HomeNews(video)ಹೌದು ಕಣ್ರೀ, ವಿಲನ್ ಹಿಟ್ ಅಲ್ಲ ಫ್ಲಾಪ್ ಚಿತ್ರ,ಒಂದೇ ವಾರಕ್ಕೆ ಥಿಯೇಟರ್ ಖಾಲಿ, ಎಂದ ಸುದೀಪ್

(video)ಹೌದು ಕಣ್ರೀ, ವಿಲನ್ ಹಿಟ್ ಅಲ್ಲ ಫ್ಲಾಪ್ ಚಿತ್ರ,ಒಂದೇ ವಾರಕ್ಕೆ ಥಿಯೇಟರ್ ಖಾಲಿ, ಎಂದ ಸುದೀಪ್

ನಿಮಗೆಲ್ಲ ಗೊತ್ತಿರೋ ಹಾಗೆ ಕಳೆದ ವರ್ಷ ಕನ್ನಡದ ಬಹು ನಿರೀಕ್ಷೆಯ ಚಿತ್ರವಾದ ದಿ ವಿಲನ್ ಬಿಡುಗಡೆ ಆಗಿತ್ತು. ಈ ಚಿತ್ರದಲ್ಲಿ ನಮ್ಮ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಾಗು ಶಿವಣ್ಣ ಅವರು ನಟನೆ ಮಾಡಿದ್ದರು, ಹಾಗು ಈ ಚಿತ್ರವನ್ನು ಜೋಗಿ ಪ್ರೇಮ್ ಅವರು ನಿರ್ದೇಶನ ಮಾಡಿದ್ದರು. ದಿ ವಿಲ್ಲನ್ ಚಿತ್ರದ ಅಂದುಕೊಂಡಷ್ಟು ಯೆಶಸ್ಸನ್ನು ಪಡೆದಿರಲಿಲ್ಲ ಆದರೆ ಗಳಿಕೆ ಮಾತ್ರ ಅದ್ಭುತವಾಗಿತ್ತು ಎಂದು ಸ್ವತಃ ನಿರ್ಮಾಪಕರೇ ಹೇಳಿದ್ದರು. ದಿ ವಿಲನ್ ಚಿತ್ರ ಸುಮಾರು 11 ದಿನಗಳ ಕಾಲ ಥಿಯೇಟರ್ ನಲ್ಲಿ ಓಡಿತ್ತು ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಇದೆಲ್ಲಾ ಆದರೂ ಕೂಡ ನಮ್ಮ ನಿರ್ದೇಶಕರಾದ ಪ್ರೇಮ್ ಅವರು ದಿ ವಿಲನ್ ಕನ್ನಡ ಚಿತ್ರ ರಂಗದ ಎಲ್ಲಾ ರೆಕಾರ್ಡ್ ಗಳನ್ನೂ ಬ್ರೇಕ್ ಮಾಡಿದೆ, ಅದೆಷ್ಟೋ ಕೋಟಿ ಕಲೆಕ್ಷನ್ ಮಾಡಿದೆ ಎಂದೆಲ್ಲ ಮೀಡಿಯಾ ದವರಿಗೆ ಹೇಳಿದ್ದರು.
ಮೊನ್ನೆ ನಮ್ಮ ಕಿಚ್ಚ ಸುದೀಪ್ ಅವರನ್ನು ಒಂದು ಚಾನೆಲ್ ನಲ್ಲಿ ಸಂದರ್ಶನ ಮಾಡಲಾಗಿತ್ತು. ಈ ಸಮಯದಲ್ಲಿ ಕಿಚ್ಚ ಸುದೀಪ್ ಅವರನ್ನು ಪೈಲ್ವಾನ್ ಚಿತ್ರದ ಬಗ್ಗೆ, ವಿಲ್ಲನ್ ಚಿತ್ರದ ಬಗ್ಗೆ, ಸಲ್ಮಾನ್ ಖಾನ್ ಜೊತೆ ದಬಾಂಗ್ ಚಿತ್ರದ ಬಗ್ಗೆ, ದರ್ಶನ್ ಅವರ ಬಗ್ಗೆ, ಹಾಗು IT ರೇಡ್ ಬಗ್ಗೆ ಕೂಡ ಕೇಳಲಾಗಿತ್ತು. ಈ ಸಮಯದಲ್ಲಿ ದಿ ವಿಲನ್ ಚಿತ್ರದ ಬಗ್ಗೆ ಕೇಳಿದಾಗ , ಕಿಚ್ಚ ಸುದೀಪ್ ಅವರು “ಹೌದು, ದಿ ವಿಲನ್ ಬಿಡುಗಡೆ ಆಗಿ ಒಂದೇ ಒಂದು ವಾರಕ್ಕೆ ಥಿಯೇಟರ್ ಖಾಲಿ ಖಾಲಿ, ಯಾರು ಜನನೇ ಬಂದಿಲ್ಲ, ಸಿನಿಮಾ ಓಡಿಲ್ಲ” ಎಂದು ಓಪನ್ ಆಗಿ ಹೇಳಿದ್ದಾರೆ. ಕಿಚ್ಚ ಸುದೀಪ್ ಅವರು ದಿ ವಿಲನ್ ಚಿತ್ರದ ಬಗ್ಗೆ ಏನು ಹೇಳಿದ್ದಾರೆ, ಅವರ ಬಾಯಲ್ಲೇ ಕೇಳಿರಿ, ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
ಸದ್ಯ ನಮ್ಮ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ತಮ್ಮ ಪೈಲ್ವಾನ್ ಚಿತ್ರದಲ್ಲಿ ಬಹಳ ಬ್ಯುಸಿ ಆಗಿದ್ದಾರೆ. ಪೈಲ್ವಾನ್ ಚಿತ್ರ ಇನ್ನೇನು ಕೆಲವು ತಿಂಗಳಲ್ಲಿ ಬಿಡುಗಡೆ ಆಗಲಿದೆ ಎಂದು ತಿಳಿದು ಬಂದಿದೆ. ಇದಲ್ಲದೆ ಕಿಚ್ಚ ಸುದೀಪ್ ಅವರು ಮಾರ್ಚ್ ನಲ್ಲಿ ದಬಾಂಗ್ ಚಿತ್ರದ ಚಿತ್ರೀಕರಣದಲ್ಲಿ ಪಾಲ್ಗೊಳ್ಳರಿದ್ದಾರೆ. ದಬಾಂಗ್ ಆದಮೇಲೆ ಕೋಟಿಗೊಬ್ಬ 3 ಚಿತ್ರವನ್ನು ಶುರು ಮಾಡಲಿದ್ದಾರೆ. ಸದ್ಯ ಕನ್ನಡದಲ್ಲಿ ಬಹಳ ಬ್ಯುಸಿ ಇರುವ ನಟರೆಂದರೆ ಅದು ನಮ್ಮ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು. ಕಿಚ್ಚ ಸುದೀಪ್ ಅವರು ಒಂದು ಹಾಲಿವುಡ್ ಚಿತ್ರದಲ್ಲಿ ಕೂಡ ನಟಿಸುತ್ತಿದ್ದಾರೆ. ಆ ಇಂಗ್ಲಿಷ್ ಚಿತ್ರದ ಹೆಸರು ರೈಸನ್ ಅಂತ. ಈ ಚಿತ್ರದ ಶೂಟಿಂಗ್ feb ನಲ್ಲಿ ಶುರು ಆಗಲಿದೆ ಎಂದು ಸ್ವತಃ ಕಿಚ್ಚ ಸುದೀಪ್ ಅವರೇ ಹೇಳಿದ್ದಾರೆ.
ನಮ್ಮ ಕಿಚ್ಚ ಸುದೀಪ್ ಅವರ ಪೈಲ್ವಾನ್ ಚಿತ್ರ ಕನ್ನಡ ಅಲ್ಲದೆ, ತಮಿಳು, ತೆಲುಗು, ಮಲಯಾಳಂ, ಮರಾಠಿ, ಹಿಂದಿ, ಹಾಗು ಬೋಜಪುರಿ ಭಾಷೆ ಯಲ್ಲಿ ಬಿಡುಗಡೆ ಆಗಲಿದೆ. ಇದು ಕನ್ನಡ ಚಿತ್ರರಂಗದ ಮತ್ತೊಂದು ಸಾಧನೆ ಎಂದೇ ಹೇಳಬಹುದು. ಕಿಚ್ಚ ಸುದೀಪ್ ಅವರ ಪೈಲ್ವಾನ್ ಚಿತ್ರದ ಟೀಸರ್ ನೋಡಿ, ಸಲ್ಮಾನ್ ಖಾನ್, ಪ್ರಭುದೇವ, ಧನುಷ್, ರಾಮ್ ಗೋಪಾಲ್ ವರ್ಮಾ ಹಾಗು ಇನ್ನೂ ಹಲವಾರು ಭಾರತದ ಕಲಾವಿದರು ಇದರ ಬಗ್ಗೆ ಟ್ವೀಟ್ ಮಾಡಿದ್ದರು. ಏನೇ ಆಗಲಿ ಸ್ನೇಹಿತರೆ, ನಮ್ಮ ಕನ್ನಡ ಚಿತ್ರ ರಂಗದ ಮಾರುಕಟ್ಟೆ ಈಗ ಬೆಳೆಯುತ್ತಾ ಇದೆ, ಇಡೀ ದೇಶವೇ ನಮ್ಮ ಚಿತ್ರಗಳತ್ತ ಮುಖ ಮಾಡಿದೆ. ಇದು ನಿಜಕ್ಕೆ ಸಂತೋಷ ಪಡುವ ಸುದ್ದಿ ಎಂದೇ ಹೇಳಬಹುದು. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ, ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿರಿ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಪ್ಪದೆ ನಮಗೆ ತಿಳಿಸಿರಿ.
ನಿಮಗೆಲ್ಲ ಗೊತ್ತಿರೋ ಹಾಗೆ ದರ್ಶನ್ ಹಾಗು ಸುದೀಪ್ ಅವರನ್ನು ಇಷ್ಟ ಪಡುವ ಅಭಿಮಾನಿಗಳು ಅದೆಷ್ಟೋ ಲಕ್ಷ ಮಂದಿ ಇದ್ದಾರೆ. ಇಬ್ಬರು ಒಂದೇ ಚಿತ್ರದಲ್ಲಿ ನಟಿಸಬೇಕು , ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳಬೇಕು, ಇಬ್ಬರು ಒಟ್ಟಿಗೆ ಇರಬೇಕು ಎಂದು ಆಸೆ ಪಡುವ ಅಭಿಮಾನಿಗಳು ಬಹಳಷ್ಟು ಜನ ಇದ್ದಾರೆ. ಕಿಚ್ಚ ಸುದೀಪ್ ಅವರು twitter ನಲ್ಲಿ ಬಹಳ active ಇರುತ್ತಾರೆ. ಅಭಿಮಾನಿಗಳು ಕೇಳಿದ ಎಲ್ಲಾ ಪ್ರಶ್ನೆಗಳಿಗೆ ಬಹಳ ತಾಳ್ಮೆ ಇಂದ ಕಿಚ್ಚ ಸುದೀಪ್ ಅವರು ಉತ್ತರಿಸುತ್ತಾರೆ. ಇದೆ ರೀತಿ ಒಬ್ಬ ದರ್ಶನ್ ಅವರ ಅಭಿಮಾನಿ ಕಿಚ್ಚ ಸುದೀಪ್ ಅವರನ್ನು “ಅಣ್ಣಾ, ನೀವು ನಮ್ಮ ಡಿಬಾಸ್ ಅವರ ಜೊತೆ ಯಾವಾಗ ಸಿನಿಮಾ ಮಾಡುತ್ತೀರಾ?, ನೀವಿಬ್ಬರು ಬಾಕ್ಸ್ ಆಫೀಸ್ ಕಿಂಗ್ ಗಳು, ನಿಮ್ಮಿಬ್ಬರ ಸಿನಿಮಾ ನೋಡಬೇಕು ಎಂದು ಅದೆಷ್ಟೋಜನಕ್ಕೆ ಆಸೆ ಇದೆ” ಎಂದು ಟ್ವೀಟ್ ಮಾಡಿದ್ದರು. ಈ ಅಭಿಮಾನಿಯೇ ಟ್ವೀಟ್ ಈ ಕೆಳಗಿನ ಫೋಟೋದಲ್ಲಿ ನೋಡಿರಿ ಅಭಿಮಾನಿಯ ಈ ಪ್ರಶ್ನೆಗೆ ಕಿಚ್ಚ ಸುದೀಪ್ ಅವರು “ಫ್ರೆಂಡ್, ಒಂದೊಳ್ಳೆ ಸ್ಕ್ರಿಪ್ಟ್ ಬಂದರೆ ನಾನು ಖಂಡಿತ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜೊತೆ ಸಿನಿಮಾ ಮಾಡುತ್ತೇನೆ” ಎಂದು ಹೇಳಿದ್ದಾರೆ. ಸದ್ಯ ಈ ಒಂದು ಟ್ವೀಟ್ ನಿಂದಾಗಿ ಕಿಚ್ಚ ಸುದೀಪ್ ಹಾಗು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಗಳಿಗೆ ಬಹಳ ಖುಷಿ ತಂದಿದೆ. ಈ ಟ್ವೀಟ್ ಸದ್ಯ ಸೋಶಿಯಲ್ ಮೀಡಿಯಾ ದಲ್ಲಿ ಸಿಕ್ಕಾ ಪಟ್ಟೆ ವೈರಲ್ ಆಗಿದೆ. ಕಿಚ್ಚ ಸುದೀಪ್ ಅವರ ಟ್ವೀಟ್ ಹೇಗಿತ್ತು ಅಂತ ಈ ಕೆಳಗಿನ ಫೋಟೋದಲ್ಲಿ ನೋಡಿರಿ

You May Like

More