News

(video)ಅಂಬಿ ಮೇಲಿನ ಪ್ರೀತಿಗೆ ತನ್ನ ಹುಟ್ಟು ಹಬ್ಬದ ಆಚರಿಸಿಕೊಳ್ಳದ ವಿನೋದ್ ಪ್ರಭಾಕರ್! ವಿಡಿಯೋ ನೋಡಿ

vinod1

ವಿನೋದ್ ಪ್ರಭಾಕರ್ ಅವರು ಕನ್ನಡದ ಲೆಜೆಂಡ್ ನಟ ಟೈಗರ್ ಪ್ರಭಾಕರ್ ಅವರ ಪುತ್ರ. ಈ ಮರಿ ಟೈಗರ್ ನೆನ್ನೆ ತಾನೇ ಅವರ ಹುಟ್ಟು ಹಬ್ಬವನ್ನು ದುಕ್ಕದಲ್ಲೇ ಆಚರಿಸಿಕೊಂಡರು. ಆದರೆ ಮರಿ ಟೈಗರ್ ಹೇಳುವ ಪ್ರಕಾರ ಈ ಭಾರಿ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿ ಕೊಳ್ಳುವುದಿಲ್ಲ, ನಮ್ಮ ಕನ್ನಡ ಕುಟುಂಬದ ಒಬ್ಬರು ತೀರಿಕೊಂಡಿದ್ದಾರೆ , ಅಂಬಿ ಅವರು ಅಂದರೆ ನನಗೆ ಪ್ರಾಣ! ನಮ್ಮ ತಂದೆಗೆ ಕೂಡ ಅವರು ಒಬ್ಬ ಒಳ್ಳೆ ಗೆಳೆಯ, ಆದ್ದರಿಂದ ನಾನು ಈ ವರ್ಷ ನನ್ನ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ಸದ್ಯ ವಿನೋದ್ ಪ್ರಭಾಕರ್ ಅವರು ತಮ್ಮ ಹೊಸ ಚಿತ್ರ ರಗಡ್ ಚಿತ್ರದಲ್ಲಿ ಬ್ಯುಸಿ ಆಗಿದ್ದಾರೆ. ಈ ಚಿತ್ರಕ್ಕಾಗಿ ವಿನೋದ್ ಪ್ರಭಾಕರ್ ಅವರು 6 ಪ್ಯಾಕ್ ಮಾಡಿದ್ದಾರೆ. ತಮ್ಮ ಹುಟ್ಟು ಹಬ್ಬದ ದಿನ ವಿನೋದ್ ಪ್ರಭಾಕರ್ ಅವರು ಅಂಬಿ ಅವರ ಬಗ್ಗೆ, ಹಾಗು ಅವರ ಮುಂದಿನ ಚಿತ್ರಗಳ ಬಗ್ಗೆ ಏನ್ ಹೇಳಿದ್ದಾರೆ ಗೊತ್ತ! ಈ ಕೆಳಗಿನ ವಿಡಿಯೋ ನೋಡಿರಿ ವಿನೋದ್ ಪ್ರಭಾಕರ್ ಅವರು ಸದ್ಯ ಹೊಸ ಚಿತ್ರಗಳಾದ ರಗಡ್, ಶಾಡೋ ಎಂಬ ಚಿತ್ರಗಳಲ್ಲಿ ಬಹಳ ಬ್ಯುಸಿ ಆಗಿದ್ದಾರೆ. ವಿನೋದ್ ಪ್ರಭಾಕರ್ ಅವರು ಹೇಳುವ ಪ್ರಕಾರ “ನಮ್ಮ ತಂದೆ ಸೂಪರ್ ಸ್ಟಾರ್, ಆದ್ದರಿಂದ ನಮಗೆ ಬೆಳೆಯುವುದು ಬಹಳ ಕಷ್ಟ, ಜನರು ನನ್ನನ್ನು ನನ್ನ ತಂದೆ ಜೊತೆ compare ಮಾಡುತ್ತಾರೆ”. ನಾನು ಬಹಳ ಕಷ್ಟ ಪಟ್ಟು ನನ್ನ ಹೊಸ ಚಿತ್ರಗಳಲ್ಲಿ ನಟಿಸುತ್ತಿದ್ದೇನೆ ಎಂದು ವಿನೋದ್ ಪ್ರಭಾಕರ್ ಅವರು ಹೇಳಿದ್ದಾರೆ. ವಿನೋದ್ ಪ್ರಭಾಕರ್ ಅವರು ನವಗ್ರಹ ಚಿತ್ರದಿಂದ ಇಡೀ ಕರ್ನಾಟಕದಲ್ಲಿ ಮನೆ ಮಾತಾದರು. ಇಲ್ಲಿಯ ತನಕ ವಿನೋದ್ ಪ್ರಭಾಕರ್ ಅವರು ಸುಮಾರು 15 ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ.

Trending

To Top