Kannada Cinema News

ಈ ಪುಣ್ಯ ಕೆಲಸ ಆಗಲು 10 ವರ್ಷ ಬೇಕಾಯಿತು! ಭಾವುಕರಾದ ಭಾರತಿ, ಅನಿರುಧ್, ವಿಡಿಯೋ ನೋಡಿ

ಇವತ್ತು, ಮೈಸೂರಿನಲ್ಲಿ ನಮ್ಮ ಸಾಹಸ ಸಿಂಹ ವಿಷ್ಣುವರ್ಧನ್ ಸ್ಮಾರಕದ ಭೂಮಿ ಪೂಜೆ ಕಾರ್ಯ ಇದ್ದ ಕಾರಣ ಅನಿರುಧ್ ಹಾಗು ಅವರ ಕುಟುಂಬ ಮೈಸೂರಿನಲ್ಲಿ ಇದ್ದರು. ನಮ್ಮ ಸಾಹಸ ಸಿಂಹ ವಿಷ್ಣುವರ್ಧನ್ ಅವರು ಆಗಲಿ ೧೦ ವರ್ಷಗಳ ನಂತರ ಈ ಕೆಲಸ ನಡೆಯುತ್ತಿದೆ. ಈ ಸಮಯದಲ್ಲಿ ಮಾಧ್ಯಮ ದವರ ಜೊತೆ ಮಾತಾಡಿದ ಭಾರತಿ ವಿಷ್ಣುವರ್ಧನ್ ಹಾಗು ಅನಿರುಧ್ ಅವರು ಕೊಂಚ ಭಾವುಕರಾಗಿದ್ದರು! ವಿಷ್ಣುವರ್ಧನ್ ಕುಟುಂಬ ಒಂದು ಸ್ಮಾ#ರಕ ಆಗಲು ಬಹಳಷ್ಟು ಬೇಡಿಕೆಗಳು, ಹೋರಾ#ಟಗಳು, ಮಾಡಿತ್ತು, ಕೊನೆಗೂ ಪ್ರತಿಫಲ ಸಿಕ್ಕಿದೆ! ಈ ಸಮಯದಲ್ಲಿ ಭಾರತಿ ಅಮ್ಮ ಏನ್ ಹೇಳಿದ್ದಾರೆ ನೋಡಿ ಈ ಕೆಳಗಿನ ವಿಡಿಯೋ ನೋಡಿ

ಇದೆ ಸೆಪ್ಟೆಂಬರ್ 18ರಂದು ಕನ್ನಡ ಚಿತ್ರರಂಗದ ಸಾಹಸಸಿಂಹ, ಅಭಿನಯ ಭಾರ್ಗವ ಡಾ.ವಿಷ್ಣುವರ್ಧನ್ ಅವರ ಹುಟ್ಟುಹಬ್ಬ. ಪ್ರತಿವರ್ಷವೂ ವಿಷ್ಣು ದಾದಾ ಅವರ ಜನ್ಮದಿನವನ್ನು ಅವರ ಅಭಿಮಾನಿಗಳು ಬಹಳ ವಿಜೃಂಭಣೆಯಿಂದ ಆಚರಿಸುತ್ತಾರೆ. ವಿಷ್ಣು ದಾದಾ ಹುಟ್ಟುಹಬ್ಬಕ್ಕೆ ಪ್ರತಿವರ್ಷ ಏನಾದರೂ ಒಂದು ವಿಶೇಷತೆಯನ್ನು ಸೃಷ್ಟಿಸುತ್ತಾರೆ ಅಭಿಮಾನಿಗಳು. ಈ ವರ್ಷ ಸಹ ವಿಷ್ಣುವರ್ಧನ್ ಅವರ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಲು ಅಭಿಮಾನಿಗಳು ನಿರ್ಧರಿಸಿದ್ದಾರೆ. ಅದು ಟ್ವಿಟರ್ ಟ್ರೆಂಡ್ ಮಾಡುವ ಮೂಲಕ. ವಿಷ್ಣುವರ್ಧನ್ ಅವರ ಹುಟ್ಟುಹಬ್ಬಕ್ಕೆ ಇನ್ನು 50 ದಿನ ಇರುವಾಗಲೇ ಟ್ವಿಟರ್ ಟ್ರೆಂಡ್ ಮಾಡಲು ಶುರುಮಾಡಬೇಕೆಂದು ಅಭಿಮಾನಿಗಳು ಪ್ಲಾನ್ ಮಾಡಿಕೊಂಡಿದ್ದಾರೆ.

ಈ ವರ್ಷ ವಿಷ್ಣು ದಾದಾ ಅವರ 70ನೇ ವರ್ಷದ ಜನ್ಮಜಯಂತಿ. ವಿಷ್ಣುದಾದಾ ಅವರು ಭೌತಿಕವಾಗಿ ನಮ್ಮೆಲ್ಲರನ್ನು ಅಗಲಿ 10ವರ್ಷಗಳೇ ಕಳೆಯುತ್ತಿವೆ. ಆದರೆ ಇಂದಿಗೂ ಸಹ ಅವರ ಮೇಲೆ ಅಭಿಮಾನಿಗಳಿಗೆ ಇರುವ ಕ್ರೇಜ್ ಹಾಗೆಯೇ ಇದೆ. ಇಂದಿಗೂ ಸಹ ಅವರು ಅಭಿಮಾನಿಗಳ ಆರಾಧ್ಯದೈವ. ವಿಷ್ಣು ದಾದಾ ಅವರು ತಮ್ಮ ಸಿನಿಮಾಗಳ ಮೂಲಕ ಹೇಳಿಕೊಟ್ಟ ಜೀವನದ ಪಾಠವನ್ನು ಇಂದಿಗೂ ಸಹ ಅಭಿಮಾನಿಗಳು ಪಾಲಿಸುತ್ತಾರೆ.

ತಮ್ಮ ಪಾಲಿಗೆ ವಿಷ್ಣು ದಾದಾ ಒಬ್ಬ ನಟರಷ್ಟೇ ಅಲ್ಲ, ಜೀವನಕ್ಕೆ ಸ್ಪೂರ್ತಿ ಎನ್ನುತ್ತಾರೆ ಅಭಿಮಾನಿಗಳು. ಹಾಗಾಗಿ ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಟ್ವಿಟರ್ ನಲ್ಲಿ ಟ್ರೆಂಡ್ ಮಾಡುವ ಮೂಲಕ ಅವರಿಗೆ ನಮನ ಸಲ್ಲಿಸಬೇಕು ಎಂದು ಅಭಿಮಾನಿಗಳ ಕೋರಿಕೆ ಆಗಿದೆ. ವಿಷ್ಣುವರ್ಧನ್ ಅವರ ಅಭಿಮಾನಿಗಳ ಕೋರಿಕೆಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಾಥ್ ನೀಡಿದ್ದಾರೆ. ವಿಷ್ಣು ದಾದಾ ಅವರ ಹುಟ್ಟುಹಬ್ಬದ ಟ್ರೆಂಡ್ ಅನ್ನು ಹೇಗೆ ಮಾಡಬೇಕು ಎಂಬುದನ್ನು ಅವರ ಅಭಿಮಾನಿಗಳು ವಿವರಿಸಿ ನಮ್ಮೊಡನೆ ಯಾರು ಕೈಜೋಶಿಸುತ್ತೀರಾ ಎಂದು ಮಾಡಿರುವ tweet ಗೆ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಬೆಂಬಲ ನೀಡಿದ್ದಾರೆ. “ಅಂದಿಗೂ, ಇಂದಿಗೂ, ಎಂದೆಂದಿಗೂ.. ನಾನು ನನ್ನ ಸ್ನೇಹಿತರು ಅವರ ಅಭಿಮಾನಿಗಳು.. ನಾನು ಯಾವಾಗಲೂ ನಿಮ್ಮ ಜೊತೆ ಇರುತ್ತೇನೆ..” ಎಂದು tweet ಮಾಡುವ ಮೂಲಕ ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ ಅಭಿಮಾನಿಗಳಿಗೆ ಬೆಂಬಲ ನೀಡಿದ್ದಾರೆ ಸುದೀಪ್.

Trending

To Top