Film News

ಯಾರಾಗಲಿದ್ದಾರೆ ಸಲಾರ್ ಚಿತ್ರದಲ್ಲಿ ನಾಯಕಿ?

ಹೈದರಾಬಾದ್: ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಸಾರಥ್ಯದಲ್ಲಿ ಮೂಡಿಬರಲಿರುವ ಪ್ರಭಾಸ್ ನಾಯಕನಾಗಿ ಕಾಣಿಸಿಕೊಳ್ಳುವ ಸಲಾರ್ ಚಿತ್ರದಲ್ಲಿ ನಾಯಕಿ ಯಾರಾಗಲಿದ್ದಾರೆ ಎಂಬ ಪ್ರಶ್ನೆ ಚಿತ್ರದ ಟೈಟಲ್ ಘೋಷಣೆಯಾದಾಗಿನಿಂದ ಕೇಳಿಬರುತ್ತಿದೆ.

ಸಲಾರ್ ಚಿತ್ರ ಘೋಷಣೆಯಾದಾಗಿನಿಂದ ಚಲನಚಿತ್ರ ರಂಗದಲ್ಲಿ ದೊಡ್ಡ ಮಟ್ಟದಲ್ಲಿ ಹೈಪ್ ಸೃಷ್ಟಿಯಾಗಿದೆ. ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಚಿತ್ರಕ್ಕೂ ಮೀರುವಂತಹ ಚಿತ್ರ ಸಲಾರ್ ಆಗಲಿದೆ ಎಂಬೆಲ್ಲಾ ಚರ್ಚೆಗಳು ಸಹ ಆರಂಭವಾಗಿದೆ. ಇನ್ನೂ ಕೆಲವು ದಿನಗಳ ಹಿಂದೆಯಷ್ಟೆ ಹೈದರಾಬಾದ್ ನಲ್ಲಿ ಚಿತ್ರದ ಮೂಹೂರ್ತ ಕಾರ್ಯಕ್ರಮ ಸಹ ನಡೆದಿದೆ. ಇದೀಗ ಸಲಾರ್ ಚಿತ್ರದಲ್ಲಿ ನಾಯಕಿಯಾಗಿ ನಟಿಸಲಿರುವ ಬೆಡಗಿ ಯಾರು ಎಂಬ ಚರ್ಚೆ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ.

ಇನ್ನೂ ಸಲಾರ್ ಚಿತ್ರದಲ್ಲಿ ಪ್ರಭಾಸ್ ಜೊತೆ ನಟಿಸಲು ಬಾಲಿವುಡ್ ಕ್ವೀನ್ ಕತ್ರಿನಾ ಕೈಪ್ ರವರೊಂದಿಗೆ ಚಿತ್ರತಂಡ ಮಾತುಕತೆ ನಡೆಸಿದೆಯಂತೆ. ಈ ಸಂಬಂಧ ಕತ್ರಿನಾ ಕೈಫ್ ರೊಂದಿಗೆ ಒಂದು ಸುತ್ತಿನ ಮಾತುಕತೆ ಸಹ ಮುಗಿದಿದೆ. ಆದರೆ ಕತ್ರಿನಾ ಇನ್ನೂ ಒಪ್ಪಿಗೆ ನೀಡಿಲ್ಲವಾದರೂ ಚಿತ್ರದ ಕಥೆ ಕೇಳಿ ಥ್ರಿಲ್ ಆಗಿದ್ದಾರೆ ಎನ್ನಲಾಗಿದೆ. ಸುಮಾರು ಹದಿನೈದು ವರ್ಷಗಳ ಬಳಿಕ ಕತ್ರಿನಾ ತೆಲುಗು ಸಿನಿರಂಗಕ್ಕೆ ಬರಲಿದ್ದು, ಅಭಿಮಾನಿಗಳು ಸಹ ಖುಷ್ ಆಗಲಿದ್ದಾರೆ. ಟಾಲಿವುಡ್ ಸ್ಟಾರ್ ನಟ ನಂದಮೂರಿ ಬಾಲಕೃಷ್ಣ ಅಭಿನಯದ ಅಲ್ಲರಿ ಪಿಡುಗು ಚಿತ್ರದಲ್ಲಿ ಕೊನೆಯದಾಗಿ ಅಭಿನಯಿಸಿದ್ದರು.

ಮತ್ತೋಂದು ಇಂಟ್ರಸ್ಟೆಂಗ್ ವಿಚಾರವೆಂದರೇ ಬಾಲಿವುಡ್ ನಟಿ ದಿಶಾ ಪಟಾನಿ ಹೆಸರು ಸಹ ಸಲಾರ್ ಚಿತ್ರದಲ್ಲಿ ನಾಯಕಿಯಾಗುತ್ತಾರೆ ಎಂಬ ವಿಚಾರ ಬಲವಾಗಿ ಕೇಳಿಬರುತ್ತಿದೆ. ಆದರೆ ಈ ಕುರಿತು ಯಾವುದೇ ಅಧಿಕೃತ ಮಾಹಿತಿ ಚಿತ್ರತಂಡ ನೀಡಿಲ್ಲ. ಸದ್ಯ ಸಲಾರ್ ಚಿತ್ರದಲ್ಲಿ ನಾಯಕ ಪ್ರಭಾಸ್ ಬಿಟ್ಟರೇ ಉಳಿದ ಯಾವುದೇ ಕಲಾವಿದರ ವಿವರ ಫೈನಲ್ ಆಗಿಲ್ಲ ಎನ್ನಲಾಗುತ್ತಿದೆ.

Trending

To Top