆ ಬಿಡುಗಡೆ ಆಗಿ ಈಗ ಕೂಡ ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಇದಲ್ಲದೆ ಮೊನ್ನೆ ಅಷ್ಟೇ ಯಜಮಾನ ಚಿತ್ರವನ್ನು ಅಮೆಜಾನ್ ಪ್ರೈಮ್ ಅವರು ಖರೀದಿ ಮಾಡಿದ್ದಾರೆ. ನೆನ್ನೆ ಯಜಮಾನ ಚಿತ್ರದ ಬಹಳ ಫೇಮಸ್ ಹಾಡಾದ ಯಜಮಾನ ಚಿತ್ರದ ಟೈಟಲ್ ಹಾಡು ಬಿಡುಗಡೆ ಆಗಿ ಸೋಶಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆಗಿದೆ. ಈ ಹಾಡನ್ನು ನಮ್ಮ ಕನ್ನಡದ ಹೆಮ್ಮೆಯ ಗಾಯಕರಾದ ವಿಜಯ್ ಪ್ರಕಾಶ್ ಅವರು ಅದ್ಭುತವಾಗಿ ಹಾಡಿದ್ದಾರೆ! ಸದ್ಯ ಈ ವಿಡಿಯೋ ಸಕತ್ ವೈರಲ್ ಆಗಿದ್ದು, ಯೌಟ್ಯೂಬ್ ನಲ್ಲಿ ಬರೋಬ್ಬರಿ 4 ಲಕ್ಷ ಜನ ನೋಡಿದ್ದಾರೆ! ಯಜಮಾನ ಚಿತ್ರ HD ಟೈಟಲ್ ಸಾಂಗ್ ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹು ನಿರೀಕ್ಷೆಯ ಕನ್ನಡ ಚಿತ್ರವಾದ ಯಜಮಾನ ರಾಜ್ಯಾದ್ಯಂತ ಬಿಡುಗಡೆ ಆಗಿ ಎಲ್ಲೆಡೆ ಸಕಕ್ಟ್ ಸೌಂಡ್ ಮಾಡುತ್ತಿದೆ. ಯಜಮಾನ ಚಿತ್ರವನ್ನು ಕನ್ನಡಿಗರು ತುಂಬು ಹೃದಯದಿಂದ ಒಪ್ಪಿಕೊಂಡಿದ್ದಾರೆ. ಯಜಮಾನ ಚಿತ್ರದಲ್ಲಿ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜೊತೆ ಕಿರಿಕ್ ಪಾರ್ಟಿ ಖ್ಯಾತಿಯ ರಶ್ಮಿಕಾ ಮಂದಣ್ಣ, ತಾನ್ಯಾ ಹೋಪ್, ಟಗರು ಖ್ಯಾತಿಯ ಡಾಲಿ ಧನಂಜಯ್, ಆರ್ಮುಗಂ ರವಿ ಶಂಕರ್, ಠಾಕೂರ್ ಅನೂಪ್ ಸಿಂಗ್, ದೇವರಾಜ್, ಸಾಧು ಕೋಕಿಲ ಅವರು ನಟಿಸಿದ್ದಾರೆ! ಇಂದು ಇಡೀ ಕರ್ನಾಟಕದಲ್ಲಿ ಸುಮಾರು 450 ಕ್ಕೂ ಹೆಚ್ಚು ಚಿತ್ರ ಮಂದಿರ ಗಳಲ್ಲಿ ಯಜಮಾನ ಬಿಡುಗಡೆ ಆಗಿದೆ. ಇಂದು ಮುಂಜಾನೆ ಸುಮಾರು 7 ಘಂಟೆ ಇಂದಾನೆ ಯಜಮಾನನ ಶೋಗಳು ಶುರು ಆಗಿದ್ದವು.
ಯಜಮಾನ ಚಿತ್ರದಲ್ಲಿ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ನಟನೆಯ ಬಗ್ಗೆ ದೂಸರಾ ಮಾತಿಲ್ಲ! ದರ್ಶನ್ ಅವರು ಬಹಳ ಅಚ್ಚು ಕಟ್ಟಾಗಿ ನಟನೆ ಮಾಡಿದ್ದಾರೆ! ಪ್ರತಿಯೊಂದು ಫ್ರೆಮ್ ನಲ್ಲಿ ಕೂಡ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಅದ್ಭುತವಾಗಿ ಕಾಣಿಸುತ್ತಾರೆ. ಯಜಮಾನ ಚಿತ್ರದಲ್ಲಿ ದರ್ಶನ್ ಅವರ ಡೈಲಾಗ್ ಗಳು ಕೂಡ ಪಾತ್ರಕ್ಕೆ ತಕ್ಕಹಾಗೆ ಇದೆ, ಎಲ್ಲೂ ಕೂಡ ಅತಿರೇಕ ಅನಿಸುವುದಿಲ್ಲ! ಚಿತ್ರದ ಶುರುವಿನಿಂದ ಕೊನೆಯವರೆಗೆ ದರ್ಶನ್ ಅವರ ಮನೋಜ್ಞ ನಟನೆಯನ್ನು ಜನರು ಸಕತ್ ಎಂಜಾಯ್ ಮಾಡುತ್ತಾರೆ. ಈ ಚಿತ್ರದಲ್ಲಿ ಮತ್ತೊಂದು ವಿಶೇಷ ಎಂದರೆ ಅದು ದರ್ಶನ್ ಅವರ ಫೈಟ್ ಗಳು! ಒಂದೊಂದು ಫೈಟ್ ಕೂಡ ಅದ್ಭುತ ವಾಗಿ ಬಹಳ ರಿಯಲಿಸ್ಟಿಕ್ ಆಗಿ ಮೂಡಿ ಬಂದಿದೆ.
ಇನ್ನೂ ಯಜಮಾನ ಚಿತ್ರದಲ್ಲಿ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಇಬ್ಬರು ನಾಯಕಿಯರು. ಒಬ್ಬರು ಕಿರಿಕ್ ಪಾರ್ಟಿ ಖ್ಯಾತಿಯ ರಶ್ಮಿಕಾ ಮಂದಣ್ಣ! ನಟಿ ರಶ್ಮಿಕಾ ಮಂದಣ್ಣ ಅವರು ಒಂದು ಒಳ್ಳೆಯ ಪರ್ಫಾರ್ಮೆನ್ಸ್ ಮಾಡಿದ್ದಾರೆ. ದರ್ಶನ್ ಅವರ ಮತ್ತು ರಶ್ಮಿಕಾ ಮಂದಣ್ಣ ಅವರ ಕೆಮಿಸ್ಟ್ರಿ ಬಹಳ ಅದ್ಭುತವಾಗಿ ವರ್ಕೌಟ್ ಆಗಿದೆ ಆಗಿ ಇಡೀ ಚಿತ್ರದಲ್ಲಿ ಇವರಿಬ್ಬರ ಜೋಡಿಯನ್ನು ನೋಡಿ ಎಂಜಾಯ್ ಮಾಡಬಹುದು. ಇನ್ನೊಂದೆಡೆ ನಟಿ ತಾನ್ಯಾ ಹೋಪ್ ಅವರು ಬಹಳ ಹೊತ್ತು ಸ್ಕ್ರೀನ್ ನಲ್ಲಿ ಕಾಣಿಸಿಕೊಲ್ಲುವಿದಿಲ್ಲವಾದರೂ ತನಗೆ ಕೊಟ್ಟ ಪಾತ್ರವನ್ನು ಅಚ್ಚು ಕಟ್ಟಾಗಿ ಮಾಡಿದ್ದಾರೆ.
ಯಜಮಾನ ಚಿತ್ರದಲ್ಲಿ ದರ್ಶನ್ ನಂತರ ಮತ್ತೊಂದು ಬಹಳ ಮುಖ್ಯವಾದ ಪಾತ್ರ ಎಂದರೆ ಅದು ಮಿಠಾಯಿ ಸೂರಿ! ನಮ್ಮ ಡಾಲಿ ಧನಂಜಯ್ ಅವರು ಯಜಮಾನ ಚಿತ್ರದಲ್ಲಿ ಮಿಠಾಯಿ ಸೂರಿ ಆಗಿ ದರ್ಶನ್ ಅವರಿಗೆ ಚಿತ್ರದಲ್ಲಿ ಒಳ್ಳೆಯ ಪೈಪೋಟಿ ನೀಡಿದ್ದಾರೆ! ಧನಂಜಯ್ ಅವರ ಅದ್ಭುತವಾಗಿ ನಟಿಸಿದ್ದಾರೆ, ಡಾಲಿ ಅವರ ನಟನೆಗೆ ಈ ಭಾರಿ ಅವಾರ್ಡ್ ಫಿಕ್ಸ್ ಎಂದು ಬಹಳ ಜನ ಮಾತಾಡಿಕೊಳ್ಳುತ್ತಿದ್ದಾರೆ. ಹಾಗು ಚಿತ್ರದಲ್ಲಿ ಆರ್ಮುಗಂ ರವಿ ಶಂಕರ್ ಅವರು ವಿಲನ್ ಪಾತ್ರ ಮಾಡಿದ್ದು, ತೆರೆಯ ಮೇಲೆ ಆರ್ಮುಗಂ ಅನ್ನು ನೀವು ಮತ್ತೆ ಕಾಣಬಹುದು! ಇದಲ್ಲದೆ ಚಿತ್ರದಲ್ಲಿ ನಮ್ಮ ಸಾಧು ಕೋಕಿಲ ಹಾಗು ಶಿವರಾಜ್ KR ಪೇಟೆ ಅವರ ಹಾಸ್ಯ ನಿಮಗೆ ಸಕತ್ ಮಜಾ ಕೊಡುವುದು ಗ್ಯಾರಂಟೀ! ಯಜಮಾನ ಚಿತ್ರವನ್ನು ಫೋನ್ ಕುಮಾರನ್ ಹಾಗು V ಹರಿಕೃಷ್ಣ ಅವರು ನಿರ್ದೇಶನ ಮಾಡಿದ್ದಾರೆ ಹಾಗು ಈ ಚಿತ್ರದ ನಿರ್ಮಾಣದ ಜವಾಬ್ದಾರಿಯನ್ನು B ಸುರೇಶ ಹಾಗು ಶೈಲಜಾ ನಾಗ್ ಅವರು ನಿರ್ವಹಿಸಿದ್ದಾರೆ. ಯಜಮಾನ ಚಿತ್ರಕ್ಕೆ V ಹರಿಕೃಷ್ಣ ಅವರು ಸಂಗೀತ ನಿರ್ದೇಶನವನ್ನು ಮಾಡಿದ್ದಾರೆ! ಈಗಾಗಲೇ ಯಜಮಾನ ಚಿತ್ರದ ಎಲ್ಲಾ ಹಾಡುಗಳು ಸೂಪರ್ ಹಿಟ್ ಆಗಿವೆ ಹಾಗು ಅದೆಷ್ಟೋ ಲಕ್ಷ ಜನ ಯೌಟ್ಯೂಬ್ ನಲ್ಲಿ ಯಜಮಾನ ಚಿತ್ರದ ಹಾಡುಗಳನ್ನು ನೋಡಿದ್ದಾರೆ. ಬಿಡುಗಡೆ ಆದ ಎಲ್ಲಾ ಹಾಡುಗಳು ಕೂಡ ಯೌಟ್ಯೂಬ್ ನಲ್ಲಿ ಟ್ರೆಂಡಿಂಗ್ ಆಗಿತ್ತು ಹಾಗು ಸೋಶಿಯಲ್ ಮೀಡಿಯಾ ದಲ್ಲಿ ಸಕತ್ ವೈರಲ್ ಆಗಿತ್ತು. ಒಟ್ಟಿನಲ್ಲಿ ಯಜಮಾನ ಒಂದು ಪಕ್ಕಾ ಫ್ಯಾಮಿಲಿ entertainer ಚಿತ್ರ! ನೀವು ಕುಟುಂಬ ಸಮೇತರಾಗಿ ಚಿತ್ರ ಮಂದಿರಕ್ಕೆ ಹೋಗಿ ಸಿನೆಮಾವನ್ನು ಆರಾಮಾಗಿ ಎಂಜಾಯ್ ಮಾಡಬಹುದು! ಈ ವರ್ಷದ ಸೂಪರ್ ಹಿಟ್ ಚಿತ್ರದ ಸಾಲಿಗೆ ಸೇರಲಿದೆ ದರ್ಶನ್ ಅವರ ಯಜಮಾನ!

Trending

To Top