ಪುಷ್ಪಾ ಸಿನೆಮಾ ಹಾಡಿಗೆ ಭರ್ಜರಿ ಸ್ಟೆಪ್ಸ್ ಹಾಕಿದ ವಿರಾಟ್ ಕೊಹ್ಲಿ..

ಪುಷ್ಪಾ ಸಿನೆಮಾ ಬಿಡುಗಡೆಯಾದ ಬಳಿಕ ಪುಷ್ಪಾ ಸಿನೆಮಾ ಡೈಲಾಗ್‌ಗಳು, ಐಟಂ ಸಾಂಗ್‌ ಸಖತ್ ಪ್ಯಾಪುಲರ್‍ ಆಗಿದೆ. ಚಿಕ್ಕವರಿಂದ ದೊಡ್ಡವರ ವರೆಗೂ ತಗ್ಗೇದೇ ಲೇ ಎಂಬ ಡೈಲಾಗ್ ಕಾಮನ್ ವರ್ಡ್ ಆಗಿದೆ. ಇದೀಗ ಈ ಸಾಲಿಗೆ ವಿರಾಟ್ ಕೊಹ್ಲಿ ಸಹ ಸೇರಿಕೊಂಡಿದ್ದಾರೆ.

ಕ್ರಿಕೆಟ್ ಜಗತ್ತಿನ ದಿಗ್ಗಜ ವಿರಾಟ್ ಕೊಹ್ಲಿ ಪುಷ್ಪಾ ಸಿನೆಮಾದ ಹೂ ಅಂಟಾವಾ ಮಾಮಾ ಐಟಂ ಸಾಂಗ್ ಗೆ ಭರ್ಜರಿಯಾಗಿ ಸ್ಟೆಪ್ಸ್ ಹಾಕಿದ್ದಾರೆ. ಕ್ರಿಕೆಟ್ ಮಾತ್ರವಲ್ಲದೇ ಡ್ಯಾನ್ಸ್ ಮಾಡುವದರಲ್ಲೂ ತಮ್ಮ ಬಲವನ್ನು ಸಾರಿ ತೋರಿಸಿದ್ದಾರೆ. ಸಮಂತಾ ಹಾಡಿಗೆ ವಿರಾಟ್ ಹೆಜ್ಜೆ ಹಾಕಿರುವ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಭಾರಿ ಸಖತ್ ವೈರಲ್ ಆಗುತ್ತಿದೆ.

ಅಂದಹಾಗೆ ವಿರಾಟ್ ಕೊಹ್ಲಿ ಕ್ರಿಕೆಟಿಗ ಗ್ಲೇನ್ ಮ್ಯಾಕ್ಸ್ಟೆಲ್ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದರು. ಅನುಷ್ಕಾ ಸಹ ಈ ಸಮಾರಂಭದಲ್ಲಿ ಭಾಗಿಯಾಗಿದ್ದರು. ಅಷ್ಟೆ ಅಲ್ಲದೇ ಅವರ ಜೊತೆಗೆ ಆರ್‌ಸಿಬಿ ತಂಡದ ಆಟಗಾರರು ಸಹ ಭಾಗಿಯಾಗಿದ್ದು, ಮದುವೆ ಕಾರ್ಯಕ್ರಮದ ಅಂಗವಾಗಿ ವಿರಾಟ್ ದಕ್ಷಿಣ ಭಾರತದ ಸಿನೆಮಾಗಳಲ್ಲಿ ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ.

ಇನ್ನೂ ವಿರಾಟ್ ಹಾಗೂ ವಿವಾಹ ಕಾರ್ಯಕ್ರಮದಲ್ಲಿನ ಕೆಲವರು ಪುಷ್ಪಾ ಸಿನೆಮಾದ ಸೂಪರ್‍ ಹಿಟ್ ಆದ ಹೂ ಅಂಟಾವ ಮಾಮ ಹಾಡಿಗೆ ಕುಣಿದು ಕುಪ್ಪಳಿಸಿದ್ದಾರೆ. ಇದರ ಜೊತೆಗೆ ರಾಜಮೌಳಿ ನಿರ್ದೇಶನದ RRR ಸಿನೆಮಾದ ನಾಟು ನಾಟು ಹಾಡಿಗೂ ಸಹ ಹೆಜ್ಜೆ ಹಾಕಿದ್ದಾರೆ. ಇನ್ನೂ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ದೊಡ್ಡದಾಗಿಯೇ ವೈರಲ್ ಆಗುತ್ತಿದೆ. ಇಷ್ಟು ದಿನ ಕ್ರಿಕೆಟ್ ಆಡುವಾಗ ಸಂಭ್ರಮಿಸಿದ ಕೊಹ್ಲಿ ಅಭಿಮಾನಿಗಳು ಈ ಬಾರಿ ಭರ್ಜರಿಯಾದ ಸ್ಟೆಪ್ಸ್‌ ಗಳಿಗೆ ಮನಸೋತಿದ್ದಾರೆ.

Previous articleಪ್ರಗ್ನೆನ್ಸಿ ಸಮಯದಲ್ಲೂ ಫಿಟ್‌ನೆಸ್ ಇಂರ್ಪಾಟೆಂಟ್ ಎಂದ ನಟಿ ಪ್ರಣಿತಾ
Next articleಹಿಂದಿ ರಾಷ್ಟ್ರೀಯ ಭಾಷೆ ವಿವಾದ: ಅಜಯ್ ದೇವಗನ್ ವಿರುದ್ದ ತಿರುಗಿಬಿದ್ದ ಬಾಲಿವುಡ್ ಸ್ಟಾರ್ ಗಳು