News

ಯಜಮಾನ ಹಾಡು ಮತ್ತು ಪೈಲ್ವಾನ್ ಟೀಸರ್, ಗೆದಿದ್ದು ಯಾರು ಗೊತ್ತ, ದರ್ಶನ್ ಗೇದ್ರಾ – ಸುದೀಪ್ ಗೇದ್ರಾ?

pailwan-yajamana

ನಿಮಗೆಲ್ಲ ಗೊತ್ತಿರೋ ಹಾಗೆ ನೆನ್ನೆ ಕನ್ನಡಿಗರಿಗೆ ಡಬಲ್ ಧಮಾಕ ಎಂದೇ ಹೇಳಬಹುದು. ಒಂದು ಕಡೆ ಸಂಕ್ರಾಂತಿ ಹಬ್ಬ ಮತ್ತೊಂದು ಕಡೆ ನಮ್ಮ ದರ್ಶನ್ ಹಾಗು ಸುದೀಪ್ ಅವರ ಯಜಮಾನ ಹಾಗು ಪೈಲ್ವಾನ್ ಚಿತ್ರಗಳ ಹಾಡು ಹಾಗು ಟೀಸರ್ ಸಂಭ್ರಮ. ನೆನ್ನೆ ಮುಂಜಾನೆ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಯಜಮಾನ ಚಿತ್ರದ ಮೊದಲ ಹಾಡು ಶಿವನಂದಿ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆ ಆಗಿತ್ತು. ಇದಲ್ಲದೆ ನೆನ್ನೆ ಸಂಜೆ ನಮ್ಮ ಅಭಿಮಾನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಪೈಲ್ವಾನ್ ಚಿತ್ರದ ಟೀಸರ್ ಕೂಡ ಬಿಡುಗಡೆ ಆಗಿತ್ತು. ಈ ಎರಡು ವಿಡಿಯೋ ಗಳು ಯೌಟ್ಯೂಬ್ ನಲ್ಲಿ ಬಹಳ ಟ್ರೆಂಡ್ ಆಗುತ್ತಿವೆ ಹಾಗು ಸೋಶಿಯಲ್ ಮೀಡಿಯಾ ಗಳಲ್ಲಿ ಸಕತ್ ವೈರಲ್ ಆಗಿವೆ. ಅಷ್ಟಕ್ಕೂ ಗೆದ್ದಿದ್ದು ಯಾರು ಗೊತ್ತ? ದರ್ಶನ್ ಅವರ ಯಜಮಾನ ಚಿತ್ರದ ಹಾಡಾ? ಅಥವಾ ಕಿಚ್ಚ ಸುದೀಪ್ ಅವರ ಪೈಲ್ವಾನ್ ಚಿತ್ರದ ಟೀಸರಾ? ಇಲ್ಲಿದೆ ಕಂಪ್ಲೀಟ್ ಮಾಹಿತಿ
ನೆನ್ನೆ ಬಿಡುಗಡೆ ಆದ ಯಜಮಾನ ಚಿತ್ರದ ಶಿವನಂದಿ ಹಾಡನ್ನು ಕೇವಲ 3 ಘಂಟೆಗಳಲ್ಲಿ ಬರೋಬ್ಬರಿ 10 ಲಕ್ಷ ಜನ ನೋಡಿದ್ದಾರೆ. ಇದಲ್ಲದೆ ಯಜಮಾನ ಚಿತ್ರದ ಹಾಡಿಗೆ ಬರೋಬ್ಬರಿ 2 ಲಕ್ಷ ಜನ ಈ ವಿಡಿಯೋವನ್ನು ಯೌಟ್ಯೂಬ್ ನಲ್ಲಿ ಲೈಕ್ ಮಾಡಿದ್ದಾರೆ. ಮತ್ತೊಂದೆಡೆ ಕಿಚ್ಚ ಸುದೀಪ್ ಅವರ ಪೈಲ್ವಾನ್ ಚಿತ್ರದ ಟೀಸರ್ ಗೆ ಕೇವಲ 3:15 min (3 ಘಂಟೆ 15 ನಿಮಿಷ) ದಲ್ಲಿ ಬರೋಬ್ಬರಿ 10 ಲಕ್ಷ ಜನ ಈ ಟೀಸರನ್ನು ಯೌಟ್ಯೂಬ್ ನಲ್ಲಿ ನೋಡಿದ್ದಾರೆ. ಹಾಗು ಕಿಚ್ಚ ಸುದೀಪ್ ಅವರ ಪೈಲ್ವಾನ್ ಚಿತ್ರದ ಟೇಸರನ್ನು ಯೌಟ್ಯೂಬ್ ನಲ್ಲಿ ಬರೋಬ್ಬರಿ 1 ಲಕ್ಷ ಜನ ಲೈಕ್ ಮಾಡಿದ್ದಾರೆ.
ಇನ್ನೂ ಕಾಮೆಂಟ್ ಗಾಲ ವಿಷ್ಯಕ್ಕೆ ಬಂದರೆ, ದರ್ಶನ್ ಅವರ ಯಜಮಾನ ಚಿತ್ರದ ಹಾಡಿಗೆ ಇಲ್ಲಿಯ ತನಕ ಸುಮಾರು 27000 ಕ್ಕೂ ಹೆಚ್ಚು ಜನ ಕಾಮೆಂಟ್ ಮಾಡಿದ್ದಾರೆ. ಇನ್ನೊಂದೆಡೆ ನಮ್ಮ ಸುದೀಪ್ ಅವರ ಪೈಲ್ವಾನ್ ಚಿತ್ರದ ಟೀಸರ್ ಗೆ ಸುಮಾರು 11000 ಜನ ಕಾಮೆಂಟ್ ಮಾಡಿದ್ದಾರೆ. ಇದಲ್ಲದೆ ಯಜಮಾನ ಕುರಿತು ಸೋಶಿಯಲ್ ಮೀಡಿಯಾಗಳಲ್ಲಿ ನೆನ್ನೆ ಯಿಂದ ಸುಮಾರು 9000 ಕ್ಕೂ ಹೆಚ್ಚು ಪೋಸ್ಟ್ ಗಳನ್ನೂ ಅವರ ಅಭಿಮಾನಿಗಳು ಫೇಸ್ಬುಕ್, ಟ್ವಿಟ್ಟರ್ ಹಾಗು ಇನ್ಸ್ಟಾಗ್ರಾಮ್ ನಲ್ಲಿ ಮಾಡಿದ್ದಾರೆ. ಇತ್ತ ನಮ್ಮ ಸುದೀಪ್ ಅವರ ಅಭಿಮಾನಿಗಳು ಸುಮಾರು 7000 ಕ್ಕೂ ಹೆಚ್ಚು ಪೋಸ್ಟ್ ಗಳನ್ನೂ ಸೋಶಿಯಲ್ ಮೀಡಿಯಾ ಗಳಲ್ಲಿ ಮಾಡಿದ್ದಾರೆ.
ಒಟ್ಟಿನಲ್ಲಿ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಚಿತ್ರಗಳು ತಮ್ಮ ತಮ್ಮಲ್ಲೇ ಪೈಪೋಟಿ ನಡೆಸದೆ ಬೇರೆ ಭಾಷೆಯ ಚಿತ್ರಗಳಿಗೆ ಭರ್ಜರಿ ಪೈಪೋಟಿ ಕೊಟ್ಟಿದ್ದಾರೆ. ಸದ್ಯ ತೆಲುಗು ಹಾಗು ತಮಿಳು ಪ್ರೇಕ್ಷರಕು ಕೂಡ ಕನ್ನಡ ನಟರ ಈ ಸಕತ್ ರೆಕಾರ್ಡ್ ಗಳನ್ನೂ ನೋಡಿ ಒಂದು ಕ್ಷಣ ಬೆಚ್ಚಿ ಬಿದಿದ್ದಾರೆ. ಇದು ನಮ್ಮ ಕನ್ನಡಿಗರ ಗೆಲುವು, ಕನ್ನಡ ಚಿತ್ರ ರಂಗದ ಗೆಲುವು ಎಂದೇ ಹೇಳಬಹುದು. ಏನೇ ಆಗಲಿ ನಮ್ಮ ಕನ್ನಡ ಚಿತ್ರಗಳು ಬೆಳೆಯಬೇಕು, ಇತ್ತೀಚಿಗೆ ಹೇಗೆ ಕೆಜಿಫ್ ಚಿತ್ರ ದಿಂದ ಇಡೀ ಭಾರತವೇ ನಮ್ಮ ಕಡೆ ತಿರುಗಿ ನೋಡವಂತೆ ಆಯಿತೋ ಅದೇ ರೀತಿ ಈ ಚಿತ್ರ ಗಳಿಂದ ಕೂಡ ಇನ್ನೂ ದೊಡ್ಡ ಮಟ್ಟಕ್ಕೆ ಹೋಗಲಿ ಎಂದು ನಮ್ಮ ಅನಿಸಿಕೆ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ ಹಾಗು ಕನ್ನಡ ರಿಯಾಲಿಟಿ ಶೋಗಳ ಬಗ್ಗೆ, ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿರಿ.

Trending

To Top