Film News

ವಿಷ್ಣುದಾದ ಪ್ರತಿಮೆ ಧ್ವಂಸ: ಸುದೀಪ್, ಜಗ್ಗೆಶ್ ಆಕ್ರೋಷ

ಬೆಂಗಳೂರು: ಕೆಳೆದೆರಡು ದಿನಗಳ ಹಿಂದೆಯಷ್ಟೆ ಮಾಗಡಿ ಬಳಿ ಕನ್ನಡದ ಮೇರು ನಟ ವಿಷ್ಣುವರ್ಧನ್ ರವರ ಪ್ರತಿಮೆ ಧ್ವಂಸ ಮಾಡಿರುವ ಕೃತ್ಯವನ್ನು ಸ್ಯಾಂಡಲ್ ವುಡ್ ನ ಸ್ಟಾರ್ ನಟರಾದ ಕಿಚ್ಚ ಸುದೀಪ್ ಹಾಗೂ ಜಗ್ಗೇಶ್ ತೀವ್ರವಾಗಿ ಖಂಡಿಸಿ ಆಕ್ರೋಷ ವ್ಯಕ್ತಪಡಿಸಿದ್ದಾರೆ.

ವಿಷ್ಣುವರ್ಧನ್ ರವರ ಪ್ರತಿಮೆ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿಚ್ಚ ಸುದೀಪ್ ಪ್ರತಿಕ್ರಿಯೆ ನೀಡಿ, ದಯವಿಟ್ಟು ಪ್ರತಿಮೆ ಧ್ವಂಸ ಮಾಡಿದವರು ದೇಶ ಬಿಟ್ಟು ಓಡಿ ಹೋಗಿ, ಇಲ್ಲವಾದಲ್ಲಿ ನಿಮ್ಮನ್ನು ಹೀನಾಯವಾಗಿ ಹೊಡೆದುಹಾಕುತ್ತಾರೆ. ನಿಮ್ಮ ಹೆಸರು ಗೊತ್ತಾಗುವುದಕ್ಕೂ ಮುನ್ನವೇ ದೇಶ ಬಿಡಿ ಎಂದಿದ್ದಾರೆ.

ವಿಷ್ಣು ಸರ್ ಅಭಿಮಾನಿಯಾಗಿ ಒಂದಿಷ್ಟು ಮಾಹಿತಿ ಹೇಳಲು ಇಷ್ಟಪಡುತ್ತೇನೆ. ಒಡೆದು ಹಾಕಿರೋ ಮಹಾನುಭಾವರೇ, ನಿಮ್ಮ ಮಾಹಿತಿ ಬಯಲಾಗುವುದಕ್ಕೂ ಮುನ್ನವೇ ದೇಶ ಬಿಟ್ಟು ಓಡಿ ಹೋಗಿ, ಅಷ್ಟಕ್ಕೂ ಪ್ರತಿಮೆ ಒಡೆದು ಹಾಕಿರುವ ಉದ್ದೇಶವಾದರೂ ಏನು ಅಂತ ಅರ್ಥವಾಗಿಲ್ಲ, ಮನುಷ್ಯರಾಗಿ ಮಾಡುವಂತಹ ಕೆಲಸವೇ ಅಲ್ಲ. ಇದು ಎಂತಹವರು ಮಾಡುವ ಕೆಲಸ ಎಂದರೇ ನನ್ನ ಬಾಯಲ್ಲಿ ಹೇಳಲು ಹೋದರೆ ಸೆನ್ಸಾರ್ ಆಗುತ್ತೆ, ದಯವಿಟ್ಟು ಗೊತ್ತಾದ ದಿನ ನೀವು ದೇಶಬಿಟ್ಟು ಓಡಿಹೋಗಿ ಎಂದಿದ್ದಾರೆ.

ಇನ್ನೂ ನಟ ಜಗ್ಗೇಶ್ ಕೂಡ ಖಾರವಾಗಿ ಪ್ರತಿಕ್ರಿಯೆ ನೀಡಿದ್ದು, ಕನ್ನಡಿಗರನ್ನು ೪೫ ವರ್ಷ ರಂಜಿಸಿದ ತಪ್ಪಿಗೆ ಇಂತಹ ಶಿಕ್ಷೆನಾ? ಕನ್ನಡಿಗರನ್ನು ೪೫ ವರ್ಷ ರಂಜಿಸಿದ ವ್ಯಕ್ತಿಯ ಪ್ರತಿಮೆ ಧ್ವಂಸ ಮಾಡಿ ನಿಮ್ಮ ರಾಕ್ಷಸಿ ಗುಣವನ್ನು ತೋರಿಸಿದ್ದೀರಿ. ನೀವು ಅಪಮಾನಿಸಿದ್ದು, ನಿಮ್ಮ ರಂಜಿಸಿ ನಿರ್ಗಮಿಸಿದ ನಟನನ್ನು ಅಲ್ಲ, ಬದಲಾಗಿ ನಿಮ್ಮ ಕನ್ನಡ ನೆಲದ ಮೆಚ್ಚಿನ ಮಗನನ್ನು. ನಿಮ್ಮ ತಂದೆ ತಾಯಿ ವಂಶ ಮೆಚ್ಚಿದ ಆತ್ಮ ಅದು, ನಿಮ್ಮ ಈ ರಾಕ್ಷಿಸಿ ಕೃತ್ಯ ಯಾವ ದೇವರು ಕ್ಷಮಿಸುವುದಿಲ್ಲ ಎಂದಿದ್ದಾರೆ.

Trending

To Top