Film News

ವಿರಾಟ ಪರ್ವಂ ಪೋಸ್ಟರ್ ರಿಲೀಸ್: ರಾಣಾ ಕೈಹಿಡಿದು ಬಂದ ಸಾಯಿ ಪಲ್ಲವಿ

ಹೈದರಾಬಾದ್: ಕೆಲವು ದಿನಗಳ ಹಿಂದೆಯಷ್ಟೆ ನಾಗಚೈತನ್ಯ ಹಾಗೂ ಸಾಯಿ ಪಲ್ಲವಿ ಯವರ ಲವ್ ಸ್ಟೋರಿ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಇದು ವೈರಲ್ ಆಗಿರುವ ಬೆನ್ನಲ್ಲೆ ಸಾಯಿಪಲ್ಲವಿ ಹಾಗೂ ರಾಣಾ ದಗ್ಗುಬಾಟಿ ಅಭಿನಯದ ವಿರಾಟ ಪರ್ವಂ ಚಿತ್ರದ ಪೋಸ್ಟರ್ ರಿಲೀಸ್ ಆಗಿದೆ.

ವೇಣು ಉಡುಗುಲ ಸಾರಾಥ್ಯದಲ್ಲಿ ಬರುತ್ತಿರುವ ವಿರಾಟ ಪರ್ವಂ ಚಿತ್ರದಲ್ಲಿ ರಾಣಾ ದಗ್ಗುಬಾಟಿ ಹಾಗೂ ಸಾಯಿಪಲ್ಲವಿ ನಾಯಕ ನಾಯಕಿಯಾಗಿ ನಟಿಸುತ್ತಿದ್ದಾರೆ. ಇನ್ನೂ ಈ ಸಿನೆಮಾ ಪೋಸ್ಟರ್ ರಿಲೀಸ್ ಆಗಿದ್ದು, ತಮ್ಮ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಪ್ರಸ್ತುತ ಇನ್ನೂ ಈ ಚಿತ್ರದ ಶೂಟಿಂಗ್ ನಡೆಯುತ್ತಿದ್ದು, ಬಿಡುಗಡೆಯಾದ ಪೋಸ್ಟರ್ ಗಳನ್ನು ಗಮನಿಸಿದಾಗ ಇದು ನಕ್ಸಲಿಸಂ ಕುರಿತಂತೆ ತೆಗೆಯಲಾಗುವ ಚಿತ್ರವಿರಬಹುದೇ ಎಂಬುದು ಮೇಲ್ನೋಟಕ್ಕೆ ಕಾಣುತ್ತಿದೆ. ಇನ್ನೂ ಪೋಸ್ಟರ್ ನಲ್ಲಿ ನಕ್ಸಲಿಸಂ ಗೆ ಸಂಬಂಧಿಸಿದ ಉಡುಪನ್ನು ಧರಿಸಿರುವ ರಾಣಾ ಕೈ ಹಿಡಿದು ಸಾಯಿ ಪಲ್ಲವಿ ನಡೆದುಕೊಂಡು ಬರುತ್ತಿದ್ದಾರೆ.

  

ಇನ್ನೂ ಸಂಕ್ರಾಂತಿ ಹಬ್ಬಕ್ಕೂ ಮುಂಚೆಯೇ ಸಿನೆಮಾ ಪೋಸ್ಟರ್ ರಿಲೀಸ್ ಆಗಿದ್ದು, ಪೋಸ್ಟರ್ ಮೂಲಕ ಸಂಕ್ರಾಂತಿ ಹಬ್ಬದ ಶುಭಾಷಯಗಳನ್ನು ಕೋರಿದ್ದಾರೆ ಚಿತ್ರತಂಡ. ಮುಖ್ಯವಾಗಿ ಗಾಯಕ ಹಾಗೂ ಸಾಮಾಜಿಕ ಕಾರ್ಯಕರ್ತೆ ಬೆಲ್ಲಿ ಲಲಿತಾ ಅವರ ಸ್ಪೂರ್ತಿಯಾಗಿ ನಟಿ ಸಾಯಿ ಪಲ್ಲವಿಯವರ ಪಾತ್ರವಿರಲಿದೆಯಂತೆ. ಈ ಚಿತ್ರದಲ್ಲಿ ಬಾಲಿವುಡ್ ನಟಿ ಟಬು, ಪ್ರಿಯಮಣಿ, ನಂದಿತಾ ದಾಸ್, ಈಶ್ವರಿ ರಾವ್ ಸೇರಿದಂತೆ ಅನೇಕ ಖ್ಯಾತ ಕಲಾವಿದರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗಿದೆ. ಸದ್ಯ ಬಿಡುಗಡೆಯಾದ ಪೋಸ್ಟರ್ ಚಿತ್ರ ಹೇಗಿರಲಿದೆ ಎಂಬುದರ ಕುರಿತಂತೆ ಭಾರಿ ನೀರಿಕ್ಷೆಯನ್ನು ಅಭಿಮಾನಿಗಳಲ್ಲಿ ಮೂಡಿಸಿದೆ.

Trending

To Top