Film News

ಜಗತ್ತಿನ ಅತೀ ಎತ್ತರದ ಕಟ್ಟಡದ ಮೇಲೆ ಹಾರಾಡಿದ ಕನ್ನಡ ಧ್ವಜ: ಬಿಡುಗಡೆಯಾಯ್ತು ವಿಕ್ರಾಂತ್ ರೋಣ ಟೀಸರ್………

ಬೆಂಗಳೂರು: ಜಗತ್ತಿನ ಅತೀ ಎತ್ತರದ ಕಟ್ಟಡ ಎಂದು ಪ್ರಸಿದ್ದಿ ಪಡೆದಿರುವ ದುಬೈನಲ್ಲಿರುವ ಬುರ್ಜಾ ಖಲೀಫ ಕಟ್ಟಡದ ಮೇಲೆ ಕನ್ನಡದ ಧ್ವಜ ಹಾಗೂ ವಿಕ್ರಾಂತ್ ರೋಣ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಎಲ್ಲಾ ಕನ್ನಡಿಗರು ಸೇರಿದಂತೆ ಸಿನಿಮಾರಂಗ ಸಂಭ್ರಮಿಸಿದೆ.

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಚಿತ್ರದ ಟೀಸರ್ ಎತ್ತರದ ಕಟ್ಟಡ ದುಬೈನ ಬುರ್ಜಾ ಖಲೀಫಾ ಕಟ್ಟಡದ ಮೇಲೆ ಅನಾವರಣಗೊಂಡಿದೆ. ಜೊತೆಗೆ ಕಿಚ್ಚ ಸುದೀಪ್ ಚಿತ್ರರಂಗಕ್ಕೆ ಕಾಲಿಟ್ಟು ೨೫ ವರ್ಷಗಳು ಪೂರೈಸಿರುವ ಹಿನ್ನೆಲೆಯಲ್ಲಿ ೨೫ ವರ್ಷಗಳ ಸಿನಿ ಜರ್ನಿ ಸಹ ಅನಾವರಣಗೊಂಡಿದೆ.

ಇನ್ನೂ ಈ ಭವ್ಯ ಸಮಾರಂಭದಲ್ಲಿ ಭಾಗವಹಿಸುವ ಹಿನ್ನೆಲೆಯಲ್ಲಿ ಕಿಚ್ಚ ಸುದೀಪ್ ರವರು ೨ ದಿನಗಳ ಹಿಂದೆಯೇ ದುಬೈಗೆ ತೆರಳಿದ್ದರು. ಸುದೀಪ್ ರವರ ಪತ್ನಿ ಪ್ರಿಯಾ, ಮಗಳು ಸಾನ್ವಿ, ನಿರೂಪ್ ಭಂಡಾರಿ, ನಿರ್ಮಾಪಕ ಜಾಕ್ ಮಂಜು ಕುಟುಂಬಸ್ಥರು, ಚಿತ್ರತಂಡದವರು ಸೇರಿದಂತೆ ಅನೇಕರು ಈ ಸಮಾರಂಭದಲ್ಲಿ ಭಾಗಿಯಾಗಿದ್ದರು. ಸುದೀಪ್ ರವರು ಸಿನೆಮಾ ರಂಗಕ್ಕೆ ಎಂಟ್ರಿ ಕೊಟ್ಟಾಗಿನಿಂದ ಇಲ್ಲಿಯವರೆಗಿನ ಚಿತ್ರಗಳಲ್ಲಿ ನಟಿಸಿದ ಪಾತ್ರಗಳನ್ನು ಬುರ್ಜಾ ಖಲೀಫ ಕಟ್ಟಡದ ಮೇಲೆ ಪ್ರದರ್ಶನ ಮಾಡಲಾಯಿತು. ಮತ್ತೊಂದು ಪ್ರಮುಖ ವಿಚಾರವೆಂದರೇ ಈ ಕಟ್ಟಡದ ಮೇಲೆ ಕರ್ನಾಟಕದ ಭಾವುಟ ಸಹ ಪ್ರದರ್ಶನ ಮಾಡಲಾಯಿತು. ಈ ಸಂದರ್ಭದಲ್ಲಿ ಅಪಾರ ಸಂಖ್ಯೆ ಕನ್ನಡಾಭಿಮಾನಿಗಳು ಕಿಚ್ಚ ಕಿಚ್ಚ ಎಂದು ಜೋರಾಗಿ ಕೂಗೂತ್ತಾ ಜೈಕಾರಾಗಳನ್ನು ಹಾಕಿದರು.

ಇನ್ನೂ ಈ ಕುರಿತು ಕಿಚ್ಚ ಸುದೀಪ್ ಮಾತನಾಡಿ ಎಲ್ಲರಿಗೂ ನಮಸ್ಕಾರ, ಬುರ್ಜಾ ಖಲೀಫ ಮೇಲೆ ಕರ್ನಾಟಕದ ಬಾವುಟ ಹಾರಾಡಿದ್ದು, ತುಂಬಾ ಖುಷಿಯ ಸಂಗತಿಯಾಗಿದೆ. ವಿಕ್ರಾಂತ್ ರೋಣ ಚಿತ್ರದ ಸಿನೆಮಾ ಕೆಲಸ ಮುಗಿದ ಕೂಡಲೇ ಚಿತ್ರದ ಬಿಡುಗಡೆ ಕುರಿತು ಆಲೋಚನೆ ಮಾಡಲಿದ್ದೇವೆ. ಇಂದು ನಾನು ನಿಜಕ್ಕೂ ಪುಣ್ಯ ಮಾಡಿದ್ದೇನೆ ಎಂಬ ಭಾವನೆ ನನ್ನಲ್ಲಿ ಬಂದಿದೆ. ಜೊತೆಗೆ ಚಿತ್ರರಂಗದಲ್ಲಿದ್ದು ಪೂರ್ಣಗೊಂಡಿದ್ದೇನೆ ಎಂಬ ಭಾವನೆ ಸಹ ಮೂಡುತ್ತಿದೆ. ಎಲ್ಲಕ್ಕಿಂತ ಮುಖ್ಯವಾಗಿ ಬುರ್ಜಾ ಖಲೀಫ ಕಟ್ಟಡದ ಮೇಲೆ ಕನ್ನಡ ಭಾವುಟ ಹಾರಾಡಿದ್ದು, ನನ್ನ ಜೀವನದಲ್ಲಿ ಮರೆಯಲಾಗದ ಕ್ಷಣ ಎಂದು ಸಂತಸ ಹಂಚಿಕೊಂಡಿದ್ದಾರೆ.

ಇನ್ನೂ ನಿರ್ದೇಶಕ ಅನೂಪ್ ಭಂಡಾರಿ ಸಂತಸವನ್ನು ವ್ಯಕ್ತಪಡಿಸುತ್ತಾ, ನಾನು ಕಿಚ್ಚ ಸುದೀಪ್ ರವರ ೨೫ ವರ್ಷ ಪೂರೈಸಿದ ಸಂಭ್ರಮದಲ್ಲಿ ಭಾಗಿಯಾಗಿದ್ದು ತುಂಬಾ ಖುಷಿಯಾಗಿದೆ. ಜೊತೆಗೆ ಸುದೀಪ್ ರವರ ಜೊತೆ ಕೆಲಸ ಮಾಡುತ್ತಿರುವುದು ಮತಷ್ಟು ಖುಷಿಯ ವಿಚಾರವಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

Trending

To Top