News

ಯಜಮಾನ ಆರ್ಭಟ ಶುರು – ಚಿತ್ರವನ್ನು ಯಾಕೆ ನೋಡಬೇಕು ಗೊತ್ತ? ಇದನ್ನು ನೋಡಿ ಶೇರ್ ಮಾಡಿರಿ

yajamana-review

ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಯಜಮಾನ ಚಿತ್ರ ಇಂದು ಎಲ್ಲೆಡೆ ಬಿಡುಗಡೆ ಆಗಿದೆ! ಯಜಮಾನ ಚಿತ್ರದಲ್ಲಿ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್, ರಶ್ಮಿಕಾ ಮಂದಣ್ಣ, ತಾನ್ಯಾ ಹೋಪ್ ಹಾಗು ಡಾಲಿ ಧನಂಜಯ್ ಅವರು ನಟಿಸಿದ್ದಾರೆ! ಇತ್ತೀಚಿಗೆ ಯಜಮಾನ ಚಿತ್ರದ ಟ್ರೇಲರ್ ಬಿಡುಗಡೆ ಆಗಿ ಸೋಶಿಯಲ್ ಮೀಡಿಯಾದಲ್ಲಿ ಸಕತ್ ಸದ್ದು ಮಾಡಿತ್ತು. ಇದಲ್ಲದೆ ಈಗಾಗಲೇ ಯಜಮಾನ ಚಿತ್ರದ ಎಲ್ಲಾ ಹಾಡುಗಳು ಸೂಪರ್ ಹಿಟ್ ಆಗಿವೆ! ಕನ್ನಡಿಗರು ಯಾಕೆ ಯಜಮಾನ ಚಿತ್ರವನ್ನು ನೋಡಬೇಕು! ಇಲ್ಲಿದೆ 10 ಕಾರಣಗಳು!
ಕಾರಣ 01 – ಯಜಮಾನ ಚಿತ್ರ IMDB (ಅಂದರೆ ಇಡೀ ಭಾರತದ ಚಿತ್ರಗಳ ಒಂದು ಜಾಲತಾಣ) ಸುಮಾರು ಒಂದು ವಾರದಿಂದ ನಂಬರ್ 1 ಸ್ಥಾನದಲ್ಲಿದೆ. ಇದರ ಅರ್ತ, ನಮ್ಮ ಭಾರತದಲ್ಲಿ ಅತೀ ಹೆಚ್ಚು ಜನ ಯಜಮಾನ ಚಿತ್ರವನ್ನು ನೋಡಬೇಕು ಎಂದು ಬಯಸಿದ್ದಾರೆ! ಇದು ಕನ್ನಡಿಗರಿಗೆ ನಿಜಕ್ಕೂ ಹೆಮ್ಮೆ ಪಡುವೆ ವಿಷ್ಯ! ಕಾರಣ 02 – ಯಜಮಾನ ಚಿತ್ರದ ಟ್ರೇಲರ್ ಬರೋಬ್ಬರಿ ಒಂದು ವಾರಗಳ ಕಾಲ ಯೌಟ್ಯೂಬ್ ನಲ್ಲಿ ಟ್ರೆಂಡಿಂಗ್ ನಲ್ಲಿ ಇತ್ತು. ಈ ಹಿಂದೆ ಕೆಜಿಫ್ ಚಿತ್ರ ಈ ದಾಖಲೆಯನ್ನು ಮಾಡಿತ್ತು, ಯಜಮಾನ ಚಿತ್ರದ ಟ್ರೇಲರ್ ಬಿಡುಗಡೆ ಆಗಿ ಕನ್ನಡ ಚಿತ್ರ ರಂಗದ ಎಲ್ಲಾ ಯೌಟ್ಯೂಬ್ ರೆಕಾರ್ಡ್ ಗಳನ್ನೂ ಬ್ರೇಕ್ ಮಾಡಿದೆ! ಕಾರಣ 03 – ಯಜಮಾನ ಚಿತ್ರದ ಮೊದಲ ಹಾಡು “ಶಿವನಂದಿ” ಹಾಡು ಬಿಡುಗಡೆ ಆಗಿ ಭರ್ಜರಿ ಸದ್ದು ಮಾಡಿತ್ತು! ಈ ಹಿಂದೆ ಕಿರಿಕ್ ಪಾರ್ಟಿ ಚಿತ್ರದ ಬೆಳಗೆದ್ದು ಯಾರ ಮುಖವ ಹಾಡಿಗೆ ಬರೋಬ್ಬರಿ 245 ಸಾವಿರ ಜನ ಲೈಕ್ ಮಾಡಿದ್ದರು, ಈಗ ಯಜಮಾನ ಚಿತ್ರದ ಶಿವನಂದಿ ಹಾಡಿಗೆ ಬರೋಬ್ಬರಿ 250 ಸಾವಿರ ಜನ ಲೈಕ್ ಮಾಡಿ ಕನ್ನಡದ ಎಲ್ಲಾ ರೆಕಾರ್ಡ್ ಗಳನ್ನೂ ಬ್ರೇಕ್ ಮಾಡಿದೆ.
ಕಾರಣ 04 – ಇದೇ ಮೊದಲ ಬಾರಿಗೆ ಕನ್ನಡದ ಒಬ್ಬ ಸ್ಟಾರ್ ನಟ , ತನ್ನ ಚಿತ್ರದ ಡೈಲಾಗ್ writer ಅನ್ನು ಕರೆದು , ದಯವಿಟ್ಟು ಕಾಂಟ್ರೊವರ್ಸಿ ಮಾಡುವ ತರ, ಬೇರೆ ನಟರಿಗೆ ನೋವಾಗುವ ತರ, ಬೇರೆ ಅವರಿಗೆ ಟಾಂಗ್ ಕೊಡುವ ತರ ಡೈಲಾಗ್ ಬರೀಬೇಡಿ ಎಂದು ಖಡಕ್ ಆಗಿ ವಾರ್ನ್ ಮಾಡಿರುವುದು! ಇಂತಹ ಅದ್ಭುತ ಹಾಗು ಜವಾಬ್ದಾರಿಯ ಕೆಲಸ ಮಾಡಿದಕ್ಕೆ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಒಂದು ಸಲಾಂ! ಕಾರಣ 05 – ಯಜಮಾನ ಚಿತ್ರದಲ್ಲಿ ಕೆಲಸ ಮಾಡಿರುವ ಪ್ರತಿಯೊಬ್ಬರೂ ಕನ್ನಡಿಗರೇ! ಹೌದು, ನಿಮಗೆಲ್ಲ ಗೊತ್ತಿರೋ ಹಾಗೆ ನಮ್ಮ ಕನ್ನಡ ಚಿತ್ರ ರಂಗದಲ್ಲಿ ನಮ್ಮ ನಿರ್ಮಾಪಕರು, ಹೊರ ರಾಜ್ಯಗಳಿಂದ ಟೆಕ್ನಿಷಿಯನ್ಸ್ ಕರೆಸುತ್ತಾರೆ, ಅವರಿಗೆ ಒಳ್ಳೆಯ ಸಂಬಳ ಕೊಟ್ಟು ನಮ್ಮವರಿಗೆ ಅವಕಾಶ ಕೊಡುವುದಿಲ್ಲ! ಆದರೆ ಅಚ್ಚರಿ ಪಡುವಂತೆ ನಮ್ಮ ಯಜಮಾನ ಚಿತ್ರ ತಂಡದಲ್ಲಿ ಕೆಲಸ ಮಾಡಿರುವ ಪ್ರತಿಯೊಬ್ಬರೂ ಕನ್ನಡಿಗರೇ! ಇಂತಹ ಒಳ್ಳೆಯ ಕೆಲಸಕ್ಕೆ ನಿರ್ಮಾಪಕರಾದ ಶೈಲಜಾ ನಾಗ್ ಹಾಗು B ಸುರೇಶ ಅವರಿಗೆ ನಮ್ಮ ಕಡೆ ಇಂದ ಸಲಾಂ!
ಕಾರಣ 06 – ಯಜಮಾನ ಬಿಡುಗಡೆಗೆ ಕೇವಲ ಒಂದು ವಾರ ಮುಂಚೆನೇ ಬರೋಬ್ಬರಿ ಒಂದು ವಾರದ ಟಿಕೆಟ್ ಗಳು ಸೋಲ್ಡ್ ಔಟ್ ಆಗಿದೆ! ಇದೇ ಕಾರಣಕ್ಕಾಗಿ ಚಿರದ ವಿತರಕರು ಇನ್ನಷ್ಟು ಸ್ಕ್ರೀನ್ ಗಳನ್ನೂ ಹಾಕುತ್ತಿದ್ದಾರೆ ಎಂದು ತಿಳಿದು ಬಂದಿದೆ! ಕಾರಣ 07 – ಬಲ್ಲ ಮೂಲಗಳ ಪ್ರಕಾರ ಯಜಮಾನ ಚಿತ್ರದ ಆಡಿಯೋ ರೈಟ್ಸ್ ಹಾಗು ಸ್ಯಾಟೆಲೈಟ್ ರೈಟ್ಸ್ ರೆಕಾರ್ಡ್ ಬೆಳೆಗೆ ಮಾರಾಟವಾಗಿದೆ ಎಂದು ತಿಳಿದು ಬಂದಿದೆ! ಇದರ ಮೊತ್ತವನ್ನು ಚಿತ್ರತಂಡವರು ಇನ್ನು ಬಿಟ್ಟು ಕೊಟ್ಟಿಲ್ಲ! ಅತೀ ಶೀಘ್ರದಲ್ಲೇ ಇದು ತಿಳಿಯಲಿದೆ
ಕಾರಣ 08 – ಯಜಮಾನ ಚಿತ್ರದಲ್ಲಿ ನಮ್ಮ ಟಗರು ಖ್ಯಾತಿಯ ಡಾಲಿ ಧನಂಜಯ್ ಅವರು ದರ್ಶನ್ ಅವರಿಗೆ ಸರಿ ಸಾಟಿಯಾದ ಪಾತ್ರ ಒಂದನ್ನು ಮಾಡಿದ್ದಾರೆ! ದರ್ಶನ್ ಅವರ ಕೆರಿಯರ್ ನಲ್ಲಿ ಇಷ್ಟೊಂದು ಸರಿ ಸಾಟಿಯಾದ ವಿಲ್ಲನ್ ಯಾವ ಚಿತ್ರದಲ್ಲಿ ಕೂಡ ಇರಲಿಲ್ಲ! ಇದೇ ಮೊದಲ ಬಾರಿಗೆ ನಮ್ಮ ದರ್ಶನ್ ಅವರಿಗೆ ಠಕ್ಕರ್ ಕೊಡಲು ಒಂದು ಅದ್ಭುತ ಪಾತ್ರ (ಮಿಠಾಯಿ ಸೂರಿ) ಯಜಮಾನ ಚಿತ್ರದಲ್ಲಿದೆ! ಕಾರಣ 09 – ಈ ಚಿತ್ರದಲ್ಲಿ ದರ್ಶನ್ ಅವರಿಗೆ ಇಬ್ಬರು ಹೀರೋಯಿನ್ ಇದ್ದಾರೆ! ಒಬ್ಬರು ಕಿರಿಕ್ ಪಾರ್ಟಿ ಖ್ಯಾತಿಯ ರಶ್ಮಿಕಾ ಮಂದಣ್ಣ ಹಾಗು ಇನ್ನೋಂಬಾರು ತಾನ್ಯಾ ಹಾಪ್! ಇವರಿಬ್ಬರು ಬಹಳ ದೊಡ್ಡ ನಟಿಯರಾಗಿದ್ದು ಯಜಮಾನ ಚಿತ್ರದಲ್ಲಿ ಅದ್ಭುತವಾಗಿ perform ಮಾಡಿದ್ದಾರೆ ಎಂದು ತಿಳಿದು ಬಂದಿದೆ! ಕಾರಣ 10 – ಇದು ಒಂದು ಅಪ್ಪಟ ಕರುನಾಡ ಸೊಗಡಿನ, ಕನ್ನಡಿಗರ ಹೆಮ್ಮೆಯ ಚಿತ್ರ ಕಣ್ರೀ! ಪ್ರತಿಯೊಬ್ಬ ಕನ್ನಡಿಗರೂ ಕೂಡ ಇಂತಹ ಅದ್ಭುತ ಸಂದೇಶ ಇರುವ ಚಿತ್ರವನ್ನು ನೋಡಲೇಬೇಕು! ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಯಜಮಾನ ಚಿತ್ರ ತಂಡಕ್ಕೆ ನಮ್ಮ ಕಡೆ ಇಂದ ಅಲ್ ದಿ ಬೆಸ್ಟ್!

Trending

To Top