Film News

ಸಲಾರ್ ಚಿತ್ರಕ್ಕೆ ಯಾರಾಗಲಿದ್ದಾರೆ ನಾಯಕಿ!

ಹೈದರಾಬಾದ್: ಪ್ರಶಾಂತ್ ನೀಲ್ ಹಾಗೂ ಪ್ರಭಾಸ್ ಕಾಂಬಿನೇಷನ್ ನಲ್ಲಿ ಹೊಂಬಾಳೆ ಫಿಲಂ ಬ್ಯಾನರ್ ನಡಿ ಮೂಡಿಬರಲಿರುವ ಸಲಾರ್ ಚಿತ್ರದ ನಾಯಕಿ ಯಾರಾಗಲಿದ್ದಾರೆ ಎಂಬ ಚರ್ಚೆ ಸಿನಿರಂಗದಲ್ಲಿ ನಡೆಯುತ್ತಿದೆ.

ಸಲಾರ್ ಸಿನೆಮಾದಲ್ಲಿ ಪ್ರಭಾಸ್ ಗೆ ಜೋಡಿಯಾಗಿ ನಟಿಸಲು ಪ್ರಸ್ತುತ ಇಬ್ಬರು ನಟಿಯರ ಹೆಸರುಗಳು ಕೇಳಿ ಬರುತ್ತಿವೆ. ಬಾಲಿವುಡ್ ನ ಖ್ಯಾತ ನಟಿ ದಿಶಾ ಪಟಾನಿ ಹಾಗೂ ನಟಿ ಸಾರಾ ಅಲಿ ಖಾನ್ ಹೆಸರುಗಳು ಪ್ರಬಲವಾಗಿ ಕೇಳಿ ಬರುತ್ತಿದೆಯಂತೆ. ಇನ್ನೂ ಈ ವಿಚಾರ ಕೇಳಿಬರುತ್ತಿದ್ದಂತೆ ಅಭಿಮಾನಿಗಳಲ್ಲೂ ಯಾರಾಗಲಿದ್ದಾರೆ ಸಲಾರ್ ನಾಯಕಿ ಎಂದು ಕುತೂಹಲ ಹೆಚ್ಚಿಸಿದೆ.

ಇನ್ನೂ ಬಾಲಿವುಡ್ ಖ್ಯಾತ ನಟಿ ದಿಶಾ ಪಟಾನಿ ಸಲಾರ್ ಚಿತ್ರದಲ್ಲಿ ನಾಯಕಿ ಆಯ್ಕೆಯಾಗಲಿದ್ದಾರೆ ಎನ್ನುವ ಮಾತುಗಳು ಹೆಚ್ಚಾಗಿ ಕೇಳಿಬರುತ್ತಿದೆ. ಜೊತೆಗೆ ಈಗಾಗಲೇ ಸಲಾರ್ ಚಿತ್ರತಂಡ ದಿಶಾ ಪಟಾನಿ ಜೊತೆಗೆ ಮಾತುಕತೆ ನಡೆಸಲು ಪ್ರಯತ್ನಿಸುತ್ತಿದೆ ಎನ್ನಲಾಗುತ್ತಿದೆ. ಅಷ್ಟೇ ಅಲ್ಲದೇ ಬಾಲಿವುಡ್ ಟ್ರೆಂಡಿಗ್ ಸ್ಟಾರ್ ನಟಿ ಸಾರಾ ಆಲಿ ಖಾನ್ ರವರು ಹೆಸರೂ ಕೂಡ ಪ್ರಭಾಸ್ ಜೊತೆ ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ. ಮತ್ತೊಂದು ವಿಚಾರವೆಂದರೇ ಇಬ್ಬರೂ ನಾಯಕಿಯರೂ ಈ ಚಿತ್ರದಲ್ಲಿ ನಟಿಸಲಿದ್ದಾರೆ ಎಂದೂ ಸಹ ಕೇಳಿ ಬರುತ್ತಿದೆ. ಇನ್ನೂ ಪ್ರಭಾಸ್ ಜೊತೆ ಸಲಾರ್ ನಲ್ಲಿ ನಟಿಸುವ ನಾಯಕಿ ಯಾರೆಂದು ಶೀಘ್ರದಲ್ಲೇ ಅಧಿಕೃತವಾಗಿ ಮಾಹತಿ ದೊರೆಯಲಿದೆ.

ಇನ್ನೂ ಪ್ರಸ್ತುತ ಪ್ರಶಾಂತ್ ನೀಲ್ ಕೆಜಿಎಫ್ ಚಾಪ್ಟರ್-೨ ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ಬ್ಯುಸಿಯಾಗಿದ್ದು, ಚಿತ್ರೀಕರಣ ಹೈದರಾಬಾದ್‌ನಲ್ಲಿ ನಡೆಯುತ್ತಿದೆ. ಈ ನಡುವೆ ಸಲಾರ್ ಚಿತ್ರದಲ್ಲಿ ನಟಿಸಲು ಕಲಾವಿದರಿಗಾಗಿ ಆಡಿಷನ್ ಗೆ ಸಹ ಕರೆ ನೀಡಿದೆ.

Trending

To Top