News

(video)ವಿಲ್ಲನ್ ಇಂದ ಬಂದಿರುವ ದುಡ್ಡೇ IT ರೈಡಿಗೆ ಕಾರಣ ಆಯ್ತಾ! ಷಾಕಿಂಗ್ ಸುದ್ದಿ ವೈರಲ್ ವಿಡಿಯೋ

prem11

ನಿಮಗೆಲ್ಲ ಗೊತ್ತಿರೋ ಹಾಗೆ ಇಂದು ಬೆಳಿಗ್ಗೆ ಕನ್ನಡದ ಸೂಪರ್ ಸ್ಟಾರ್ಸ್ ಆದ ರಾಕಿಂಗ್ ಸ್ಟಾರ್ ಯಶ್, ಕಿಚ್ಚ ಸುದೀಪ್, ಶಿವಣ್ಣ ಹಾಗು ಪುನೀತ್ ರಾಜಕುಮಾರ್ ಅವರ ಮನೆಗೆ IT ಅಧಿಕಾರಿಗಳು ಧಾಳಿ ಮಾಡಿದ್ದರು. ಇದರ ಜೊತೆ ದಿ ವಿಲನ್ ಚಿತ್ರದ ನಿರ್ಮಾಪಕರ ಮನೆಗೂ ಧಾಳಿ ಮಾಡಿದ್ದಾರೆ. ಪ್ರೇಮ್ ನಿರ್ದೇಶನದ ದಿ ವಿಲನ್ ಚಿತ್ರ ಅಷ್ಟೊಂದು ಗಳಿಕೆ ಮಾಡಿದ್ದಕ್ಕೆ ಈ IT ರೇಡ್ ಆಗಿದ್ಯಾ ಅಂತ ಬಹಳಷ್ಟು ಜನ ಪ್ರಶ್ನೆ ಮಾಡುತ್ತಿದ್ದಾರೆ. ಇದಲ್ಲದೆ ಇದರ ಬಗ್ಗೆ ಪ್ರತಿಕ್ರೆಯೆ ನೀಡಿದ ಕಿಚ್ಚ ಸುದೀಪ್, ದಿ ವಿಲನ್, KGF ಹಾಗು ನಟಸಾರ್ವಭೌಮ ಇವೆಲ್ಲ ದೊಡ್ಡ ಬಜೆಟಿನ ಚಿತ್ರಗಳು, ಇದೆ ಕಾರಣಕ್ಕೆ IT ರೇಡ್ ಆಗಿರಬಹುದು ಎಂದು ಹೇಳಿದ್ದಾರೆ. ವಿಲನ್ ನಿರ್ಮಾಪಕರ ಸ್ಥಿತಿ ಏನಾಗಿದೆ ಗೊತ್ತ? ಈ ಕೆಳಗಿನ ವಿಡಿಯೋ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ ಇಂದು ಬೆಳ್ಳಂ ಬೆಳಿಗ್ಗೆ IT ಅಧಿಕಾರಿಗಳು ತಂಡೋಪ ತಂಡವಾಗಿ ಇದ್ದಕ್ಕಿದ್ದ ಹಾಗೆ ಕನ್ನಡ ಸೂಪರ್ ಸ್ಟಾರ್ಸ್ ಆದ ಶಿವಣ್ಣ, ರಾಕಿಂಗ್ ಸ್ಟಾರ್ ಯಶ್, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹಾಗು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಮನೆಗೆ ಧಾಳಿ ಮಾಡಿ IT ರೇಡ್ ನಡೆಸಿದ್ದಾರೆ. ಇದರ ಬಗ್ಗೆ ವಿಷ್ಯ ಗೊತ್ತಾದ ತಕ್ಷಣ ಮೈಸೂರಿನಿಂದ ಬೆಂಗಳೂರಿಗೆ ಕಿಚ್ಚ ಸುದೀಪ್ ಅವರು ಬಂದಿದ್ದಾರೆ. ಇದಲ್ಲದೆ ಇದರ ಬಗ್ಗೆ ಶಿವಣ್ಣ ಹಾಗು ಪುನೀತ್ ರಾಜಕುಮಾರ್ ಅವರು ಮಾಧ್ಯಮದವರ ಜೊತೆ ಮಾತಾಡಲು ಒಪ್ಪಲಿಲ್ಲ. ವಿಷ್ಯ ತಿಳಿದ ರಾಕಿಂಗ್ ಸ್ಟಾರ್ ಯಶ್ ಅವರು ದೂರದ ಮುಂಬೈ ನಿಂದ ಬೆಂಗಳೂರಿಗೆ ಬರುತ್ತಿದ್ದಾರೆ. ಅಷ್ಟಕ್ಕೂ, ಈ ನಮ್ಮ ನಟರ ಮನೆಗಳ ಮೇಲೆ ಇದ್ದಕಿದ್ದ ಹಾಗೆ ಯಾಕೆ IT ರೇಡ್ ಆಗಿದೆ ಗೊತ್ತ? ಇಲ್ಲಿದೆ ನಿಜವಾದ ಕಾರಣ
ನಮ್ಮ ಶಿವಣ್ಣ ಅವರು ನಿಮಗೆಲ್ಲ ಗೊತ್ತಿರೋ ಹಾಗೆ ಕನ್ನಡದಲ್ಲಿ ಬಹಳ ಬ್ಯುಸಿ ಇರುವ ನಟ. ಒಂದು ವರ್ಷಕ್ಕೆ ಸುಮಾರು 4 ರಿಂದ 5 ಚಿತ್ರಗಳಲ್ಲಿ ಶಿವಣ್ಣ ನಟಿಸುತ್ತಾರೆ. ಇದಲ್ಲದೆ ಶಿವಣ್ಣ ಅವರು ನಟಿಸುವ 90 % ಚಿತ್ರಗಳು ಸೂಪರ್ ಹಿಟ್ ಆಗಿರುತ್ತದೆ. ನಿರ್ಮಾಪಕರ ಪಾಲಿಗೆ ನಮ್ಮ ಶಿವಣ್ಣ ಅವರು ಒಂದು ರೀತಿಯ ಗೆಲ್ಲುವ ಕುದುರೆ ಎಂದೇ ಹೇಳಬಹುದು. ಕಳೆದ ವರ್ಷ ಶಿವಣ್ಣ ನಟಿಸಿದ್ದ ಟಗರು, ಮಫ್ಟಿ, ದಿ ವಿಲನ್ ಚಿತ್ರಗಳು ಸೂಪರ್ ಹಿಟ್ ಆಗಿದ್ದವು. ಇದೆ ಕಾರಣಕ್ಕಾಗಿ IT ಅಧಿಕಾರಿಗಳು ಶಿವಣ್ಣ ಅವರ ಮನೆಗೆ ಧಾಳಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ನಮ್ಮ ರಾಕಿಂಗ್ ಸ್ಟಾರ್ ಯಶ್ ಅವರು ಇತ್ತೀಚಿಗೆ ಅಷ್ಟೇ ಕನ್ನಡದ ಬಹು ದೊಡ್ಡ ಚಿತ್ರವನ್ನು ಮಾಡಿ ಇಡೀ ದೇಶದ ಗಮನ ಸೆಳೆದಿದ್ದರು. ಬಲ್ಲ ಮೂಲಗಳ ಪ್ರಕಾರ KGF ಚಿತ್ರ ಬರೋಬ್ಬರಿ 150 ಕೋಟಿಗೂ ಹೆಚ್ಚು ಗಳಿಕೆಯನ್ನು ಸಂಪಾದಿಸಿದೆ. ಇದಲ್ಲದೆ ಸದ್ಯ ರಾಕಿಂಗ್ ಸ್ಟಾರ್ ಯಶ್ ಅವರ ಕಾಲ್ ಶೀಟ್ 2022 ತನಕ ಫುಲ್ ಆಗಿದೆ. ಯಶ್ ಅಭಿನಯದ ಬಹುತೇಕ ಎಲ್ಲಾ ಚಿತ್ರಗಳು ಸೂಪರ್ ಹಿಟ್! ಇಂದು IT ಅಧಿಕಾರಿಗಳು ರಾಧಿಕಾ ಅವರ ತಂದೆ ತಾಯಿ ಇರುವ ಮನೆಯನ್ನು ಕೂಡ ಭೇಟಿ ಮಾಡಿ ಅಸ್ತಿ ಪತ್ರಗಳನ್ನು, ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಯಶ್ ಅವರು ಬಹು ಬೇಡಿಕೆಯ ನಟ ಎಂದು ತಿಳಿದು IT ಅಧಿಕಾರಿಗಳು ಧಾಳಿ ಮಾಡಿದ್ದಾರೆ.
ಇನ್ನು ನಮ್ಮ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಮುಟ್ಟಿದ್ದೆಲ್ಲ ಚಿನ್ನ! ಇವರು ಮಾಡಿರುವ ಎಲ್ಲಾ ಚಿತ್ರಗಳು ಕೂಡ ಸೂಪರ್ ಹಿಟ್! ಪುನೀತ್ ರಾಜಕುಮಾರ್ ಅವರು ವರ್ಷಕ್ಕೆ ಒಂದೇ ಸಿನಿಮಾ ಮಾಡುವದಾದರೂ, ಅಪ್ಪು ಅವರು ಸುಮಾರು 8 ರಿಂದ 10 ಬ್ರಾಂಡ್ ಗಳಿಗೆ ಬ್ರಾಂಡ್ ambassador ಆಗಿದ್ದಾರೆ. ಇನ್ನೂ ನಮ್ಮ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್. ಕಿಚ್ಚ ಸುದೀಪ್ ವರ್ಷಕ್ಕೆ ಎರಡೇ ಸಿನಿಮಾ ಮಾಡಿದರೂ, ಎರಡು ಪಕ್ಕಾ ಬ್ಲಾಕ್ ಬಸ್ಟರ್ ಚಿತ್ರಗಳು ಆಗುತ್ತವೆ. ಕಿಚ್ಚ ಸುದೀಪ್ ಅವರ ಕಾಲ್ ಶೀಟ್ ಗಾಗಿ ನಿರ್ಮಾಪಕರು ಕ್ಯೂ ನಲ್ಲಿ ನಿಲ್ಲುತ್ತಾರೆ. ಇದನೆಲ್ಲ ನೋಡಿದ IT ಅಧಿಕಾರಿಗಳು ಈ 4 ಜನ ಕನ್ನಡ ಸೂಪರ್ ಸ್ಟಾರ್ಸ್ ಗಳ ಮನೆಗೆ IT ರೇಡ್ ಮಾಡಿ ಧಾಳಿ ಮಾಡಿದ್ದಾರೆ. ಇದರ ಬಗ್ಗೆ ಕಿಚ್ಚ ಸುದೀಪ್ ಏನ್ ಹೇಳಿದ್ದಾರೆ, ವಿಡಿಯೋ ನೋಡಿ

Trending

To Top